ವಿಶ್ವಸಂಸ್ಥೆ: ಉಕ್ರೇನ್ ರಷ್ಯಾ ಯುದ್ಧಕ್ಕೆ ಚೀನಾ ಹಾಗೂ ಭಾರತ ಪ್ರಾಥಮಿಕ ಹಣಕಾಸು ನೆರವನ್ನು ಒದಗಿಸುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದನ್ನು ಉಲ್ಲೇಖಿಸಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಗಳವಾರ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.
.ಭಾರತ–ಪಾಕ್ ಸೇರಿ 7 ಯುದ್ಧ ನಿಲ್ಲಿಸಿದ್ದೇನೆ: ನನಗೆ 'ನೊಬೆಲ್' ಸಿಗಬೇಕು–ಟ್ರಂಪ್.
‘ರಷ್ಯಾದಿಂದ ತೈಲ ಖರೀದಿ ಮಾಡುವ ಮೂಲಕ ಭಾರತ ಹಾಗೂ ಚೀನಾ ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧಕ್ಕೆ ಪ್ರಾಥಮಿಕವಾಗಿ ಹಣಕಾಸು ಸಹಾಯ ಮಾಡುತ್ತಿವೆ’ ಎಂದು ಅವರು ಹೇಳಿದ್ದಾರೆ.

ನ್ಯಾಟೊ ರಾಷ್ಟ್ರಗಳು ಕೂಡ ರಷ್ಯಾದ ಇಂಧನ ಹಾಗೂ ಇಂಧನ ಉತ್ಪನ್ನಗಳ ಖರೀದಿಯನ್ನು ನಿಲ್ಲಿಸದೇ ಇರುವುದು ಕೂಡ ಅಕ್ಷಮ್ಯ ಎಂದು ಟ್ರಂಪ್ ಇದೇ ವೇಳೆ ಹೇಳಿದ್ದಾರೆ.

‘ಅದರ ಬಗ್ಗೆ ಯೋಚನೆ ಮಾಡಿ. ಅವರು ತಮ್ಮ ವಿರುದ್ಧದ ಯುದ್ಧಕ್ಕೆ ಹಣಕಾಸಿನ ನೆರವು ನೀಡುತ್ತಿದ್ದಾರೆ. ಯುದ್ಧವನ್ನು ಕೊನೆಗೊಳಿಸಲು ರಷ್ಯಾ ಮುಂದೆ ಬರುತ್ತಿಲ್ಲ. ಅಮೆರಿಕವು ಭಾರಿ ಪ್ರಮಾಣದ ತೆರಿಗೆ ಹೇರುವ ಮೂಲಕ ರಕ್ತಪಾತವನ್ನು ಕೊನೆಗೊಳಿಸಲು ಸಜ್ಜಾಗಿದೆ. ಶೀಘ್ರವೇ ಅದು ಬರಲಿದೆ’ ಎಂದು ಹೇಳಿದ್ದಾರೆ.
.H-1B Visa | ಅಸ್ತಿತ್ವದಲ್ಲಿರುವ ವೀಸಾಗಳಿಗೆ ಪರಿಣಾಮ ಬೀರದು: ಟ್ರಂಪ್ ಆಡಳಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.