ವಿಶ್ವ ಸಂಸ್ಥೆ : ಗಾಜಾದಲ್ಲಿ ಶಾಂತಿ ಸ್ಥಾಪನೆಗಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರೂಪಿಸಿರುವ ‘ಶಾಂತಿ ಯೋಜನೆ’ಯನ್ನು ಅನುಮೋದಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಸೋಮವಾರ ಕರಡು ನಿರ್ಣಯವನ್ನು ಅಂಗೀಕರಿಸಿದೆ. ಟ್ರಂಪ್ ಅವರು ಈ ನಿರ್ಧಾರವನ್ನು ‘ಐತಿಹಾಸಿಕ’ ಎಂದು ಬಣ್ಣಿಸಿದ್ದಾರೆ.

15 ದೇಶಗಳು ಇರುವ ಭದ್ರತಾ ಮಂಡಳಿಯಲ್ಲಿ 13 ದೇಶಗಳು ಅಮೆರಿಕದ ಯೋಜನೆಗೆ ಸಹಮತ ವ್ಯಕ್ತಪಡಿಸಿ ಮತ ಹಾಕಿವೆ. ಮತದಾನದ ವೇಳೆ ಚೀನಾ ಮತ್ತು ರಷ್ಯಾವು ಗೈರಾಗಿದ್ದವು. ‘ಗಾಜಾ ಸಂಘರ್ಷ ಅಂತ್ಯಕ್ಕೆ ಸಮಗ್ರ ಯೋಜನೆ’ಯನ್ನು ಟ್ರಂಪ್ ಅವರು ಸೆ.29ರಂದು ಘೋಷಣೆ ಮಾಡಿದ್ದರು.

ನೆರೆಯ ದೇಶಕ್ಕೆ ಬೆದರಿಕೆ ಒಡ್ಡದಂತೆ ಗಾಜಾದಲ್ಲಿ ಭಯ ಮುಕ್ತ, ಶಾಂತಿ ವಾತಾವರಣ ಸ್ಥಾಪನೆ. ಇಲ್ಲಿನ ಜನರಿಗೆ ಅನುಕೂಲವಾಗುವಂತೆ ಗಾಜಾದ ಮರು ನಿರ್ಮಾಣ. ಅಂತರರಾಷ್ಟ್ರೀಯ ಶಾಂತಿ ಪಾಲನಾ ಪಡೆ ನಿಯೋಜನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಟ್ರಂಪ್ ತಮ್ಮ ಯೋಜನೆಯಲ್ಲಿ ಪರಿಹಾರ ಸೂಚಿಸಿದ್ದಾರೆ.

ಶಾಂತಿ ಮಂಡಳಿ ಸ್ಥಾಪನೆಗೂ ಭದ್ರತಾ ಮಂಡಳಿಯಲ್ಲಿ ಒಪ್ಪಿಗೆ ದೊರೆತಿದೆ. ‘ಈ ಮಂಡಳಿಯ ಅಧ್ಯಕ್ಷತೆಯನ್ನು ನಾನೇ ವಹಿಸುತ್ತೇನೆ’ ಎಂದು ಟ್ರಂಪ್ ಹೇಳಿದ್ದಾರೆ.

‘ಯೋಜನೆಯನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸದೆಯೇ ಅಂಗೀಕಾರ ಮಾಡಲಾಗಿದೆ. ಗಾಜಾವು ಶಾಂತಿ ಮಂಡಳಿ ಮತ್ತು ಶಾಂತಿ ಪಾಲನಾ ಪಡೆಯ ಕರುಣೆಯಲ್ಲಿ ಇರುವಂತೆ ಭದ್ರತಾ ಮಂಡಳಿಯು ಮಾಡಿದೆ. ಮಂಡಳಿ ಹಾಗೂ ಪಡೆಗಳು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಲಿವೆ ಎಂಬುದು ನಮಗಿನ್ನೂ ತಿಳಿದಿಲ್ಲ’ ಎಂದು ರಷ್ಯಾ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.