ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಅಧಿವೇಶನದ ಉನ್ನತ ಮಟ್ಟದ ಸಾಮಾನ್ಯ ಚರ್ಚೆಯಲ್ಲಿ (ಯುಎನ್ಜಿಎ) ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಇರುವುದಿಲ್ಲ. ಭಾಷಣಗಾರರ ತಾತ್ಕಾಲಿಕ ಪರಿಷ್ಕೃತ ಪಟ್ಟಿ ಪ್ರಕಟಿಸಲಾಗಿದ್ದು, ಅದರಲ್ಲಿ ಭಾರತದ ಪ್ರಧಾನಿಯ ಹೆಸರಿಲ್ಲ. ಭಾರತದಿಂದ ಒಬ್ಬ ‘ಸಚಿವ’ ಪ್ರತಿನಿಧಿಸುತ್ತಾರೆ ಎಂಬ ಮಾಹಿತಿ ಪಟ್ಟಿಯಲ್ಲಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನ ಇದೇ 9ರಿಂದ ಆರಂಭವಾಗಲಿದೆ. ಇದೇ 23ರಿಂದ ಇದೇ 29ರವರೆಗೆ ಉನ್ನತ ಮಟ್ಟದ ಸಾಮಾನ್ಯ ಚರ್ಚೆ ನಡೆಯಲಿದೆ. ಈ ಅಧಿವೇಶನದಲ್ಲಿ ವಾಡಿಕೆಯಂತೆ ಮೊದಲು ಮಾತನಾಡುವ ಅವಕಾಶ ಬ್ರೆಜಿಲ್ ನಂತರ ಅಮೆರಿಕಕ್ಕೆ ಇದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಯುಎನ್ಜಿಎ’ ವೇದಿಕೆಯಲ್ಲಿ ವಿಶ್ವ ಮುಖಂಡರನ್ನು ಉದ್ದೇಶಿಸಿ ಇದೇ 23ರಂದು ಭಾಷಣ ಮಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಬದಲು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಇದೇ 27ರಂದು ಭಾಷಣ ಮಾಡಲಿದ್ದಾರೆ. ಇಸ್ರೇಲ್, ಚೀನಾ, ಪಾಕಿಸ್ತಾನ, ಬಾಂಗ್ಲಾದೇಶಕ್ಕೆ ‘ಯುಎನ್ಜಿಎ’ ವೇದಿಕೆಯಲ್ಲಿ ಮಾತನಾಡಲು ಇದೇ 26ರಂದು ಅವಕಾಶ ನೀಡಲಾಗಿದೆ.

ಇಸ್ರೇಲ್–ಹಮಾಸ್ ಸಂಘರ್ಷ, ರಷ್ಯಾ–ಉಕ್ರೇನ್ ಯುದ್ಧದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.