ವಾಷಿಂಗ್ಟನ್: ಸುಂಕ ಏರಿಕೆಯಿಂದ ಅಮೆರಿಕವು ಇನ್ನಷ್ಟು ಶ್ರೀಮಂತವಾಗುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ರಿಪಬ್ಲಿಕನ್ ಪಕ್ಷದ ಸಂಸದರ ಸಭೆಯಲ್ಲಿ ಮಾತನಾಡಿರುವ ಟ್ರಂಪ್, ಭಾರತದೊಂದಿಗಿನ ರಕ್ಷಣಾ ವ್ಯವಹಾರ, ಸುಂಕ ಏರಿಕೆ ಕುರಿತಂತೆ ಮಾತನಾಡಿದ್ದಾರೆ.

ಸುಂಕ ಏರಿಕೆಯಿಂದ ದೇಶದ ಆರ್ಥಿಕತೆಯ ಮೇಲೆ ಆಗುತ್ತಿರುವ ಪರಿಣಾಮಗಳನ್ನು ಉಲ್ಲೇಖಿಸುತ್ತಾ, 'ಸುಂಕ ಏರಿಕೆಯಿಂದ ನಾವೀಗ ಇನ್ನಷ್ಟು ಶ್ರೀಮಂತರಾಗುತ್ತಿದ್ದೇವೆ. ಎಲ್ಲರೂ ಅದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ. ನಮ್ಮ ದೇಶಕ್ಕೆ ಸುಮಾರು 650 ಶತಕೋಟಿ ಡಾಲರ್ (ಅಂದಾಜು ₹ 58 ಲಕ್ಷ ಕೋಟಿ) ಸುಂಕದಿಂದಲೇ ಬರಲಿದೆ' ಎಂದಿದ್ದಾರೆ.

ಇದೇ ವೇಳೆ ಅವರು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಚೀನಾದ ಷಿ ಜಿನ್ ಪಿಂಗ್ ಹೊರತುಪಡಿಸಿ ಜಗತ್ತಿನ ಉಳಿದ ಎಲ್ಲ ನಾಯಕರೂ ನನ್ನನ್ನು 'ಸರ್' ಎಂದೇ ಸಂಬೋಧಿಸುತ್ತಾರೆ ಎಂದೂ ಹೇಳಿಕೊಂಡಿದ್ದಾರೆ.

ಸುಂಕು ಏರಿಸುವ ಬೆದರಿಕೆ
ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಕಡಿತಗೊಳಿಸಬೇಕು ಎಂದು ಭಾರತದ ಮೇಲೆ ಒತ್ತಡ ಹೇರುತ್ತಿರುವ ಟ್ರಂಪ್, ಆಗ್ರಹಕ್ಕೆ ಮಣಿಯದಿದ್ದರೆ ಸುಂಕವನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಇತ್ತೀಚೆಗೆ ಬೆದರಿಕೆ ಹಾಕಿದ್ದರು.

ಭಾರತದೊಂದಿಗಿನ ತೈಲ ವ್ಯವಹಾರದಿಂದ ಬಂದ ಹಣವನ್ನು ಉಕ್ರೇನ್ ವಿರುದ್ಧದ ಯುದ್ಧಕ್ಕೆ ರಷ್ಯಾ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಟ್ರಂಪ್, ಭಾರತವು ಯುದ್ಧಕ್ಕೆ ಸಹಕಾರ ನೀಡಬಾರದರು ಎಂದು ಒತ್ತಾಯಿಸಿದ್ದರು.

ಅಮೆರಿಕ ಅಧ್ಯಕ್ಷರ ವಿಮಾನ ಏರ್ಫೋರ್ಸ್ ಒನ್ನಲ್ಲಿ ವರದಿಗಾರರ ಜೊತೆ ಮಾತನಾಡಿದ್ದ ಅವರು, 'ಪ್ರಧಾನಿ ಮೋದಿ ಅವರು ಒಳ್ಳೆಯ ಮನುಷ್ಯ. ನಾನು ಸಂತುಷ್ಟಿಯಿಂದ ಇಲ್ಲ ಎಂಬುದು ಅವರಿಗೆ ತಿಳಿದಿದೆ. ಹಾಗೆಯೇ ನನ್ನನ್ನು ಸಂತುಷ್ಟಗೊಳಿಸುವುದು ಬಹಳ ಮುಖ್ಯ' ಎಂದಿದ್ದರು.

ಭಾರತದಿಂದ ಆಮದಾಗುವ ಸರಕುಗಳ ಮೇಲೆ ಅಮೆರಿಕವು ಇತ್ತೀಚೆಗೆ ಶೇ 50ರಷ್ಟು ಸುಂಕ ಹೇರಿದೆ.
.'ಸರ್, ನಿಮ್ಮನ್ನು ಭೇಟಿ ಮಾಡಬಹುದೇ?' ಎಂದು ಪ್ರಧಾನಿ ಮೋದಿ ಕೇಳಿದ್ದಾರೆ: ಟ್ರಂಪ್.ರಷ್ಯಾದಿಂದ ತೈಲ ಆಮದು: ಭಾರತದ ಮೇಲೆ ಸುಂಕ ಏರಿಸುವ ಬೆದರಿಕೆ ಹಾಕಿದ ಟ್ರಂಪ್