ನ್ಯೂಯಾರ್ಕ್ / ವಾಷಿಂಗ್ಟನ್ : ರಷ್ಯಾದಿಂದ ಕಚ್ಚಾತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಸುಂಕ ಹೇರುವಂತೆ ಜಿ7 ರಾಷ್ಟ್ರಗಳನ್ನು ಅಮೆರಿಕ ಒತ್ತಾಯಿಸಿದೆ.

ಸಾಮೂಹಿಕ ಪ್ರಯತ್ನದಿಂದ ಮಾತ್ರ ‘ವಿವೇಚನಾರಹಿತ ಹತ್ಯೆಯನ್ನು ನಿಲ್ಲಿಸುವಂತೆ’ ರಷ್ಯಾದ ಮೇಲೆ ಒತ್ತಡ ಹೇರಲು ಸಾಧ್ಯ ಎಂದು ಅದು ಹೇಳಿದೆ.

ಅಮೆರಿಕ ರಕ್ಷಣಾ ಖಜಾಂಚಿ ಸ್ಕಾಟ್ ಬೆಸ್ಸೆಟ್ ಮತ್ತು ಅಮೆರಿಕ ವಾಣಿಜ್ಯ ಪ್ರತಿನಿಧಿ ರಾಯಭಾರಿ ಜೇಮಿಸನ್ ಗ್ರೀರ್ ಅವರು ಜಿ7 ಅರ್ಥ ಸಚಿವರೊಂದಿಗೆ ಶುಕ್ರವಾರ ಈ ಸಂಬಂಧ ಮಾತುಕತೆ ನಡೆಸಿದರು.

ಅಮೆರಿಕವು ಯಾವುದೇ ದೇಶದ ಹೆಸರನ್ನು ಪ್ರಸ್ತಾಪಿಸಿಲ್ಲ. ಆದರೂ ಭಾರತ ಮತ್ತು ಚೀನಾ ಪದೇ ಪದೇ ದೂರುತ್ತಿದೆ.

ಜಿ7 ಒಕ್ಕೂಟವು ಅಮೆರಿಕ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಬ್ರಿಟನ್ ದೇಶಗಳನ್ನು ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.