ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

9/11 ದಾಳಿಗೆ 20 ವರ್ಷ: ನೋವು, ನೆನಪುಗಳಲ್ಲಿ ಮುಳುಗಿದ ನ್ಯೂಯಾರ್ಕ್‌ನ ದೃಶ್ಯಗಳಿವು

ಅಮೆರಿಕದ ನ್ಯೂಯಾರ್ಕ್‌ನ ವಿಶ್ವ ವ್ಯಾಪಾರ ಕೇಂದ್ರದ (ವರ್ಲ್ಡ್‌ ಟ್ರೇಡ್ ಸೆಂಟರ್‌) ಅವಳಿ ಗೋಪುರಗಳ ಮೇಲೆ ದಾಳಿ ನಡೆದು ಇಲ್ಲಿಗೆ 20 ವರ್ಷ. 2001ರ ಸೆಪ್ಟೆಂಬರ್ 11ರಂದು ಅಲ್‌ಖೈದಾ ಉಗ್ರರು ಅವಳಿ ಗೋಪುರಗಳಿಗೆ ವಿಮಾನ ನುಗ್ಗಿಸಿದ್ದರು.ಘಟನೆಯಲ್ಲಿ ಸುಮಾರು 3 ಸಾವಿರ ಮಂದಿ ಮೃತಪಟ್ಟು, 6 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. 2001ರ ಸೆಪ್ಟೆಂಬರ್‌ 11ರ ಬೆಳಿಗ್ಗೆ 8.46ರ (ಸ್ಥಳೀಯ ಕಾಲಮಾನ) ವೇಳೆಗೆ ಅವಳಿ ಗೋಪುರಗಳ ಮೇಲೆ ದಾಳಿ ನಡೆದಿತ್ತು. 102 ನಿಮಿಷಗಳ ಕಾಲ ಹೊತ್ತಿ ಉರಿದ ಉತ್ತರ ಭಾಗದ ಗೋಪುರ (ನಾರ್ತ್‌ ಟವರ್‌) ಬೆಳಿಗ್ಗೆ 10.28ಕ್ಕೆ ಕುಸಿದಿತ್ತು.20 ವರ್ಷಗಳು ಕಳೆದರೂ ನ್ಯೂಯಾರ್ಕ್‌ ನಿವಾಸಿಗಳ ಮನದಲ್ಲಿ ಈ ಕರಾಳ ಘಟನೆಯ ನೆನಪು ಹಸಿಯಾಗಿಯೇ ಇದೆ. 9/11 ದಾಳಿಯ 20 ನೇ ವಾರ್ಷಿಕ ದಿನದಂದು ನ್ಯೂಯಾರ್ಕ್‌ನಲ್ಲಿ ಕಂಡು ಬಂದ ದೃಶ್ಯಗಳಿವು.
Published : 11 ಸೆಪ್ಟೆಂಬರ್ 2021, 3:18 IST
ಫಾಲೋ ಮಾಡಿ
Comments
9/11 ದಾಳಿ ಸ್ಮರಣಾರ್ಥ ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ವ್ಯಾಪಾರಿಗಳು ಮೌನಾಚರಣೆಯಲ್ಲಿ ತೊಡಗಿರುವುದು
9/11 ದಾಳಿ ಸ್ಮರಣಾರ್ಥ ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ವ್ಯಾಪಾರಿಗಳು ಮೌನಾಚರಣೆಯಲ್ಲಿ ತೊಡಗಿರುವುದು
ADVERTISEMENT
9/11 ದಾಳಿಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿರುವ ಯುನೈಟೆಡ್ ಮತ್ತು ಅಮೆರಿಕನ್‌ ಏರ್‌ಲೈನ್ಸ್‌ನ ಪೈಲಟ್‌ಗಳು
9/11 ದಾಳಿಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿರುವ ಯುನೈಟೆಡ್ ಮತ್ತು ಅಮೆರಿಕನ್‌ ಏರ್‌ಲೈನ್ಸ್‌ನ ಪೈಲಟ್‌ಗಳು
9/11 ದಾಳಿಯ ನೆನಪಿಗಾಗಿ ಚಿಮ್ಮುತ್ತಿರುವ ವರ್ಣರಂಜಿತ ಕಾರಂಜಿಗಳು
9/11 ದಾಳಿಯ ನೆನಪಿಗಾಗಿ ಚಿಮ್ಮುತ್ತಿರುವ ವರ್ಣರಂಜಿತ ಕಾರಂಜಿಗಳು
9/11 ಘಟನೆಯ ನೆನಪಿಗಾಗಿ ವಾಲ್‌ಸ್ಟ್ರೀಟ್‌ನಲ್ಲಿರುವ ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್‌ನ ಮುಂಭಾಗದಲ್ಲಿ ಕಾಣಿಸಿಕೊಂಡ ಅಮೆರಿಕದ ಧ್ವಜ
9/11 ಘಟನೆಯ ನೆನಪಿಗಾಗಿ ವಾಲ್‌ಸ್ಟ್ರೀಟ್‌ನಲ್ಲಿರುವ ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್‌ನ ಮುಂಭಾಗದಲ್ಲಿ ಕಾಣಿಸಿಕೊಂಡ ಅಮೆರಿಕದ ಧ್ವಜ
9/11 ಸಂತ್ರಸ್ತರ ಹೆಸರುಗಳಿರುವ ಚಿತ್ರಗಳನ್ನು ಮೊಬೈಲ್‌ಗಳಲ್ಲಿ ಸೆರೆ ಹಿಡಿಯುತ್ತಿರುವ ನಾಗರಿಕರು
9/11 ಸಂತ್ರಸ್ತರ ಹೆಸರುಗಳಿರುವ ಚಿತ್ರಗಳನ್ನು ಮೊಬೈಲ್‌ಗಳಲ್ಲಿ ಸೆರೆ ಹಿಡಿಯುತ್ತಿರುವ ನಾಗರಿಕರು
9/11 ದಾಳಿಯ ಸ್ಮರಣಾರ್ಥ ವಿಶ್ವ ವ್ಯಾಪಾರ ಕೇಂದ್ರದ ಸ್ಥಳದಲ್ಲಿ ನಿರ್ಮಿಸಿರುವ ಸ್ಮಾರಕದ ಮುಂದೆ ಕುಳಿತು ಪ್ರೀತಿಪಾತ್ರರನ್ನು ನೆನೆಯುತ್ತಿರುವ ಯುವತಿ
9/11 ದಾಳಿಯ ಸ್ಮರಣಾರ್ಥ ವಿಶ್ವ ವ್ಯಾಪಾರ ಕೇಂದ್ರದ ಸ್ಥಳದಲ್ಲಿ ನಿರ್ಮಿಸಿರುವ ಸ್ಮಾರಕದ ಮುಂದೆ ಕುಳಿತು ಪ್ರೀತಿಪಾತ್ರರನ್ನು ನೆನೆಯುತ್ತಿರುವ ಯುವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT