ಕರಾಕಸ್: ಅಮೆರಿಕದಿಂದ ಸೆರೆ ಹಿಡಿಯಲ್ಪಟ್ಟ ವೆನೆಜುವೆಲಾದ ಪದಚ್ಯುತ ಅಧ್ಯಕ್ಷ ನಿಕೊಲಸ್ ಮಡೂರೊ ಅವರ ಪುತ್ರ, ಸಂಸದ ನಿಕೊಲಸ್ ಮಡೂರೊ ಗೆರ್ರಾ ಅವರು ರಾಷ್ಟ್ರೀಯ ಸದನವನ್ನು ಉದ್ದೇಶಿಸಿ ಮಾತನಾಡುವಾಗ ಭಾವುಕರಾದರು.

ಕರಾಕಸ್ನಲ್ಲಿ ನಡೆದ ರಾಷ್ಟ್ರೀಯ ಅಸೆಂಬ್ಲಿ ಅಧಿವೇಶನದ 2026ರಿಂದ 2031ರ ಅವಧಿಗೆ ಚುನಾಯಿತರಾದ ಸಂಸದ ಗೆರ್ರಾ ಪ್ರಮಾಣವಚನ ಸ್ವೀಕರಿಸಿದರು.
.ವೆನಿಜುವೆಲಾದಿಂದ ಅಮೆರಿಕಕ್ಕೆ 30-50 ಮಿಲಿಯನ್ ಬ್ಯಾರೆಲ್ ತೈಲ: ಟ್ರಂಪ್ ಘೋಷಣೆ.ಗ್ರೀನ್ಲ್ಯಾಂಡ್ to ಕ್ಯೂಬಾ: ವೆನೆಜುವೆಲಾ ಆಯ್ತು, ಟ್ರಂಪ್ ಕಣ್ಣು ಇನ್ಯಾರ ಮೇಲೆ?.
ಈ ಸಂದರ್ಭದಲ್ಲಿ ವೆನೆಜುವೆಲಾ ನಾಯಕತ್ವಕ್ಕೆ ಸಂಪೂರ್ಣ ಬೆಂಬಲವನ್ನು ಘೋಷಿಸಿದರು. ಇದೇ ಸಂದರ್ಭದಲ್ಲಿ ಮಡೂರೊ ದಂಪತಿಯ ಬಿಡುಗಡೆಗೆ ಆಗ್ರಹಿಸಿದ್ದರಲ್ಲದೆ ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರಿಗೆ ಅಚಲ ಬೆಂಬಲವನ್ನು ಘೋಷಿಸಿದರು.

ಮಡೂರೊ ಸೆರೆ ಹಿಡಿದಿರುವ ಅಮೆರಿಕದ ಕೃತ್ಯವನ್ನು ಖಂಡಿಸಿರುವ ಗೆರ್ರಾ, ಅಂತರರಾಷ್ಟ್ರೀಯ ಸಮುದಾಯದ ಬೆಂಬಲ ಹಾಗೂ ಒಗ್ಗಟ್ಟಿಗಾಗಿ ಮನವಿ ಮಾಡಿದ್ದಾರೆ.

'ಒಂದು ರಾಷ್ಟ್ರದ ಮುಖಂಡನನ್ನು ಅಪಹರಣ ಮಾಡಿರುವುದನ್ನು ಸಹಜ ಎಂದು ಪರಿಗಣಿಸಿದರೆ ಯಾವ ದೇಶವು ಸುರಕ್ಷಿತವಾಗಿರುವುದಿಲ್ಲ' ಎಂದು ಅವರು ಎಚ್ಚರಿಸಿದ್ದಾರೆ.

'ಅಪ್ಪಾ, ನಾನು ನಿಮಗೆ ಹೇಳಬಯಸುತ್ತೇನೆ. ನೀವು ನಮ್ಮೆಲ್ಲರನ್ನು ಪ್ರಬಲರನ್ನಾಗಿಸಿದ್ದೀರಿ. ನೀವು ಹಿಂತಿರುಗುವವರೆಗೂ ನಾವು ನಮ್ಮ ಕರ್ತವ್ಯವನ್ನು ನಿಭಾಯಿಸಲಿದ್ದೇವೆ. ತಾಯ್ನಾಡು ಒಳ್ಳೆಯ ಕೈಗಳಲ್ಲಿದೆ' ಎಂದು ಭಾವೋದ್ವೇಗದಿಂದ ನುಡಿದಿದ್ದಾರೆ.

'ಶೀಘ್ರದಲ್ಲೇ ವೆನೆಜುವೆಲಾದಲ್ಲಿ ನಿಮ್ಮನ್ನು ನಾವು ತಬ್ಬಿಕೊಳ್ಳಲಿದ್ದೇವೆ. ನಿಮ್ಮ ಮಕ್ಕಳನ್ನು, ಸಿಲಿಯಾರನ್ನು ನೋಡಲಿದ್ದೀರಿ' ಎಂದಿದ್ದಾರೆ.

'ವೆನೆಜುವೆಲಾ ಅಮರವಾಗಲಿ, ತಾಯ್ನಾಡು ಅಮರವಾಗಲಿ. ತಾಯ್ನಾಡಿಗೆ ಬೇಕಾದ ಎಲ್ಲವನ್ನು ಮಾಡಲಿದ್ದೇವೆ. ಅಪ್ಪ, ಲವ್ ಯೂ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.