ಮಾಸ್ಕೊ: ‘ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ರಾಷ್ಟ್ರದ ಹಿತಾಸಕ್ತಿಯೇ ಅತ್ಯಂತ ಪ್ರಮುಖವಾಗಿವೆ’ ಎಂದು ಪುಟಿನ್ ಅವರ ಆಡಳಿತ ಕಚೇರಿ ಕ್ರೆಮ್ಲಿನ್ ಬುಧವಾರ ಹೇಳಿದೆ.

ಉಕ್ರೇನ್–ರಷ್ಯಾ ಯುದ್ಧ ಕುರಿತು ಮಾತನಾಡುವ ವೇಳೆ, ‘ಉಕ್ರೇನ್ನೊಂದಿಗೆ ಯುದ್ಧ ವಿರಾಮಕ್ಕೆ ಒಪ್ಪಿಕೊಳ್ಳದ ಪುಟಿನ್, ಬೆಂಕಿ ಜೊತೆ ಸರಸವಾಡುತ್ತಿದ್ದಾರೆ’ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ರಷ್ಯಾ ತಿರುಗೇಟು ನೀಡಿದೆ.

ಉಕ್ರೇನ್–ರಷ್ಯಾ ಯುದ್ಧವನ್ನು ಶೀಘ್ರವೇ ಕೊನೆಗಾಣಿಸುವುದಾಗಿ ಶಪಥ ಮಾಡಿದ್ದ ಟ್ರಂಪ್, ನಂತರ ರಷ್ಯಾ ಜೊತೆ ಮಾತುಕತೆ ನಡೆಸುವುದರಿಂದ ಹಿಂದೆ ಸರಿದಿದ್ದರು. ಪುಟಿನ್ ನಡೆ ಟೀಕಿಸಿ ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ ‘ಟ್ರುತ್ ಸೋಷಿಯಲ್’ನಲ್ಲಿ ಪೋಸ್ಟ್ ಮಾಡಿದ್ದರು.

ಟ್ರಂಪ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್,‘ಯುದ್ಧ ಕೊನೆಗಾಣಿಸಿ, ಶಾಂತಿ ಸ್ಥಾಪನೆಗೆ ಅಮೆರಿಕ ಅಧ್ಯಕ್ಷ ಟ್ರಂಪ್ ನಡೆಸುತ್ತಿರುವ ಪ್ರಯತ್ನಗಳಿಗೆ ನಾವು ಕೃತಜ್ಞರಾಗಿದ್ದೇವೆ. ಆದರೆ, ಶಾಂತಿ ಒಪ್ಪಂದ ಏರ್ಪಡುವ ಮುನ್ನ, ಕೆಲವು ಸೂಕ್ಷ್ಮ ವಿಚಾರಗಳು ಬಗೆಹರಿಯುವುದು ಅಗತ್ಯ’ ಎಂದು ಹೇಳಿದ್ದಾರೆ.

‘ಅಮೆರಿಕದಂತೆ, ರಷ್ಯಾಕ್ಕೂ ತನ್ನದೇ ಆದ ರಾಷ್ಟ್ರೀಯ ಹಿತಾಸಕ್ತಿಗಳಿವೆ. ಇವು ನಮಗೆ ಹಾಗೂ ನಮ್ಮ ಅಧ್ಯಕ್ಷರಿಗೆ ಬಹಳ ಮಹತ್ವದ್ದಾಗಿವೆ’ ಎಂದು ಪುನರುಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.