ಕುವೈತ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಗುರಿಯಾಗಿಸಿ ಇರಾನ್ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಕಚೇರಿಯ ಆವರಣದಲ್ಲಿ ಸೋಮವಾರ ದಟ್ಟ ಹೊಗೆ ಎದ್ದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮ ಗಳಲ್ಲಿ ಹರಿದಾಡಿದೆ. ದಾಳಿಯಿಂದ ಹಾನಿಯಾಗಿರುವುದರ ಬಗ್ಗೆ ಕುವೈತ್‌ನಲ್ಲಿರುವ ರಾಯಭಾರ ಕಚೇರಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ಕಚೇರಿಯಿಂದ ದೂರವಿರುವಂತೆ ಜನರಿಗೆ ಎಚ್ಚರಿಕೆ ಕೊಟ್ಟಿದೆ.
ಇಸ್ರೇಲ್ ಮತ್ತು ಅಮೆರಿಕದ ವಿರುದ್ಧ ದೀರ್ಘಾವಧಿಯ ಯುದ್ಧ ನಡೆಸಲು ಇರಾನ್ ಸಿದ್ಧತೆ ಮಾಡಿಕೊಂಡಿದೆ. ಶತ್ರುಗಳಿಗೆ ಪಾಠ ಕಲಿಸಲಿದೆ.
– ಅಲಿ ಲಾರೀಜಾನಿ, ಇರಾನ್‌ನ ಸೆಕ್ಯುರಿಟಿ ಕೌನ್ಸಿಲ್ ಮುಖ್ಯಸ್ಥ
ಇರಾನ್ ಮೇಲಿನ ಸೇನಾ ಕಾರ್ಯಾಚರಣೆ ತಕ್ಷಣ ನಿಲ್ಲಲ್ಲ. ನಾಲ್ಕರಿಂದ ಐದು ವಾರಗಳವರೆಗೆ ಮುಂದುವರಿಯುವ ಸಾಧ್ಯತೆ ಇದೆ.