ವಾಷಿಂಗ್ಟನ್ (ಪಿಟಿಐ): ನಮ್ಮ ಆಕಾಶ ಗಂಗೆಗೆ (ಮಿಲ್ಕಿ ವೇ) ಸಮೀಪದ ನಕ್ಷತ್ರ ಪುಂಜದಲ್ಲಿರುವ ಗ್ಯಾಮಾ ಕಿರಣಗಳನ್ನು ಸೂಸುವ, ಅತ್ಯಂತ ಪ್ರಕಾಶಮಾನವಾದ ಅವಳಿ ನಕ್ಷತ್ರ ಮಂಡಲವನ್ನು ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡ ಪತ್ತೆ ಮಾಡಿದೆ. ಇದಕ್ಕೆ ‘ಎಲ್‌ಎಂಸಿ ಪಿ3’ ಎಂದು ಹೆಸರಿಡಲಾಗಿದೆ.

ಹತ್ತಿರದ ತಾರಾಪುಂಜವೊಂದರಲ್ಲಿ ಅವಳಿ ನಕ್ಷತ್ರಗಳು (ಬೈನರಿ) ಪತ್ತೆಯಾಗಿರುವುದು ಇದೇ ಮೊದಲು. ಜೊತೆಗೆ, ಇಷ್ಟು ಪ್ರಕಾಶಮಾನವಾಗಿ ಪ್ರಜ್ವಲಿಸುವ ಯುಗಳ ನಕ್ಷತ್ರಗಳು ಇದುವರೆಗೆ ಕಂಡುಬಂದಿರಲಿಲ್ಲ.

‘ಎಲ್‌ಎಂಸಿ ಪಿ3’ ಯಲ್ಲಿರುವ ಒಂದು ನಕ್ಷತ್ರ ದೊಡ್ಡದಾಗಿದ್ದರೆ, ಮತ್ತೊಂದು ತೀರಾ ಕುಗ್ಗಿರುವ ನಕ್ಷತ್ರ. ಇವೆರಡೂ ಪರಸ್ಪರ ಪ್ರಭಾವ ಬೀರುತ್ತಾ ಗ್ಯಾಮಾ ಕಿರಣಗಳ ಪ್ರವಾಹವನ್ನೇ ಹರಿಸುತ್ತಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

‘ಫರ್ಮಿ ಇದುವರೆಗೆ ನಮ್ಮ ತಾರಾ ಪುಂಜದಲ್ಲಿ ಐದು ಅವಳಿ ನಕ್ಷತ್ರ ಮಂಡಲಗಳನ್ನು ಪತ್ತೆ ಹಚ್ಚಿದೆ. ಅತ್ಯಂತ ಪ್ರಖರವಾದಂತಹ ಮತ್ತು ಇನ್ನೊಂದು ನಕ್ಷತ್ರ ಪುಂಜದಲ್ಲಿರುವ ಅವಳಿ ತಾರೆಗಳನ್ನು ಪತ್ತೆಹಚ್ಚುವುದು ಯಾವಾಗಲೂ ರೋಮಾಂಚನವನ್ನು ಉಂಟು ಮಾಡುವಂತಹದ್ದು’ ಎಂದು ಮುಖ್ಯ ಅಧ್ಯಯನಕಾರ ಮತ್ತು ನಾಸಾದ ಗೊಡ್ಡಾರ್ಡ್ ಸ್ಪೇಸ್ ಫ್ಲೈಟ್ ಸೆಂಟರ್‌ನ ರಾಬಿನ್ ಕೋರ್ಬೆಟ್ ಹೇಳಿದ್ದಾರೆ.

ಬಲು ಅಪರೂಪದ ಈ ನಕ್ಷತ್ರೀಯ ವ್ಯವಸ್ಥೆಗಳು ನ್ಯೂಟ್ರಾನ್ ನಕ್ಷತ್ರ ಇಲ್ಲವೇ ಕಪ್ಪು ರಂಧ್ರವನ್ನು ಹೊಂದಿರುತ್ತವೆ. ಅಲ್ಲದೇ ತಮ್ಮ ಬಹುಪಾಲು ಶಕ್ತಿಯನ್ನು ಗ್ಯಾಮಾ ಕಿರಣಗಳ ರೂಪದಲ್ಲಿ ಹೊರ ಸೂಸುತ್ತವೆ.

ಎಲ್‌ಎಂಸಿ ಪಿ3 ವೈಶಿಷ್ಟಗಳು..
* ಗ್ಯಾಮಾ ಕಿರಣ, ಎಕ್ಸ್–ರೇ, ರೇಡಿಯೊ ತರಂಗಗಳು ಮತ್ತು ನೋಡಬಹುದಾದ ಬೆಳಕುಗಳನ್ನು ಹೊರಸೂಸುತ್ತಿರುವ ಜೋಡಿ ನಕ್ಷತ್ರ ವ್ಯವಸ್ಥೆಗಳ ಪೈಕಿ ಅತ್ಯಂತ ಪ್ರಕಾಶಮಾನವಾದುದು.

* ಫೆರ್ಮಿ ದೂರದರ್ಶಕ ಕಂಡುಹಿಡಿದಿರುವ ಎರಡನೇ ಯುಗಳ ನಕ್ಷತ್ರ.

* ಈ ವ್ಯವಸ್ಥೆಯ ಕೇಂದ್ರ ಭಾಗದಲ್ಲಿನ ನಕ್ಷತ್ರದ ಮೇಲ್ಮೈ ಉಷ್ಣತೆ 30 ಸಾವಿರ ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚು. ಸೂರ್ಯನ ಮೇಲ್ಮೈ ಉಷ್ಣತೆಗೆ ಹೋಲಿಸಿದರೆ ಇದು ಆರು ಪಟ್ಟು ಅಧಿಕ.

ಎಲ್ಲಿದೆ?
1.63 ಲಕ್ಷ ಜ್ಯೋತಿರ್‌ವರ್ಷಗಳಷ್ಟು ದೂರದಲ್ಲಿರುವ ಲಾರ್ಜ್ ಮ್ಯಾಗೆಲಾನಿಕ್ ಕ್ಲೌಡ್ (ಎಲ್‌ಎಂಸಿ) ಎಂದು ಕರೆಯಲಾಗಿರುವ ಸಣ್ಣ ತಾರಾಪುಂಜದಲ್ಲಿ, ಸೂಪರ್‌ನೋವಾವೊಂದರ (ನಕ್ಷತ್ರ ಸ್ಫೋಟಗೊಳ್ಳುವಿಕೆ) ಅವಶೇಷಗಳ ಮಧ್ಯೆ ಈ ಜೋಡಿ ನಕ್ಷತ್ರ ಇವೆ.
ಪತ್ತೆ ಮಾಡಿದ್ದು ...
ನಾಸಾದ ಫೆರ್ಮಿ ಗ್ಯಾಮಾ–ಕಿರಣ ಬಾಹ್ಯಾಕಾಶ ದೂರದರ್ಶಕ, ಗ್ಯಾಮಾ ಕಿರಣ, ಬೆಳಕಿನಲ್ಲೇ ಅತ್ಯಂತ ಪ್ರಖರವಾಗಿರುವಂತಹದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.