ಶುಕ್ರವಾರ, ಫೆಬ್ರವರಿ 21, 2020
19 °C

25 ವರ್ಷಗಳ ಹಿಂದೆ | ಶುಕ್ರವಾರ, 3–2–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುನಾವಣೆ ಉಸ್ತುವಾರಿ ಇಡೀ ಆಯೋಗದ ಹೊಣೆ: ಸುಪ್ರೀಂ ಕೋರ್ಟ್‌ ಅಭಿಮತ

ನವದೆಹಲಿ, ಫೆ. 2 (ಯುಎನ್‌ಐ, ಪಿಟಿಐ)– ಸಂಸತ್ತು ಹಾಗೂ ವಿಧಾನಸಭೆಗಳಿಗೆ ಮುಕ್ತ ಹಾಗೂ ನ್ಯಾಯಯುತ ಚುನಾವಣೆ ನಡೆಸುವ ದಿಸೆಯಲ್ಲಿನ ಮೇಲ್ವಿಚಾರಣೆ, ಪರಿಶೀಲನೆ, ಉಸ್ತುವಾರಿ ಹಾಗೂ ಮತದಾರರ ಪಟ್ಟಿ ಸಿದ್ಧಗೊಳಿಸುವ ಅಧಿಕಾರ ಇಡಿಯಾಗಿ ದೇಶದ
ಚುನಾವಣಾ ಆಯೋಗದಲ್ಲಿ ಅಡಕವಾಗಿದೆಯೇ ವಿನಾ ಮುಖ್ಯ ಚುನಾವಣಾ ಕಮಿಷನರ್‌ ಬಳಿ ಮಾತ್ರ ಅಲ್ಲ ಎಂಬ ಇಂಗಿತವನ್ನು ಸುಪ್ರೀಂ ಕೋರ್ಟ್ ಇಂದು ವ್ಯಕ್ತಪ‍ಡಿಸಿತು. ‌

ಮುಖ್ಯ ಚುನಾವಣಾ ಕಮಿಷನರ್‌ಗೆ (ಸಿ.ಇ.ಸಿ) ಸರಿಸಮಾನವಾಗಿ ಇನ್ನಿಬ್ಬರು ಚುನಾವಣಾ ಕಮಿಷನರ್‌ಗಳನ್ನು (ಇ.ಸಿ) ನೇಮಕ ಮಾಡಿದ್ದರ ಯತಾರ್ಥತೆಯನ್ನು ಪ್ರಶ್ನಿಸಿ ಮುಖ್ಯ ಚುನಾವಣಾ ಕಮಿಷನರ್‌ ಟಿ.ಎನ್‌.ಶೇಷನ್‌ ಮತ್ತು ಇತರ ನಾಲ್ವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಪೀಠ ಇಂದು ಈ ಅಭಿಪ್ರಾಯ ವ್ಯಕ್ತಪಡಿಸಿತು.‌‌‌

ಸಿದ್ಧಲಿಂಗಯ್ಯಗೆ ಕಣಗಾಲ್‌ ಪ್ರಶಸ್ತಿ, ಕೆ.ಎಸ್‌.ಅಶ್ವಥ್‌ಗೆ ಡಾ. ರಾಜ್‌ ಪ್ರಶಸ್ತಿ 

ಬೆಂಗಳೂರು, ಫೆ. 2– ಹೆಸರಾಂತ ಚಿತ್ರನಟ ಕೆ.ಎಸ್‌.ಅಶ್ವಥ್‌ ಅವರಿಗೆ ಡಾ. ರಾಜ್‌ಕುಮಾರ್‌ ಪ್ರಶಸ್ತಿಯನ್ನು ಹಾಗೂ ದಿವಂಗತ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿಯನ್ನು ಖ್ಯಾತ ಚಿತ್ರನಿರ್ದೇಶಕ ಸಿದ್ಧಲಿಂಗಯ್ಯ ಅವರಿಗೆ ನೀಡಲಾಗಿದೆ. 

1993– 94ನೇ ಸಾಲಿನ ಈ ಪ್ರಶಸ್ತಿಗಳೊಂದಿಗೆ ತಲಾ ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನು ಇವರಿಬ್ಬರೂ ಪಡೆಯುವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)