ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಸಂಚಾರ: ಭವಿಷ್ಯದ ಸ್ವರೂಪ ಹೀಗಿರಬಹುದೇ?

Last Updated 23 ಆಗಸ್ಟ್ 2022, 11:37 IST
ಅಕ್ಷರ ಗಾತ್ರ

ಭವಿಷ್ಯದಲ್ಲಿ ಕಾಣಲಿರುವ ನಗರ ಸಂಚಾರ ಸ್ವರೂಪವನ್ನು ಆಧುನಿಕ ತಂತ್ರಜ್ಞಾನವು ಪಲ್ಲಟಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ವಿದ್ಯುತ್ ಚಾಲಿತ ಆಟೋಮೆಟಿಕ್ ವಾಹನ, ಉತ್ತಮ ವೈಫೈ ಸಂಪರ್ಕ, ಪೂಲಿಂಗ್ ವ್ಯವಸ್ಥೆ ಸಂಚಾರ ದಟ್ಟಣೆಯನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಗೊಳಿಸಲಿವೆ.

ನಗರದಲ್ಲಿ ಇಂದು ಎದುರಿಸುತ್ತಿರುವ ಕೆಲವು ಪ್ರಮುಖ ವಾಹನ ದಟ್ಟಣೆ ಹಾಗೂ ಸಂಚಾರಿ ವ್ಯವಸ್ಥೆಯ ಸವಾಲುಗಳನ್ನು ವಿಶ್ಲೇಷಿಸುವ ತುರ್ತು ಅವಶ್ಯಕತೆ ಇದೆ. ಭವಿಷ್ಯದಲ್ಲಿ ಅನುಕೂಲಕರವಾದ ಸಂಚಾರವು ಹೇಗಿರಬೇಕೆಂಬ ದೂರದೃಷ್ಟಿಯ ಅಗತ್ಯವೂ ಇದೆ. ಹೊಸಬಗೆಯ ವಾಹನ ತಂತ್ರಜ್ಞಾನವು ಹತ್ತು ಹಲವು ಆವಿಷ್ಕಾರಗಳಿಗೆ ಅನುವು ಮಾಡಿಕೊಟ್ಟಿದೆ. ಪರಿಣಾಮ ಭವಿಷ್ಯದಲ್ಲಿ ಕಾಣಲಿರುವ ಸಾಧ್ಯತೆಗಳು ಹೀಗಿರಬಹುದು.

ಭಾವಿ ಸಂಚಾರ ಚಿತ್ರಣ
ಭಾವಿ ಸಂಚಾರ ಚಿತ್ರಣ

ನಗರ ಸಂಚಾರದ ಸವಾಲುಗಳು
ಪ್ರಸ್ತುತ ನಗರ ಸಂಚಾರ ಎದುರಿಸುತ್ತಿರುವ ಸವಾಲುಗಳು ಹಲವು. ಮುಖ್ಯವಾಗಿ ಕಾಲಕಾಲಕ್ಕೆ ಸೂಕ್ತ ತಪಾಸಣೆ ಇಲ್ಲದ ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯವು ಪರಿಸರವನ್ನು ಮತ್ತು ಮನುಷ್ಯನ ಆರೋಗ್ಯವನ್ನು ಹದಗೆಡಿಸಿ ಬಿಡುತ್ತದೆ. ಚಳಿಗಾಲದಲ್ಲಿ ದೆಹಲಿಯು ವಾಹನಗಳ ಹೊಗೆ ಮತ್ತು ಮಂಜಿನಿಂದ ಆವೃತಗೊಂಡಿರುತ್ತದೆ. ತೀವ್ರ ಹಾನಿಯನ್ನು ಅನುಭವಿಸುವುದು ಮನುಷ್ಯರು! ಹೆದ್ದಾರಿಗಳಲ್ಲಿ ಕಾಣುವ ನಿತ್ಯ ಅಪಘಾತಗಳು ನಾವು ಎದುರಿಸುತ್ತಿರುವ ಎರಡನೇಯ ಸವಾಲು. ಟ್ರಾಫಿಕ್ ದಟ್ಟಣೆ ನಮ್ಮೆದುರಿಗಿರುವ ಮೂರನೇಯ ಸವಾಲು. ನಗರದ ಹೆಬ್ಬಾಳ, ಸಾರಕ್ಕಿ, ಸಿಲ್ಕ್ ಬೋರ್ಡ್ ಜಂಕ್ಷನ್ ಸೇರಿದಂತೆ ದೇಶದ ಇತರ ನಗರಗಳಲ್ಲಿ ಕಾಣುವ ಸಂಚಾರ ದಟ್ಟಣೆಯಿಂದ ಜನರ ಬಾಳು ಹೈರಾಣಾಗಿದೆ.

ಸುರಕ್ಷಿತ, ಸುಗಮ ಸಂಚಾರ ವ್ಯವಸ್ಥೆಯನ್ನು ನಿರ್ಮಿಸಲು ಸಾಧ್ಯವಿದೆಯೇ? ಶರವೇಗದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನಗಳಾದ ವಿದ್ಯುತ್ ಚಾಲಿತ, ಸಂಪರ್ಕಪೂರಿತ, ಸ್ವಯಂ ನಿಯಂತ್ರಿತ ವಾಹನಗಳೂ ಮತ್ತು ವ್ಯವಹಾರಿಕವಾಗಿ ಉಪಯೋಗಿಸಬಲ್ಲ ಬಾಡಿಗೆ ಕ್ಯಾಬ್ ಅಥವಾ ಕಾರ್ ಪೂಲಿಂಗ್ ನಂತಹ ಸುಸ್ಥಿರ ಸಂಚಾರ ವ್ಯವಸ್ಥೆಯನ್ನು ಸೃಷ್ಟಿಸಲು ಸಾಧ್ಯವೆ? ಭವಿಷ್ಯದಲ್ಲಿ ಪರಿಣಾಮಕಾರಿಯಾದ ಸಂಚಾರ ಪರಿಹಾರಗಳನ್ನು ಕಂಡುಕೊಳ್ಳಲು ಯಾವ ಬಗೆಯ ಸನ್ನಿವೇಶಗಳನ್ನು ನಾವು ಕಲ್ಪಿಸಿಕೊಳ್ಳಬೇಕು? ಎಂಬುದನ್ನು ಚರ್ಚಿಸೋಣ.

ತಂತ್ರಜ್ಞಾನ ಸಾಧ್ಯತೆಗಳು: ಸುಸ್ಥಿರ ಸಂಚಾರದ ಸವಾಲುಗಳನ್ನು ಎದುರಿಸಲು ವಿಭಿನ್ನ ತಂತ್ರಜ್ಞಾನಗಳ ಜೋಡಣೆಯಿಂದ ಸಿಗುವ ಪರಿಹಾರಗಳನ್ನು ವ್ಯವಸ್ಥಿತವಾಗಿ ಪರಿಶೀಲಿಸೋಣ. ಈ ಕೆಳಕಂಡ ನಾಲ್ಕು ಸಾಧ್ಯತೆಗಳನ್ನು ಮತ್ತು ಅವುಗಳ ಪರಿಣಾಮಗಳನ್ನು ಗಮನಿಸಬಹುದು.

ವಾಯು ಮಾಲಿನ್ಯ ವಾಹನಗಳ ಅಪಘಾತ ಸಂಚಾರ ದಟ್ಟಣೆ ತಂತ್ರಜ್ಞಾನದ ಈಗಿನ ಸ್ಥಿತಿ
ಎಲೆಕ್ಟ್ರಿಕ್ ವಾಹನ, ಪೂಲಿಂಗ್ವ್ಯವಸ್ಥೆ

*ಹೊಗೆಯುಗುಳುವಿಕೆ ಇಲ್ಲದಿರುವುದು,
*ರಸ್ತೆ ಮೇಲೆ ಕಡಿಮೆ ವಾಹನಗಳ ಓಡಾಟ,
*ಕಡಿಮೆ ಇಂಧನ ಬಳಕೆ

*ಕಡಿಮೆ ಸಂಚಾರ ದಟ್ಟಣೆ,
*ವಾಹನ, ಇಂಧನಗಳ ಕಡಿಮೆ ಬಳಕೆ,
*ಚಾಲಕರಿಗೆ ನಿಶ್ಚಿಂತೆ,
*ಪ್ರಯಾಣ ಸಮಯದಲ್ಲಿಳಿತಾಯ


*ಹೊಸ ತಂತ್ರಜ್ಞಾನ ಅನುಕೂಲದ ಜೊತೆಗೆ ಆರ್ಥಿಕ ಲಾಭ

ಎಲೆಕ್ಟ್ರಿಕ್ ವಾಹನಮತ್ತು ಉತ್ತಮ ವೈಫೈ ವ್ಯವಸ್ಥೆ

*ಹೊಗೆಯುಗುಳುವಿಕೆ ಇಲ್ಲದಿರುವುದು,
*ರಸ್ತೆ ಮೇಲೆ ಕಡಿಮೆ ವಾಹನಗಳ ಓಡಾಟ,
*ಕಡಿಮೆ ಇಂಧನ ಬಳಕೆ

*ಅಪಘಾತ ಕುರಿತಾಗಿನ ಮುನ್ನೆಚ್ಚರಿಕೆ –V2V
*ಉತ್ತಮ ಕಾರ್ಯ ಕ್ಷಮತೆ – V2I
*ಮುನ್ನೆಚ್ಚರಿಕಾ ಸೂಚನೆಗಳು – V2P



*ಕಡಿಮೆ ಇಂಧನ ಬಳಕೆ,
*ವಾಹನ ಚಾಲಕರಿಗೆ ನಿಶ್ಚಿಂತೆ,
*ಪ್ರಯಾಣದ ಒಟ್ಟು ಸಮಯದಲ್ಲಿ ಉಳಿತಾಯ
*ವಾಹನ ನಿಲುಗಡೆಗೆ ಹೆಚ್ಚು ಸ್ಥಳಾವಕಾ

*ಹೆಚ್ಚಿನ ತಾಂತ್ರಿಕ ಸಾಧ್ಯತೆ, *ಆರ್ಥಿಕ ಅನುಕೂ


ಆಟೋಮೆಟಿಕ್ ಮತ್ತು ಪೂಲಿಂಗ್ ವ್ಯವಸ್ಥೆ

*ಭಾರಿ ಪ್ರಮಾಣದಲ್ಲಿ ವಾಹನಗಳ ಓಡಾಟ ಸಂಖ್ಯೆಯಲ್ಲಿ ಕಡಿತ
*ವಾಯು ಮಾಲಿನ್ಯದ ಇಳಿಕೆ


*ಸುರಕ್ಷತಾ ಸುಧಾರಣೆಗಳು
*ಅಪಘಾತಗಳ ಸಂಖ್ಯೆಯ ಇಳಿಕೆ

*ಕಡಿಮೆ ವಾಹನಗಳ ಓಡಾಟ
*ಪ್ರಯಾಣದ ಒಟ್ಟು ಸಮಯದಲ್ಲಿ ಉಳಿತಾಯ
*ಚಾಲಕರಿಗೆ ಕಡಿಮೆ ಮಾನಸಿಕ ಒತ್ತಡ,

*ಮಧ್ಯಮ ಮಟ್ಟದ ತಾಂತ್ರಿಕ ಸಾಧ್ಯತೆ,


*ಆರ್ಥಿಕವಾಗಿ ಮಧ್ಯಮ ದುಬಾರಿ.

*ಮಧ್ಯಮ ತಾಂತ್ರಿಕ ಕಾರ್ಯಸಾಧ್ಯತೆ


ಎಲೆಕ್ಟ್ರಿಕ್ ಮತ್ತು ಆಟೋಮೆಟಿಕ್ ವಾಹನ

*ಕಡಿಮೆ ಮಾಲಿನ್ಯ
*ಕಡಿಮೆ ಇಂಧನ ಖರ್ಚು ಹಾಗೂ ಸುಲಭ ನಿರ್ವಹಣೆ.


*ಸುರಕ್ಷತಾ ಸುಧಾರಣೆ,
*ಅಪಘಾತ ನಿಯಂತ್ರಣ

*ಕಡಿಮೆ ವಾಹನಗಳ ಓಡಾಟ
*ಪ್ರಯಾಣದ ಒಟ್ಟು ಸಮಯದಲ್ಲಿ ಉಳಿತಾಯ
*ಚಾಲಕರಿಗೆ ಕಡಿಮೆ ಮಾನಸಿಕ ಒತ್ತಡ,
*
ವಾಹನ ನಿಲುಗಡೆಗೆ ಹೆಚ್ಚು ಸ್ಥಳಾವಕಾಶ

ಮಧ್ಯಮ ಮಟ್ಟದ ತಾಂತ್ರಿಕ ಸಾಧ್ಯತೆ

*ಆರ್ಥಿಕವಾಗಿ ಮಧ್ಯಮ ದುಬಾರಿ?

ಕೇವಲ ವಿಧಾನಗಳಿಂದ ಸಂಚಾರದಟ್ಟಣೆಯ ಕುರಿತು ಸವಾಲುಗಳನ್ನು ಚರ್ಚಿಸಿ ಸಮಸ್ಯೆಯನ್ನು ಪರಿಹರಿಸಲಾಗದು ಎಂಬುದು ಇದರಿಂದಸ್ಪಷ್ಟವಾಗುತ್ತದೆ. ಆದ್ದರಿಂದ ಸುಸ್ಥಿರ ನಗರ ಸಂಚಾರದ ವ್ಯವಸ್ಥೆಯೊಂದನ್ನು ಕಂಡುಕೊಳ್ಳಲು ಈ ಕೆಳಕಂಡ ನಾಲ್ಕೂ ತಂತ್ರಜ್ಞಾನಗಳನ್ನು ಒಟ್ಟಿಗೆ ತರಬೇಕು.

ಸುಸ್ಥಿರ ಮತ್ತು ಆರ್ಥಿಕವಾಗಿ ನಿಭಾಯಿಸಬಲ್ಲ ನಗರ ಸಂಚಾರ ವ್ಯವಸ್ಥೆಯ ನಿರ್ಮಾಣಕ್ಕೆ ಮೇಲೆ ಉದಾಹರಿಸಿದ ನಾಲ್ಕೂ ತಂತ್ರಜ್ಞಾನಗಳ ಏಕೀಕರಣವು ಪೂರಕವಾಗಬಲ್ಲದು. ನಗರ ಸಂಚಾರ ವ್ಯವಸ್ಥೆಯನ್ನು ನಿರ್ಮಾಣ ಮಾಡುವಾಗ ಸುರಕ್ಷತೆ ಮತ್ತು ಜನ ಸಾಮಾನ್ಯರ ಕೈಗೆ ಸಿಗುವಂತಹ ಆರ್ಥಿಕ ಪರಿಸ್ಥಿತಿಯನ್ನೂ ಖಚಿತ ಪಡಿಸಿಕೊಳ್ಳಬೇಕಾದ ಅಗತ್ಯವಿದೆ.

ನಗರ ಸಂಚಾರದ ನಾಲ್ಕೂ ತಂತ್ರಜ್ಞಾನಗಳು
ನಗರ ಸಂಚಾರದ ನಾಲ್ಕೂ ತಂತ್ರಜ್ಞಾನಗಳು

ಸದ್ಯಕ್ಕೆ ಬ್ಯಾಟರಿಯ ಬೆಲೆ ವಿದ್ಯುತ್ ವಾಹನದ ಬೆಲೆಯ ಶೇಕಡಾ 40ರಷ್ಟಾಗಿರುವುದರಿಂದ, ಬ್ಯಾಟರಿ ಮತ್ತು ಚಾರ್ಜಿಂಗ್ ಬೆಲೆಯನ್ನು ಹಾಗೂ ಲಿಡಾರ್ ಮತ್ತಿತರ ಸಂವೇದಕಗಳ ಬೆಲೆ ಕಡಿಮೆ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಬಹುತೇಕ ಸುಸ್ಥಿರತೆಯ ಸಮಸ್ಯೆಗಳು ಭೂಪ್ರದೇಶದ ಇತಿಮಿತಿಯಿಂದಾಗಿ ಆಗಿರುವಂಥವು. ಉದಾಹರಣೆಗೆ ಬ್ಯಾಟರಿಗೆ ಬೇಕಾದ ಮೂಲವಸ್ತುಗಳಾದ ಲೀಥಿಯಂ ಮತ್ತು ಕೋಬಾಲ್ಟ್ ಮತ್ತು ಮೋಟಾರಿನಲ್ಲಿರುವ ಶಾಶ್ವತ ಆಯಸ್ಕಾಂತಕ್ಕೆ ಬೇಕಾದ ಅಪರೂಪದ ಖನಿಜಗಳು. ಇವುಗಳ ಅಲಭ್ಯತೆಯೇ ಸಮಸ್ಯೆಯ ಮೂಲ. ಮಾತ್ರವಲ್ಲದೆ ಚಾರ್ಜಿಂಗ್‌ಗೆ ಬಳಸುವ ವಿದ್ಯುತ್ ಕೂಡಾ ನವೀಕರಣಗೊಳ್ಳುವಂತಹ ಇಂಧನ ಮೂಲದಿಂದ ಉತ್ಪಾದನೆಗೊಂಡಿರಬೇಕು ಎಂಬುದು ಗಮನಾರ್ಹ ವಿಚಾರ.

ಲೀಥಿಯಂ-ಆಯಾನ್ ಬ್ಯಾಟರಿಗಳಲ್ಲಿನ ಶಕ್ತಿ ಸಂಚಯದ ಆರ್ಥಿಕ ದರ ಕಳೆದ ಹತ್ತು ವರ್ಷಗಳಲ್ಲಿ ಶೇ 90 ರಷ್ಟು (1 kwh ಶಕ್ತಿಗೆ 1000 ಡಾಲರ್‌ ಇದ್ದದ್ದು ಇದೀಗ 100 ಡಾಲರ್‌) ಕಡಿಮೆಯಾಗಿರುವುದು ಭರವಸೆ ಹುಟ್ಟಿಸುವ ವಿಷಯ. ಹಾಗೆಯೇ ಸ್ವಯಂ ನಿಯಂತ್ರಿತ ವಾಹನಗಳ ಕಣ್ಣು ಎಂದೇ ಭಾವಿಸುವ ಲಿಡಾರ್ ಬೆಲೆ ಸಹ ಕಳೆದ ಹತ್ತು ವರ್ಷಗಳಲ್ಲಿ ಶೇ 90 ರಷ್ಟು ಕಡಿಮೆಯಾಗಿದೆ. ಅದೇ ರೀತಿ ಫೋಟೊ-ವೋಲ್ಟಾಯಿಕ್ ಸೆಲ್-ನಿಂದ ಸೌರಶಕ್ತಿ ಉತ್ಪಾದನೆಯ ಬೆಲೆಯೂ ಸಹ ಶೇ 90 ರಷ್ಟು ಕಡಿಮೆಯಾಗಿದೆ.

ಈ ತಂತ್ರಜ್ಞಾನಗಳ ದಕ್ಷತೆಯಲ್ಲಿ ಕ್ರಾಂತಿಕಾರಕ ಬೆಳವಣಿಗೆ ಜೊತೆಗೆ ತೀವ್ರ ಬೆಲೆ ಕುಸಿತದ ಮತ್ತು ತಂತ್ರಜ್ಞಾನಗಳ ಏಕೀಕರಣವು, ಅಂತಿಮ ತುದಿಯಲ್ಲಿರುವ ಗ್ರಾಹಕನಿಗೆ ಕೊಡಬಹುದಾದ ಬೆಲೆಯ ಕುರಿತು ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುತ್ತದೆ. ಹೀಗೆ ಕ್ರಾಂತಿಕಾರಕ ತಂತ್ರಜ್ಞಾನಗಳನ್ನು ಜಾಣ್ಮೆಯಿಂದ ಬಳಸಿಕೊಂಡು ಪ್ರತಿ ತಂತ್ರಜ್ಞಾನದಲ್ಲಿ ಶೇ 10 ರಷ್ಟು ದೊಡ್ಡ ಮಟ್ಟದ ಸುಧಾರಣೆಯಾದಾಗ, ಅಂತಹ ಹತ್ತು ತಂತ್ರಜ್ಞಾನಗಳ ಏಕೀಕರಣದಿಂದ ಶೇ 100 ರಷ್ಟು ಪ್ರತಿಫಲವನ್ನು ಅಪೇಕ್ಷಿಸಬೇಕಾಗುತ್ತದೆ.

ನಿರ್ಣಯಗಳು...
* ಅಸ್ತವ್ಯಸ್ತ ನಗರ ಸಂಚಾರ,ವಾಹನಗಳ ಹೊಗೆಯುಗುಳಿವಿಕೆಯಿಂದ ಉಂಟಾಗುವ ವಾಯು ಮಾಲಿನ್ಯ, ಅಪಘಾತಗಳು ಮತ್ತು ಬಹುತೇಕ ನಗರಗಳನ್ನು ಹತಾಶೆಗೊಳಿಸುವ ವಾಹನ ದಟ್ಟಣೆಯಂತಹ ಪ್ರಮುಖ ಸವಾಲುಗಳಿಂದ ಸುಗಮ ಸಂಚಾರಕುಂಠಿತವಾಗಿದೆ.

* ವಿದ್ಯುತ್ ಚಾಲಿತ, ಸ್ವಯಂ ನಿಯಂತ್ರಿತ ಸಂಪರ್ಕಪೂರಿತ ಮತ್ತು ಪೂಲಿಂಗ್ ವ್ಯವಸ್ಥೆಗಳ ಏಕೀಕರಣದಲ್ಲಿ ಸುಸ್ಥಿರ ವಾಹನ ಸಂಚಾರ ವ್ಯವಸ್ಥೆ ನಿರ್ಮಾಣದ ಅವಕಾಶ ಅಡಗಿದೆ.

* ತಂತ್ರಜ್ಞಾನದ ಕ್ರಾಂತಿಕಾರಕ ಬೆಳವಣಿಗೆ ಮತ್ತು ಅವುಗಳ ಕ್ಷಿಪ್ರ ಏಕೀಕರಣದಿಂದಾಗಿ ಭವಿಷ್ಯದ ಸಂಚಾರದ ಚಿತ್ರಣವನ್ನು ಅಂದಾಜು ಮಾಡುವುದು ಬಲು ಕಷ್ಟದ ಕೆಲಸವಾಗಿದೆ. ಆದ್ದರಿಂದ ಭವಿಷ್ಯದ ಸಾಧ್ಯತೆಗಳನ್ನು ನಾವೇ ಕಲ್ಪಿಸಿಕೊಂಡು, ಅವು ತರುವ ಸವಾಲುಗಳನ್ನು ಎದುರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಬಹುದು.

ಭವಿಷ್ಯದಲ್ಲಿ ನಗರ ಸಂಚಾರವನ್ನು ಕಲ್ಪಿಸಿಕೊಳ್ಳುವಲ್ಲಿನಾವು ಮತ್ತಷ್ಟು ಸೃಜನಶೀಲರಾಗಬೇಕು. ಅಲ್ಪ ಹಂತದ ಬದಲಾವಣೆಯ ಯೋಚನಾ ಕ್ರಮವನ್ನು ಬಿಟ್ಟು, ದೂರಾಲೋಚನೆಯ ಕ್ಷಿಪ್ರ ಮತ್ತು ಕ್ರಾಂತಿಕಾರಿಕ ಆಲೋಚನಾ ಕ್ರಮಕ್ಕೆ ಪ್ರಜ್ಞಾಪೂರ್ವಕವಾಗಿ ನಮ್ಮನ್ನು ನಾವು ಒಗ್ಗಿಸಿಕೊಂಡರೆ, ನಾವು ನಿರೀಕ್ಷಿಸುವ ಬದಲಾವಣೆ ಮೂಡುತ್ತದೆ. ಸುಸ್ಥಿರತೆಯಲ್ಲಿ ಹತ್ತು ಪಟ್ಟು ಅಥವಾ ನೂರು ಪಟ್ಟು ಸುಧಾರಣೆ ತರುವ ರೀತಿಯಲ್ಲಿ ದಿಟ್ಟವಾಗಿ ಯೋಚಿಸಬೇಕಾಗಿರುವುದು ಮುಖ್ಯವಾದುದು.

ಸಾಧಾರ...

*New Mobility – Today’s Technology & Policy Landscape
* Falling cost of Energy Storage – Lithium ion Batteries
* Falling cost of Lidar price

***
ಲೇಖಕರು: ಡಾ. ಶಂಕರ್ ವೇಣುಗೋಪಾಲ್, ವೈಸ್ ಪ್ರೆಸಿಡೆಂಟ್, ಮಹೀಂದ್ರಾ & ಮಹೀಂದ್ರಾ, ಚೆನ್ನೈ
ಸಹ ಲೇಖಕಿ: ಬನಶಂಕರಿ ಆನಂದ್, ಇನ್ಫೋಸಿಸ್ ಲಿಮಿಟೆಡ್ ಬೆಂಗಳೂರು
ಕನ್ನಡಕ್ಕೆ: ಡಾ. ಸುದರ್ಶನ ಪಾಟೀಲ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT