ಮೋದಿ ಅವರು ಪ್ರಧಾನಿ ಹುದ್ದೆಗೇರಿದ ಆರಂಭದ ದಿನಗಳಲ್ಲಿ, ಇನ್ನೊಂದು ತುರ್ತುಸ್ಥಿತಿ ಬರುವುದೇ ಇಲ್ಲ ಎಂದು ತಾವು ಭಾವಿಸುವುದಿಲ್ಲ, ಏಕೆಂದರೆ, ಅಧಿಕಾರದಲ್ಲಿ ಇರುವವರಿಗೆ (ಅಂದರೆ, ಮೋದಿ) ಪ್ರಜಾಪ್ರಭುತ್ವದ ಮೇಲೆ ಬದ್ಧತೆಯ ಕೊರತೆ ಇದೆ ಎಂದು ಬಿಜೆಪಿಯ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾದ ಎಲ್.ಕೆ. ಅಡ್ವಾಣಿ ಹೇಳಿದ್ದರು. ಆದರೆ ಆ ರೀತಿಯಲ್ಲಿ ಏನೂ ಆಗಿಲ್ಲ. ಇದು ಈಗ ಎಂತಹ ಅದ್ಭುತ ಬದಲಾವಣೆ. ಆದರೆ, ಪ್ರಶ್ನೆ ಇರುವುದು ಇದಕ್ಕೆ ಕಾರಣಗಳು ಏನು?