ಮೆಕಾಲೆ ಶಿಕ್ಷಣಪದ್ಧತಿಯನ್ನು ಗುಲಾಮಿ ಮನಃಸ್ಥಿತಿ ಎಂದು ಪ್ರಧಾನಿ ಹೇಳಿರುವುದು ಸರಿಯಾಗಿದೆ. ಆದರೆ, ಮೆಕಾಲೆ ಶಿಕ್ಷಣವನ್ನು ವಿರೋಧಿಸುವ ಬಹುತೇಕರು ಆಮದು ಚಿಂತನೆಗಳ ವಕ್ತಾರರಾಗಿದ್ದಾರೆ. ಕೇಸರಿ ದಿರಿಸು ತೊಟ್ಟಿದ್ದರೂ, ಅಂತರಂಗದಲ್ಲಿ ಮೆಕಾಲೆ ಚಿಂತನೆಯೇ ಇರುವ ವಿರೋಧಾಭಾಸದ ಸ್ಥಿತಿ ಇಂದಿನದು.

ಪ್ರಧಾನಿ ನರೇಂದ್ರ ಮೋದಿ ಅವರು ರಾಮನಾಥ ಗೋಯೆಂಕಾ ಸ್ಮಾರಕ ಉಪನ್ಯಾಸದಲ್ಲಿ ಟಿ.ಬಿ. ಮೆಕಾಲೆ ಕುರಿತು ನೀಡಿದ ಹೇಳಿಕೆಗೆ ನನ್ನ ಸಂಪೂರ್ಣ ಸಹಮತ ಇದೆ. ಗುಲಾಮಿ ಮನಃಸ್ಥಿತಿಯಿಂದ ನಾವು ಮುಕ್ತರಾಗಬೇಕು ಎಂಬ ಅವರ ಕರೆಯನ್ನೂ ನಾನು ಒಪ್ಪುತ್ತೇನೆ. ಮುಂದಿನ ಹತ್ತು ವರ್ಷಗಳು ನಿರ್ಣಾಯಕ ಎಂಬ ಅವರ ಹೇಳಿಕೆಯೂ ಸರಿಯಾಗಿಯೇ ಇದೆ. ಹಾಗಾಗಿ ನನ್ನ ಸಲಹೆ ಏನೆಂದರೆ, ಮುಂದಿನ ದಶಕ ದಲ್ಲಿ ನಾವು ಬಿಜೆಪಿಯಿಂದ ಕಳಚಿಕೊಳ್ಳಬೇಕು ಮತ್ತು ಆರ್ಎಸ್ಎಸ್ ಮನಃಸ್ಥಿತಿಯನ್ನು ದೂರ ಇರಿಸಬೇಕು.

ನಾನು ಇದನ್ನು ತಮಾಷೆಗಾಗಿಯೋ ಪ್ರಚೋದನೆಗಾಗಿಯೋ ಹೇಳುತ್ತಿಲ್ಲ. ಪೂರ್ಣ ಗಂಭೀರವಾಗಿಯೇ ಇದನ್ನು ಹೇಳುತ್ತಿದ್ದೇನೆ. ಮೆಕಾಲೆ ಮಾನಸಪುತ್ರರ ವಿರುದ್ಧದ ಹೋರಾಟವು ಸೂಟು–ಟೈ ಧರಿಸುವ ಮೆಕಾಲೆಗಳಿಗಿಂತ ಮೊದಲು ತಿಲಕಧಾರಿ ಮೆಕಾಲೆಗಳಿಂದ ಬಿಡಿಸಿಕೊಳ್ಳುವ ಮೂಲಕ ಆರಂಭವಾಗಬೇಕು. ಕಂದು ಸಾಹೇಬರ ಅಸಹ್ಯಕರ ಮತ್ತು ಸ್ಪಷ್ಟಗೋಚರ ಗುಲಾಮತನಕ್ಕಿಂತ ಸಾಂಸ್ಕೃತಿಕ ರಾಷ್ಟ್ರೀಯತೆಯ ಹೆಸರಿನಲ್ಲಿ ಅಡಗಿಕೊಂಡಿರುವ ಮಾನಸಿಕ ಗುಲಾಮತನವು ಹೆಚ್ಚು ಅಪಾಯಕಾರಿ.

ಮೋದಿ ಅವರು ಮೆಕಾಲೆ ಕುರಿತು ನೀಡಿರುವ ಹೇಳಿಕೆಯನ್ನು ದೃಢವಾಗಿ ಒಪ್ಪಲು ಮತ್ತು ಅವರ ಟೀಕಾಕಾರರನ್ನು ಗಂಭೀರವಾಗಿ ನಿರಾಕರಿಸಲು ಕಾರಣಗಳೇನು ಎಂಬುದನ್ನು ವಿವರಿಸುತ್ತೇನೆ. ‘ಮಿನಿಟ್ ಆನ್ ಎಜುಕೇಷನ್’ ಎಂಬ ಮೆಕಾಲೆಯ ಶಿಕ್ಷಣನೀತಿ ದಾಖಲೆಪತ್ರದಲ್ಲಿ ಇರುವ ಗ್ರಹಿಕೆ ಹೀಗಿದೆ: ‘ಭಾರತ ಮತ್ತು ಅರೇಬಿಯಾದ ಮೂಲಸಾಹಿತ್ಯವು (ನೇಟಿವ್ ಲಿಟರೇಚರ್) ಯುರೋಪ್ನ ಒಳ್ಳೆಯ ಗ್ರಂಥಾಲಯವೊಂದರ ಒಂದು ಕಪಾಟಿನಲ್ಲಿರುವ ಪುಸ್ತಕಗಳಿಗೆ ಸಮಾನ... ಸಂಸ್ಕೃತದಲ್ಲಿ ರಚನೆಯಾಗಿರುವ ಎಲ್ಲ ಕೃತಿಗಳಲ್ಲಿ ಸಂಗ್ರಹವಾಗಿರುವ ಚಾರಿತ್ರಿಕ ಮಾಹಿತಿಯು ಇಂಗ್ಲೆಂಡ್ನ ಪ್ರಾಥಮಿಕ ಶಾಲೆಯಲ್ಲಿ ಬಳಕೆಯಾಗುವ ಅತ್ಯಂತ ನಗಣ್ಯವಾದ ಕೃತಿಯೊಂದರ ಸಂಕ್ಷಿಪ್ತ ರೂಪದಷ್ಟೂ ಮೌಲ್ಯ ಹೊಂದಿಲ್ಲ... ಇದು ಭೌತಿಕ ಅಥವಾ ನೈತಿಕ ತತ್ತ್ವಶಾಸ್ತ್ರದ ಎಲ್ಲ ಶಾಖೆಗಳಿಗೂ ಅನ್ವಯ’: ‘ನಾವು ಮತ್ತು ನಮ್ಮಿಂದ ಆಳಲ್ಪಡುವವರ ನಡುವೆ ವ್ಯಾಖ್ಯಾನಕಾರರಾಗುವ ವರ್ಗವೊಂದನ್ನು ತಯಾರಿಸಲು ನಮ್ಮಿಂದ ಸಾಧ್ಯವಾದಷ್ಟನ್ನು ನಾವು ಮಾಡಬೇಕು– ಭಾರತೀಯ ರಕ್ತ ಮತ್ತು ಬಣ್ಣ ಇದ್ದರೂ ಅಭಿರುಚಿ, ಅಭಿಪ್ರಾಯ, ನೈತಿಕತೆ ಮತ್ತು ಬುದ್ಧಿಮತ್ತೆಯಲ್ಲಿ ಬ್ರಿಟಿಷ್ ಆಗಿರುವ ವರ್ಗ’.

ರಾಜಕೀಯ ವಸಾಹತೀಕರಣ ಮತ್ತು ಆರ್ಥಿಕ ಲೂಟಿಯ ಜೊತೆಗೆ ಭಾರತೀಯ ಜ್ಞಾನ ವ್ಯವಸ್ಥೆಯನ್ನು ಧ್ವಂಸಗೊಳಿಸುವ ಪ್ರಯತ್ನವೂ ನಡೆದಿದೆ ಎಂಬುದನ್ನು ಈ ಟಿಪ್ಪಣಿ ನೆನಪಿಸುತ್ತದೆ. ಪ್ರಧಾನಿ ಪ್ರತಿಪಾದಿಸಿದ ಭಾರತದ ಆಧುನಿಕಪೂರ್ವ ಶಿಕ್ಷಣ ವ್ಯವಸ್ಥೆಯ ಭವ್ಯತೆಯು ಧರಮ್ ಪಾಲ್ ಅವರ ‘ದಿ ಬ್ಯೂಟಿಫುಲ್ ಟ್ರೀ’ ಕೃತಿಯಿಂದ ಸ್ಫೂರ್ತಿ ಪಡೆದಿದೆ ಎಂಬುದು ಸ್ಪಷ್ಟ, ಇದನ್ನು ನಿಕಟ ಪರಿಶೀಲನೆಗೆ ಒಳಪಡಿಸುವ ಅಗತ್ಯ ಇದೆ. ಆದರೆ, ಮೆಕಾಲೆಯ ಯೋಚನೆಯು ಜಾರಿಗೆ ಬಂದಿದೆ ಎಂಬುದರ ಬಗ್ಗೆ ಅವರಿಗೆ ಇರುವ ವಿಷಾದದ ಪ್ರಾಮಾಣಿಕತೆಯ ಕುರಿತು ಸಂದೇಹವೇನೂ ಇಲ್ಲ. ಮೆಕಾಲೆಯನ್ನು ಅನುಸರಿಸಿದ ಶಿಕ್ಷಣ ವ್ಯವಸ್ಥೆಯು ‘ನಮ್ಮ ಆತ್ಮವಿಶ್ವಾಸವನ್ನು ಧ್ವಂಸಗೊಳಿಸಿದೆ’ ಎಂಬುದೂ ನಿಜ. ರಕ್ತ ಮತ್ತು ಬಣ್ಣದಲ್ಲಿ ಮಾತ್ರ ಭಾರತೀಯರಾಗಿರುವ ‘ಕಂದು ಸಾಹೇಬ’ರಿಂದ ನಾವು ಆಳಲ್ಪಟ್ಟಿದ್ದೇವೆ. ಸ್ವಾತಂತ್ರ್ಯಾನಂತರದ ನಮ್ಮ ಶಿಕ್ಷಣ ವ್ಯವಸ್ಥೆಯು ಇದನ್ನು ಮುಂದುವರಿಸಿಕೊಂಡು ಹೋಗಿದೆ ಎಂಬುದೂ ಬಹುಪಾಲು ನಿಜ. ರಾಜಕೀಯ ಸ್ವಾತಂತ್ರ್ಯವೇ ಮಾನಸಿಕ ಗುಲಾಮಗಿರಿಯ ಕುರಿತು ಉದಾಸೀನಗೊಳ್ಳುವಂತೆ ಮಾಡಿದೆ. ಪ್ರಧಾನಿಯು ಗುರುತಿಸಿದ ಸಾಮಾಜಿಕ ಪ್ರವೃತ್ತಿಯಾದ ‘ಆಮದು ಮಾಡಿಕೊಂಡ ಯೋಚನೆಗಳು, ಆಮದು ಮಾಡಿಕೊಂಡ ಸರಕುಗಳು ಮತ್ತು ಆಮದು ಮಾಡಿ ಕೊಂಡ ಸೇವೆಗಳು’ ಎಂಬುದೂ ನಿಜವೇ ಆಗಿದೆ.

ಖೇದಕರವೆಂದರೆ, ಅವರ ಟೀಕಾಕಾರರು ಮುಂದಿಟ್ಟಿರುವ ವಾದಗಳಲ್ಲಿ ಪ್ರಾಮಾಣಿಕತೆ ಕಾಣಿಸುತ್ತಿಲ್ಲ. ಸ್ವಾತಂತ್ರ್ಯಾನಂತರದ ಶಿಕ್ಷಣ ವ್ಯವಸ್ಥೆಯು ವಸಾಹತುಶಾಹಿ ಶಿಕ್ಷಣ ವ್ಯವಸ್ಥೆಯ ಮುಂದುವರಿಕೆ ಅಲ್ಲ ಎಂದು ಕೆಲವರು ಪ್ರತಿಪಾದಿಸಿದ್ದಾರೆ. ಉದ್ದೇಶ ಮತ್ತು ಅಧಿಕೃತ ಘೋಷಣೆಯಲ್ಲಿ ಅದು ಹಾಗೆ ಇರಲಿಕ್ಕಿಲ್ಲ. ಆದರೆ, ಇಂಗ್ಲಿಷ್ ಭಾಷೆಗೆ ಪ್ರಾಧಾನ್ಯ ಇರುವ ವಸಾಹತುಶಾಹಿ ಶಿಕ್ಷಣ ವ್ಯವಸ್ಥೆಯನ್ನು ಮರು ಹೇರಿಕೆ ಮಾಡದೇ ಇದ್ದರೂ ಅದೇ ವ್ಯವಸ್ಥೆಯನ್ನು ಉಳಿಸಿಕೊಳ್ಳಲಾಯಿತು ಎಂಬುದನ್ನು ನಿರಾಕರಿಸಲು ಸಾಧ್ಯವೇ ಇಲ್ಲ. ಟೀಕಾಕಾರರಲ್ಲಿ ಹಲವರು ಆಧುನಿಕ ಶಿಕ್ಷಣ ವ್ಯವಸ್ಥೆ ಮತ್ತು ಇಂಗ್ಲಿಷ್ ಭಾಷೆಯ ಅನುಕೂಲಗಳನ್ನು ಅತಿಯಾಗಿ ಹೊಗಳಿದ್ದಾರೆ; ನಮ್ಮ ಆಧುನಿಕಪೂರ್ವ ಜ್ಞಾನವ್ಯವಸ್ಥೆ ಮತ್ತು ಹಲವು ಭಾಷೆ ಗಳನ್ನು ಬದಿಗೆ ಸರಿಸಿದರೆ ಮಾತ್ರ ಈ ಎಲ್ಲವನ್ನು ಪಡೆದುಕೊಳ್ಳಲು ಸಾಧ್ಯ ಎಂಬ ಗ್ರಹಿಕೆ ಅವರಲ್ಲಿ ಇದೆ. ಮೆಕಾಲೆಯನ್ನು ಒಪ್ಪುವ ಈ ಟೀಕಾಕಾರರು, ಮೆಕಾಲೆ ಶಿಕ್ಷಣ ವ್ಯವಸ್ಥೆಯಿಂದ ಬಂದವರಲ್ಲಿ ‘ಕೀಳರಿಮೆ ಭಾವ ಇದೆ’ ಎಂಬ ಪ್ರಧಾನಿ ಪ್ರತಿಪಾದನೆಗೆ ಪುಷ್ಟಿ ಕೊಟ್ಟಿದ್ದಾರೆ.

ನಿಜವಾದ ಸಮಸ್ಯೆ ಇರುವುದು ಮೋದಿಯವರ ನಿಲುವಿನಲ್ಲಿ ಅಲ್ಲ, ಅವರು ಅಂದುಕೊಂಡದ್ದಕ್ಕಿಂತಲೂ ಹೆಚ್ಚು ಸರಿಯಾಗಿದೆ ಅವರ ವಿಚಾರಗಳು. ವಸಾಹತುಶಾಹಿಯು ತಮ್ಮ ನಿಷ್ಠರನ್ನು ಮಾತ್ರವಲ್ಲ, ಟೀಕಾಕಾರರನ್ನು ಕೂಡ ಬಹಳ ಆಶ್ಚರ್ಯಕರ ರೀತಿಯಲ್ಲಿ ತಮಗೆ ನಿಷ್ಠೆಯಿಂದ ಇರುವಂತೆ ಮಾಡಿಕೊಂಡಿದೆ ಎಂಬುದನ್ನು ನಮ್ಮ ಕಾಲದ ಶ್ರೇಷ್ಠ ಚಿಂತಕರಲ್ಲಿ ಒಬ್ಬರು ಮತ್ತು ವಸಾಹತು ಶಾಹಿಯು ಮನಶ್ಶಾಸ್ತ್ರೀಯವಾಗಿ ಬೀರಿರುವ ಪರಿಣಾಮದ ಗಂಭೀರ ಅಧ್ಯಯನಕಾರನೂ ಆಗಿರುವ ಆಶಿಶ್ ನಂದಿ ನಮಗೆ ನೆನಪಿಸಿದ್ದಾರೆ. ವಸಾಹತುಶಾಹಿಯು ಮಾಡಿದ ಮಾನಸಿಕಗಾಯಗಳು ಆತ್ಮನಷ್ಟದ ಭಾವವನ್ನು ಸೃಷ್ಟಿಸಿದೆ ಮತ್ತು ತನ್ನ ಟೀಕಾಕಾರರು ಕೂಡ ಪಶ್ಚಿಮದ ಮೇಲರಿಮೆಯ ಭಾವವನ್ನು ಅಂತರಂಗೀಕರಿಸಿ ಕೊಂಡು ಪಶ್ಚಿಮದ ಚಿಂತನೆಯನ್ನು ಅರಿವಿಲ್ಲದೆಯೇ ಪುನರುತ್ಪಾದಿಸುತ್ತಾರೆ. ಪಶ್ಚಿಮವು ‘ಆತ್ಮೀಯ ಶತ್ರು’ ಎಂಬ ನಂದಿ ಅವರ ಬಣ್ಣನೆಯು ಸ್ಮರಣೀಯವಾಗಿದೆ. ಆರ್ಎಸ್ಎಸ್ ಪ್ರತಿಪಾದಿಸುವ ರಾಷ್ಟ್ರೀಯವಾದವು ವಸಾಹತುಶಾಹಿ ಹೇರಿದ ಪ್ರತಿಕ್ರಿಯೆಯ ಅನುಕರಣೆಗೆ ಅತ್ಯುತ್ತಮ ಉದಾಹರಣೆಯಾಗಿದೆ.

ಮೋದಿ ಅವರ ರಾಮನಾಥ ಗೋಯೆಂಕಾ ಉಪನ್ಯಾಸವು ಅದಕ್ಕೆ ಉತ್ತಮ ಉದಾಹರಣೆ. ‘ಗವರ್ನೆನ್ಸ್ ಮಾಡೆಲ್’, ‘ಆ್ಯಸ್ಪಿರೇಶನ್’, ‘ಟೂರಿಸಂ’, ‘ಮೇಡ್ ಇನ್ ಇಂಡಿಯಾ’– ತಮ್ಮ ಹಿಂದಿ ಉಪನ್ಯಾಸದಲ್ಲಿ ಇಂಗ್ಲಿಷ್ನ ಈ ಪದಗಳನ್ನು ಅವರು ಬಳಸಿದ್ದಾರೆ. ಅವರು ನೀಡಿದ ಈ ಎಲ್ಲ ಉದಾಹರಣೆಗಳು ಅವರೇ ವಿರೋಧಿಸುತ್ತಿರುವ ‘ಆಮದು ಚಿಂತನೆಗಳು’ ಎಂಬುದರ ಅರಿವು ಬಹುಶಃ ಅವರಿಗೆ ಇದ್ದಿರಲಿಕ್ಕಿಲ್ಲ. ಅವರು ಹೊಸ ರಾಷ್ಟ್ರೀಯ ಶಿಕ್ಷಣನೀತಿಯನ್ನು ಉಲ್ಲೇಖಿಸಿದರು. ವಾಸ್ತವದಲ್ಲಿ ಈ ನೀತಿಯಲ್ಲಿ ಭಾರತೀಯವಾದದ್ದು ಏನೂ ಇಲ್ಲ– ಭಾರತದ ವಾಸ್ತವದ ಜೊತೆಗಿನ ಸಂಬಂಧವನ್ನೇ ಕಳಚಿಕೊಂಡ ಈ ನೀತಿ ದಾಖಲಾತಿಯು ಅಮೆರಿಕದ ಶಿಕ್ಷಣ ನೀತಿಯಾಗಿದ್ದು, ಭಾರತೀಯ ಜ್ಞಾನ ವ್ಯವಸ್ಥೆಯ ಒಗ್ಗರಣೆಯನ್ನು ಅದರ ಮೇಲೆ ಚಿಮುಕಿಸಲಾಗಿದೆ. ಇಂಗ್ಲಿಷ್ ವಿರುದ್ಧ ಮೋದಿ ನೇತೃತ್ವದ ಸರ್ಕಾರ ಎಷ್ಟೇ ಆರ್ಭಟಿಸಿದರೂ, ಬಿಜೆಪಿ ಆಡಳಿತದ ಅವಧಿಯಲ್ಲೇ ಇಂಗ್ಲಿಷ್ ಮಾಧ್ಯಮ ಶಾಲೆಗಳ ಸಂಖ್ಯೆ ಹೆಚ್ಚಾಗಿದೆ.

ಮೋದಿಯವರಿಗೆ ಮೆಕಾಲೆ ಪರಂಪರೆಯಿಂದ ಬಿಡಿಸಿಕೊಳ್ಳುವುದರ ಪೂರ್ಣ ಉದ್ದೇಶವೇ ‘ವಿಕಸಿತ ಭಾರತ’ದ ಗುರಿ ಸಾಧನೆ. ಈ ಅಭಿವೃದ್ಧಿ ಮತ್ತು ಅದರ ಪರಿಣಾಮವಾಗಿ ಆಗುವ ಒಟ್ಟು ಆಂತರಿಕ ಉತ್ಪನ್ನ ಏರಿಕೆಯ ಮಾದರಿಯು ಪಶ್ಚಿಮದ ಬಹಳ ಹಳೆಯದಾದ ಪರಿಕಲ್ಪನೆ. ಇದು ನವ ವಸಾಹತುಶಾಹಿ ಅಲ್ಲದೇ ಇದ್ದರೂ, ಆರ್ಥಿಕತೆಯ ಈ ರೀತಿಯ ಚಿಂತನೆಯ ಭಾಷೆಯು ಮನುಷ್ಯ ಕಲ್ಯಾಣದ ವಿವಿಧ ಆಯಾಮಗಳು ಮತ್ತು ಪರಿಸರ ಸುಸ್ಥಿರತೆಯನ್ನು ಹೊರಗಿಡುತ್ತದೆ. ಜಗತ್ತಿನ ದಕ್ಷಿಣ ಭಾಗದ ಜ್ಞಾನ ಮತ್ತು ಪದ್ಧತಿಗಳನ್ನು ನಿರಾಕರಿಸುತ್ತದೆ. ವಸಾಹತುಶಾಹಿ ಮನಃಸ್ಥಿತಿಯನ್ನು ಕೊನೆಗೊಳಿಸಲು ಕರೆ ನೀಡಿದ ನಾಯಕನೇ ‘ಅವರಿಗೆ ಸಮಾನವಾಗಿ ಬೆಳೆಯಬೇಕು’ ಎಂಬ ಕನಸನ್ನು ಹೊಂದಿರುವುದರಲ್ಲಿ ವಿರೋಧಾಭಾಸ ಇರುವುದಂತೂ ಖಂಡಿತ.

ಈ ಉಪನ್ಯಾಸವು ಒಂದು ಉದಾಹರಣೆ ಮಾತ್ರ. ಆರ್ಎಸ್ಎಸ್, ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಪೂರ್ವಸೂರಿಗಳ ಯಾವುದೇ ಕೃತಿಗಳ ಸರಳ ಓದು ಅವರ ಮೂಲಭೂತ ಚಿಂತನೆಯೇ ಪಶ್ಚಿಮದಿಂದ ಪಡೆದುಕೊಂಡಿರುವುದು ಎಂಬುದನ್ನು ತಿಳಿಸುತ್ತದೆ ಮತ್ತು ಇದು ಭಾರತೀಯ ನಾಗರಿಕತೆಯ ಪರಂಪರೆಗೆ ವ್ಯತಿರಿಕ್ತವಾದುದಾಗಿದೆ. ರಾಷ್ಟ್ರೀಯವಾದ ಎಂಬ ಪರಿಕಲ್ಪನೆಯೇ ಪಶ್ಚಿಮದ ವಿಫಲ ‘ನೇಷನ್–ಸ್ಟೇಟ್’ ಎಂಬುದರ ಅನುಕರಣೆಯಾಗಿದೆ. ಏಕರೂಪ ಸಂಸ್ಕೃತಿ ಮತ್ತು ಅಧಿಕಾರದ ಕೇಂದ್ರೀಕರಣವೇ ಇದರ ಮೂಲಭೂತ ಅಗತ್ಯಗಳಾಗಿವೆ. ಇದು ಭಾರತದ ನಾಗರಿಕತೆಯ ಅನುಭವಕ್ಕೆ ವ್ಯತಿರಿಕ್ತವಾದುದು. ಹಿಂದುತ್ವದ ಅವರ ಗ್ರಹಿಕೆ ಕೂಡ ಏಕದೇವ ಕಲ್ಪನೆಯ ಧರ್ಮಗಳ ಪಡಿಯಚ್ಚಾಗಿದೆ– ಅಂದರೆ,
ಭಾರತವು ಅನುಸರಿಸಿಕೊಂಡು ಬಂದ ಬಹುತ್ವ ಮತ್ತು ಚಲನಶೀಲ ಅಸ್ಮಿತೆಗಳನ್ನು ಅಳಿಸಿ ಹಾಕುವುದೇ
ಇದರ ಉದ್ದೇಶವಾಗಿದೆ. ಇದರ ಬಹಿರಂಗವಾದ ಪೌರುಷ, ಅತಿ ರಾಷ್ಟ್ರೀಯತೆ ಮತ್ತು ಆಕ್ರಮಣ ಕಾರಿ ಬಹುಸಂಖ್ಯಾತವಾದಗಳ ಹಿಂದೆ ಅಂತರಂಗೀಕರಣ ಗೊಂಡ ಕೀಳರಿಮೆಯು ಅಡಗಿಕೊಂಡಿದೆ.

ವಸಾಹತೀಕರಣಗೊಂಡ ಮನಸ್ಸಿನ ಅಗ್ನಿಪರೀಕ್ಷೆ ಎಂದರೆ, ತನ್ನ ಯಜಮಾನನ ರೀತಿಯೇ ಆಗುವ ಕನಸನ್ನು ನನಸು ಮಾಡಿಕೊಳ್ಳುವುದು. ಈಗಿನ ಆಡಳಿತವು ವಸಾಹತುಶಾಹಿ ಮನಃಸ್ಥಿತಿಯ ಅತ್ಯುತ್ತಮ ವಾಹಕವಾಗಿದೆ. ಇಂಗ್ಲಿಷ್ ಮಾತನಾಡುವ ಉನ್ನತರ ಆಳ್ವಿಕೆಗಿಂತ ಕೇಸರಿ ದಿರಿಸಿನಲ್ಲಿರುವ ಮೆಕಾಲೆಯ ಆಳ್ವಿಕೆಯು ಹೆಚ್ಚು ಅಪಾಯಕಾರಿ. ವಸಾಹತುಶಾಹಿಯಿಂದಾಗಿ ಆತ್ಮವನ್ನು ಕಳೆದು ಕೊಂಡಿದ್ದೇವೆ ಎಂಬುದು ರಾಷ್ಟ್ರೀಯವಾದದ ಬೊಬ್ಬೆಯಲ್ಲಿ ಕಳೆದುಹೋಗುತ್ತದೆ. ಆರ್ಎಸ್ಎಸ್ ಮನಃಸ್ಥಿತಿಯಿಂದ ನಾವು ಹೊರಗೆ ಬಂದ ಬಳಿಕ, ಆತ್ಮದ ಶೋಧವು ಗಾಂಧಿ ಮತ್ತು ಟ್ಯಾಗೋರ್ರಿಂದ ಆರಂಭವಾಗಬೇಕು.