* ಸಂಘ ಶತಮಾನದ ಹೊಸ್ತಿಲಲ್ಲಿದೆ. ನಿಮ್ಮ ಆದ್ಯತೆ ಏನು?

ಕೇಂದ್ರ ಸರ್ಕಾರದ ವೇತನಕ್ಕೆ ಸರಿಸಮನಾಗಿ ವೇತನ ನೀಡಬೇಕೆಂಬುದು ಬಹು ದೊಡ್ಡ ಬೇಡಿಕೆ. 20 ರಾಜ್ಯಗಳಲ್ಲಿ ಸಮಾನ
ವೇತನವಿದೆ. ನಮ್ಮಲ್ಲೂ ಜಾರಿಗೆ ತರುವುದಕ್ಕೆ ನನ್ನ ಆದ್ಯತೆ.

* ನೂತನ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ಒಪ್ಪಿಕೊಳ್ಳುವಿರಾ?

ಖಂಡಿತ ಇಲ್ಲ. ಪಿಂಚಣಿ ಪಡೆಯುವ ನಿವೃತ್ತರು 1.20 ಲಕ್ಷದಷ್ಟಿದ್ದಾರೆ. ಎನ್ಪಿಎಸ್ಸಿಬ್ಬಂದಿಯನ್ನು ಹಳೆಯ ಪಿಂಚಣಿ ವ್ಯವಸ್ಥೆಯೊಂದಿಗೆ ವಿಲೀನಗೊಳಿಸುವ ಪ್ರಯತ್ನ ನಡೆದಿದೆ.

ಸರ್ಕಾರದ ರಾಜಸ್ವ ಹೆಚ್ಚಿಸುವಂತೆ ಕೆಲಸ ಮಾಡಿ, ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಹಳೆ ವ್ಯವಸ್ಥೆಗೆ ₹ 15 ಸಾವಿರ ಕೋಟಿಯಿಂದ 20 ಸಾವಿರ ಕೋಟಿ ಬೇಕೆಂದು ಬಿಂಬಿಸಲಾಗುತ್ತಿದೆ. ಆದರೆ ಐದಾರು ಸಾವಿರ ಕೋಟಿ ರೂಪಾಯಿ ಸಾಕು. ಎನ್ಪಿಎಸ್ರದ್ದತಿಗೆ ಸಂಘ ಕಟಿಬದ್ಧ. ಅಗತ್ಯಬಿದ್ದರೆ ಹೋರಾಟಕ್ಕೂ ಸಿದ್ಧ.

* ಸರ್ಕಾರಿ ನೌಕರರು ಜನಸ್ನೇಹಿ ಆಗುವುದು ಯಾವಾಗ?

ಸರ್ಕಾರಿ ಸೌಕರರಲ್ಲಿ ಶೇಕಡ ಎರಡರಷ್ಟು ಮಂದಿ ಜನಸ್ನೇಹಿ ಇರಲಾರರು ಅಷ್ಟೆ. ಅದಕ್ಕಾಗಿ ಇಡೀ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ಅಭಿವೃದ್ಧಿ ಪಥದಲ್ಲಿ ರಾಜ್ಯವು ದೇಶದಲ್ಲಿ 3ನೇ ಸ್ಥಾನದಲ್ಲಿದೆ. ನೌಕರರ ಕೌಶಲ ವೃದ್ಧಿಸುವ ಕೆಲಸ ಮಾಡಿದರೆ ಅವರು ಇನ್ನಷ್ಟು ಜನಸ್ನೇಹಿ ಆಗಬಹುದು.

* ಭ್ರಷ್ಟಾಚಾರ ಕಡಿಮೆ ಆಗುವುದು ಎಂದು?

ಈ ನಿಟ್ಟಿನಲ್ಲಿ ಒಂದು ವ್ಯವಸ್ಥೆ ತಂದಾಗ ಅದು ಕ್ರಮೇಣ ಕಡಿಮೆಯಾಗುತ್ತದೆ. ಸಕಾಲ, ಪಾರದರ್ಶಕ ಟೆಂಡರ್ತಂದರು. ಭ್ರಷ್ಟಾಚಾರ ಕಡಿಮೆ ಆಯಿತು. ಜನ ಬುದ್ಧಿವಂತರಿದ್ದಾರೆ. ಕೊಡುವವರು ಇರುವಾಗ ಪಡೆದುಕೊಳ್ಳುವವರೂ ಇರುತ್ತಾರೆ. ಅಲ್ಪಸ್ವಲ್ಪ ಇರುವ ಭ್ರಷ್ಟಾಚಾರವನ್ನೂ ಶೇಕಡ ನೂರರಷ್ಟು ನಿವಾರಿಸುವ ನಿಟ್ಟಿನಲ್ಲಿ ಯೋಚನೆ ಮಾಡುತ್ತೇವೆ.

* ಸಂಘವನ್ನುನೀವು ಸಹ ಸರ್ಕಾರಕ್ಕೆ ಅಡವು ಇಡುವುದಿಲ್ಲ ತಾನೇ?

ಹಿಂದೆ ಸಂಘಕ್ಕೆ ಸರ್ಕಾರದ ಜತೆಗೆ ಸ್ವಲ್ಪ ‘ಹೊಂದಾಣಿಕೆ’ ಇತ್ತೇನೋ. ನಾವಂತೂ ಹಾಗೆ ಮಾಡುವುದಿಲ್ಲ. ನೌಕರರ ಹಿತಕ್ಕೆ ಪೂರಕ ಆಗಿದ್ದರೆ ಮಾತ್ರ ರಾಜಿ. ಮಾರಕವಾಗಿದ್ದರೆ ರಾಜಿ ಸಾಧ್ಯವೇ ಇಲ್ಲ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟ ನಿಶ್ಚಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.