ಆರೋಗ್ಯ ಇಲಾಖೆಯು ಬೆಂಗಳೂರಿನ ಮೂರು ಸರ್ಕಾರಿ ಆಸ್ಪತ್ರೆಗಳ ರೋಗಿಗಳಿಗೆ ವಿಶೇಷ ಪೌಷ್ಟಿಕ ಆಹಾರ ವಿತರಿಸುವ ಯೋಜನೆಯನ್ನು ಆರಂಭಿಸಿರುವುದು ಒಂದು ಉತ್ತಮ ನಡೆ. ಸರ್ಕಾರದ ಕೆಲವು ಇಲಾಖೆಗಳಾದರೂ ಜನಪರವಾಗಿ ಚಿಂತಿಸುತ್ತಿವೆ ಎನ್ನುವುದಕ್ಕೆ ಈ ಉಪಕ್ರಮವೇ ಸಾಕ್ಷಿ. ‘ಒಂದೇ ರೀತಿಯ ಸಾಮಾನ್ಯ ಆಹಾರದ ಬದಲು, ರೋಗಿಗಳಿಗೆ ಅಗತ್ಯ ಪೌಷ್ಟಿಕಾಂಶ ಒದಗಿಸುವ ಆಹಾರವನ್ನು ನೀಡುವುದು ಈ ಯೋಜನೆಯ ಉದ್ದೇಶ. ರೋಗಿಗಳ ಚೇತರಿಕೆಯಲ್ಲಿ ಚಿಕಿತ್ಸೆಯ ಜತೆಗೆ ಪೌಷ್ಟಿಕ ಆಹಾರದ ಸೇವನೆ ಕೂಡ ಮಹತ್ವದ ಪಾತ್ರವನ್ನು ವಹಿಸುತ್ತದೆ. ಹೀಗಾಗಿ, ನಿರ್ದಿಷ್ಟ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವ ಆಹಾರವನ್ನು ಒದಗಿಸಲಾಗುತ್ತದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ರೋಗಿಗಳ ಆರೋಗ್ಯ ಸ್ಥಿತಿ ಮತ್ತು ವಯಸ್ಸಿಗೆ ಅನುಗುಣವಾಗಿ ಪೌಷ್ಟಿಕಾಂಶದ ಅಗತ್ಯಗಳು ಭಿನ್ನ ಎಂಬುದನ್ನು ಅರಿತುಕೊಂಡಿರುವ ಆರೋಗ್ಯ ಇಲಾಖೆಯು ರೋಗಿಗಳ ವೈದ್ಯಕೀಯ ಅಗತ್ಯಗಳ ಆಧಾರದ ಮೇಲೆ ಆಹಾರವನ್ನು ವಿಂಗಡಿಸಿ, ವಿತರಿಸುವ ವ್ಯವಸ್ಥೆಯನ್ನೂ ಮಾಡಿಕೊಂಡಿದೆ. ಔಷಧ, ಗುಳಿಗೆಗಳ ವಿತರಣೆಯಿಂದಷ್ಟೇ ಆರೋಗ್ಯ ಸುಧಾರಿಸುವುದು ಸಾಧ್ಯವಿಲ್ಲ. ಜನರು ಅಗತ್ಯ ಪ್ರಮಾಣದ ಪೋಷಕಾಂಶ ಮತ್ತು ಖನಿಜಾಂಶಯುಕ್ತ ಆಹಾರ ಸೇವಿಸುವುದು ಕೂಡ ಅಷ್ಟೇ ಅಗತ್ಯ. ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳು ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ವಿಶೇಷ ಪೌಷ್ಟಿಕಾಂಶಗಳನ್ನು ಪಡೆಯುವುದು ಬಹಳ ಮುಖ್ಯ. ಈ ಯೋಜನೆಯು ಇಂಥವರ ಅಗತ್ಯಗಳಿಗೆ ಆದ್ಯತೆ ನೀಡುತ್ತದೆ. ರಕ್ತಹೀನತೆ ಮತ್ತು ಅಪೌಷ್ಟಿಕತೆ ಭಾರತವನ್ನು ದೀರ್ಘಕಾಲದಿಂದ ಕಾಡುತ್ತಿರುವ ಪ್ರಮುಖ ಸಮಸ್ಯೆಗಳು. ಉದಾಹರಣೆಗೆ, ‘ಮಕ್ಕಳ ಪೌಷ್ಟಿಕತೆ ವರದಿ–2024’ ಅನ್ನೇ ಗಮನಿಸಬಹುದು. ಭಾರತದ ಮಕ್ಕಳ ಪೈಕಿ ಶೇ 40ರಷ್ಟು ಮಕ್ಕಳು ಹಸಿವಿನಿಂದ ಬಳಲುತ್ತಿವೆ. ಕುಟುಂಬದಲ್ಲಿನ ಬಡತನವೇ ಅಪೌಷ್ಟಿಕತೆಗೆ ಮುಖ್ಯ ಕಾರಣವಾಗಿದೆ ಎನ್ನುತ್ತದೆ ವರದಿ. ಆಹಾರ ಸೇವನೆಯಲ್ಲಿ ಅಸಮರ್ಪಕತೆ, ಆಹಾರ ಸೇವನೆಯ ವಾತಾವರಣದಲ್ಲಿನ ಮಾಲಿನ್ಯ ಮತ್ತು ಅಗ್ಗದ ಅನಾರೋಗ್ಯಕರ ಆಹಾರ ಸೇವನೆ ಕೂಡ ಅಪೌಷ್ಟಿಕತೆಗೆ ಕಾರಣ. ಆಹಾರದ ಅತಿ ಹೆಚ್ಚಿನ ದರ ಕೂಡ ಹಲವರಿಗೆ ಪೌಷ್ಟಿಕ ಆಹಾರ ದೊರಕದಂತೆ ಮಾಡಿದೆ. ಆಸ್ಪತ್ರೆಗೆ ದಾಖಲಾದ ಬಡರೋಗಿಗಳ ಕುಟುಂಬದವರಿಗೆ ಊಟಕ್ಕೆ ಹಣ ಹೊಂದಿಸುವುದು ಸುಲಭವಲ್ಲ. ಅಂಥವರಿಗೆಲ್ಲ ಪೌಷ್ಟಿಕ ಆಹಾರ ವಿತರಿಸುವ ಯೋಜನೆ ವರದಾನವಾಗಿದೆ.

ನಮ್ಮ ಊಟದಲ್ಲಿ ಹಾಲಿನ ಉತ್ಪನ್ನಗಳು, ಮೊಟ್ಟೆ, ಮಾಂಸ ಮತ್ತು ಮೀನು, ಧಾನ್ಯಗಳು ಮತ್ತು ಬೀಜಗಳು, ವಿಟಮಿನ್ ‘ಎ’ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳು, ಕಾಳು ಮತ್ತು ಗೆಡ್ಡೆಗಳು– ಇವುಗಳನ್ನು ಯಥೇಚ್ಛವಾಗಿ ಬಳಸಬೇಕು ಎನ್ನುವುದು ತಜ್ಞರು ನೀಡುವ ಸಲಹೆ. ವೈವಿಧ್ಯಮಯ ಮತ್ತು ಸಮತೋಲಿತ ಆಹಾರದ ಮಹತ್ವವನ್ನು ಜನರಿಗೆ ಅರ್ಥೈಸುವ ಕೆಲಸವನ್ನೂ ಆರೋಗ್ಯ ಇಲಾಖೆಯು ಮಾಡಬೇಕಿದೆ. ವಿಶೇಷ ಪೌಷ್ಟಿಕ ಆಹಾರ ವಿತರಿಸುವ ಯೋಜನೆಯನ್ನು ರಾಜಧಾನಿಯ ಸರ್ಕಾರಿ ಆಸ್ಪತ್ರೆಗಳಿಗೆ ಮಾತ್ರ ಸೀಮಿತಗೊಳಿಸದೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೂ ವಿಸ್ತರಿಸಬೇಕು. ಏಕೆಂದರೆ, ಯಾದಗಿರಿ, ಕಲಬುರಗಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಬೀದರ್, ಗದಗ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಅಪೌಷ್ಟಿಕತೆ ಹಾಗೂ ರಕ್ತಹೀನತೆಯಿಂದ ಬಳಲುತ್ತಿರುವವರ ಪ್ರಮಾಣ ಹೆಚ್ಚಾಗಿದೆ. ಈ ಭಾಗದಲ್ಲಿ ವಿಶೇಷ ಯೋಜನೆಗಳು ಜಾರಿಯಲ್ಲಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಈ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ. ಎಲ್ಲರಿಗೂ ಪೌಷ್ಟಿಕ ಆಹಾರ ತಲುಪುತ್ತಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುವಂತಹ ವ್ಯವಸ್ಥೆಯೊಂದನ್ನು ಸರ್ಕಾರ ರೂಪಿಸಬೇಕಿದೆ.

ಪೌಷ್ಟಿಕ ಆಹಾರದ ಖಾತರಿಗಾಗಿ ಕುಟುಂಬದ ಬಡತನದ ಸಮಸ್ಯೆಯನ್ನೂ ಬಗೆಹರಿಸಬೇಕಿದೆ. ಬೇಕಾದಷ್ಟು ಪೌಷ್ಟಿಕತೆಯನ್ನು ಒದಗಿಸಬೇಕಿದ್ದರೆ ಮೂಲಭೂತವಾದ ಆಹಾರವಷ್ಟೇ ಸಾಲುವುದಿಲ್ಲ. ಮಹಿಳೆಯರು, ಹಸುಳೆಗಳು ಮತ್ತು ಮಕ್ಕಳಿಗಾಗಿ ಹಲವಾರು ಯೋಜನೆಗಳನ್ನು ಸರ್ಕಾರ ರೂಪಿಸಿದ್ದರೂ ಅವು ಅಗತ್ಯ ಇರುವವರಿಗೆ ಪೌಷ್ಟಿಕತೆಯನ್ನು ಒದಗಿಸುವಲ್ಲಿ ಯಶಸ್ವಿಯಾಗಿಲ್ಲ. ಉತ್ತಮ ಸ್ಥಿತಿಯಲ್ಲಿರುವ ಕುಟುಂಬಗಳು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡುವಂತೆ ಜಾಗೃತಿ ಮೂಡಿಸುವುದು ಮತ್ತೊಂದು ಸವಾಲಾಗಿದೆ. ಹಲವು ಕುಟುಂಬಗಳಲ್ಲಿ ಪೌಷ್ಟಿಕತೆ ಕೊರತೆಯ ಮುಖ್ಯ ಕಾರಣ ಸಂಪನ್ಮೂಲದ ಅಲಭ್ಯತೆ ಅಲ್ಲ, ಬದಲಿಗೆ ಜಾಗೃತಿ ಇಲ್ಲದಿರುವುದಾಗಿದೆ. ಹಾಗಾಗಿ ಜಾಗೃತಿ ಮೂಡಿಸುವುದು ಕೂಡ ಬಹಳ ಮುಖ್ಯವಾದ ಕೆಲಸವಾಗಿದೆ. ಆರೋಗ್ಯಪೂರ್ಣ ಸಮುದಾಯವನ್ನು ನಿರ್ಮಿಸುವಲ್ಲಿ ಇಲಾಖೆಯು ಇಟ್ಟಿರುವ ಈ ಹೆಜ್ಜೆಯು ಪುಟ್ಟದಾದರೂ ಪರಿಣಾಮ ಬೀರುವಂಥದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.