‘ಮೂರಕ್ಕೇ’ ನಿಲ್ಲಿಸದ ತಂದೆತಾಯಿಗಳ ಬಗ್ಗೆ ಸರ್ಕಾರದ ಆದೇಶಕ್ಕೆ ತಡೆ
ಬೆಂಗಳೂರು, ಜುಲೈ 17– 1970 ಜೂನ್ ತಿಂಗಳ ಒಂದರ ಸಮಯದಲ್ಲಿ ಮೂರಕ್ಕಿಂತ ಹೆಚ್ಚು ಮಕ್ಕಳಾದ ಅಥವಾ ಮೂರಕ್ಕಿಂತ ಹೆಚ್ಚಿದ್ದು, ಅಲ್ಲಿಗೇ ನಿಲ್ಲಿಸದೇ ಹೋದ ತಂದೆತಾಯಿಗಳ ಮಕ್ಕಳಿಗೆ ಶೈಕ್ಷಣಿಕ ರಿಯಾಯಿತಿಗಳನ್ನು ನಿಲ್ಲಿಸುವ 1969ರ ಆದೇಶವನ್ನು ಸರ್ಕಾರವು ತಡೆಹಿಡಿದಿದೆ.

ಈ ಸಂಬಂಧದಲ್ಲಿ ಶಾಲೆಗಳಿಗೆ ಪಾಲಕರು ಸಲ್ಲಿಸಬೇಕೆಂದಿರುವ ಅರ್ಜಿ ಮತ್ತು ತಿಳಿವಳಿಕೆ ಪತ್ರಗಳಿಗೆ ಶಾಲೆಗಳಲ್ಲಿ ಒತ್ತಾಯಪಡಿಸಬಾರದು ಎಂದು ಗೆಜೆಟ್ ಪ್ರಕಟಣೆ ತಿಳಿಸಿದೆ.

ಬಂಗಾಳದಲ್ಲಿ ಕುಟುಂಬ ಹಿಡುವಳಿ ಮೇಲೆ ಮಿತಿ
ಕಲ್ಕತ್ತ, ಜುಲೈ 17– ಬಂಗಾಳದಲ್ಲಿ ಕುಟುಂಬದ ಜಮೀನು ಹಿಡುವಳಿ ಮೇಲೆ ಸರ್ಕಾರವು ಶಾಸನದ ಕ್ರಮ ಕೈಗೊಳ್ಳುವ ಯೋಚನೆಯಲ್ಲಿದೆ ಎಂದು ಪ್ರಧಾನಿ ಇಂದಿರಾ ಗಾಂಧಿ ಇಂದು ರಾತ್ರಿ ಇಲ್ಲಿ ಪ್ರಕಟಿಸಿದರು.

ಕುಟುಂಬ ಹಿಡುವಳಿ ಮಿತಿಗೆ ಶಾಸನ ರಚಿಸುವುದರಿಂದ ಅಸಮತೆ ನಿವಾರಣೆಯಾಗುವುದೇ ಅಲ್ಲದೆ ಭೂಹೀನರಿಗೆ ಹಂಚಲು ಹೆಚ್ಚಿನ ಜಮೀನು ದೊರೆಯುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.