ಬದುಕು ಕೊಟ್ಟ ಗುರುವಿಗೆ ಕಾಣಿಕೆ

ಗುರುವಾರ , ಜೂಲೈ 18, 2019
28 °C
ಫಟಾಫಟ್‌

ಬದುಕು ಕೊಟ್ಟ ಗುರುವಿಗೆ ಕಾಣಿಕೆ

Published:
Updated:
Prajavani

-ಡಾ. ಎ.ಟಿ. ಪ್ರಕಾಶ್‌,  ಗುರುವಿಗೆ ‘ರಾಯಲ್‌ ಟ್ರೀಟ್‌’ ನೀಡಿ ಗಮನ ಸೆಳೆದಿರುವ ಹಳೆ ವಿದ್ಯಾರ್ಥಿ ಸಂಘದ ಮುಖಂಡ

ದಾವಣಗೆರೆಯ ಬಾಪೂಜಿ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸದಾಶಿವ ಶೆಟ್ಟಿ ಅವರ 65ನೇ ಜನ್ಮದಿನವನ್ನು, ಕಾಲೇಜಿನ ವಕ್ರದಂತ ವಿಭಾಗದ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ವಿನೂತನವಾಗಿ ಆಚರಿಸಿದ್ದೀರಿ. ಇದಕ್ಕೆ ಪ್ರೇರಣೆಯೇನು?

ತಮ್ಮನ್ನು ಸಂಪೂರ್ಣವಾಗಿ ಬೋಧನೆಗೆ ಸಮರ್ಪಿಸಿಕೊಂಡ ಶಿಕ್ಷಕ ಅವರು. ಪಠ್ಯದ ಜೊತೆಗೆ ಬದುಕಿನ ಶಿಕ್ಷಣವನ್ನೂ ಹೇಳಿಕೊಟ್ಟಿದ್ದರಿಂದ ಇಂದು ನಾವೆಲ್ಲ ಈ ಹಂತಕ್ಕೆ ಬೆಳೆದಿದ್ದೇವೆ. ಹೀಗಾಗಿ, ಅವರ ಜನ್ಮದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ನಿರ್ಧರಿಸಿದೆವು.

ಬಾಪೂಜಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ನಿಮ್ಮ ಜೊತೆಗೆ, ಈ ಕಾರ್ಯಕ್ರಮದ ಇತರ ರೂವಾರಿಗಳು ಯಾರು?

150 ಹಳೆ ವಿದ್ಯಾರ್ಥಿಗಳು ಸೇರಿ ಕಾರ್ಯಕ್ರಮ ಆಯೋಜಿಸಿದ್ದೆವು. ಡಾ. ಅಕ್ಷಯ ಶೆಟ್ಟಿ, ಡಾ. ಪ್ರಶಾಂತ್‌ ಕಾಮತ್‌, ಡಾ.ರಾಜಶೇಖರ್‌ ಅವರು ಬೆಂಗಳೂರಿನ ಕಾರ್ಯಕ್ರಮಗಳ ಉಸ್ತುವಾರಿ ನೋಡಿಕೊಂಡರು. ಸಂಘದ ಇನ್ನೊಬ್ಬ ಮುಖ್ಯಸ್ಥ ಡಾ. ರಾಜೇಶ್‌ ಶೆಟ್ಟಿ ಮೇಲುಸ್ತುವಾರಿ ವಹಿಸಿದ್ದರು. ಮಸ್ಕತ್‌ನ ಡಾ. ವಿಶ್ವಪೂರ್ಣ ಅವರು ಡಾ. ಶೆಟ್ಟಿ ಕುರಿತು ಕಿರುಚಿತ್ರ ತಯಾರಿಸಿಕೊಂಡು ಬಂದಿದ್ದರು.

ಹೆಲಿಕಾಪ್ಟರ್‌, ‘ರೋಲ್ಸ್‌ ರಾಯ್ಸ್‌’ ಕಾರಿನಲ್ಲಿ ಗುರುವಿನ ಸವಾರಿ ಮಾಡಿಸುವ ಯೋಚನೆ ಬಂದಿದ್ದು ಹೇಗೆ?

ನಿವೃತ್ತಿ ಹೊಂದಿದ ದಿನ ಪತ್ನಿಯನ್ನು ಪತಿಯೊಬ್ಬ ಅನಿರೀಕ್ಷಿತವಾಗಿ ಹೆಲಿಕಾಪ್ಟರ್‌ನಲ್ಲಿ ಮನೆಗೆ ಕರೆದುಕೊಂಡು ಹೋಗಿರುವ ವಿಡಿಯೊ ತುಣುಕಿನಿಂದ ಪ್ರೇರಣೆ ಪಡೆದ ವಿಜಯಪುರದ ಡಾ. ರವಿ ಕಲ್ಲೂರು ಅವರು ‘ಹೆಲಿಕಾಪ್ಟರ್‌’ನಲ್ಲಿ ಕರೆದುಕೊಂಡು ಹೋಗುವ ಯೋಜನೆ ರೂಪಿಸಿದ್ದರು. ಬೆಂಗಳೂರಿನಲ್ಲಿ ‘ರೋಲ್ಸ್‌ ರಾಯ್ಸ್‌’ನಲ್ಲಿ ಸುತ್ತಾಡಿಸುವುದನ್ನು ಎಲ್ಲರೂ ಸೇರಿ ನಿರ್ಧರಿಸಿದೆವು.

ಬೆಂಗಳೂರಿನಲ್ಲೇ ಜನ್ಮದಿನದ ಸಮಾರಂಭ ಆಯೋಜಿಸಿದ್ದು ಏಕೆ?

ದಾವಣಗೆರೆಯಲ್ಲಿ ಮುಕ್ತವಾಗಿ ಪಾರ್ಟಿ ಆಯೋಜಿಸಲು ಸೂಕ್ತ ಸ್ಥಳ ಇರಲಿಲ್ಲ. ಜೊತೆಗೆ ಹಳೆ ವಿದ್ಯಾರ್ಥಿಗಳು ದೇಶ–ವಿದೇಶಗಳಿಂದ ಬರುವವರು ಇದ್ದುದರಿಂದ ಬೆಂಗಳೂರನ್ನೇ ಆಯ್ಕೆ ಮಾಡಿಕೊಂಡೆವು.

ಸಂದರ್ಶನ: ವಿನಾಯಕ ಭಟ್‌

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !