ಪ್ರತಿಯೊಬ್ಬ ಪ್ರಜ್ಞಾವಂತ ಮನುಷ್ಯನಲ್ಲಿಯೂ ಒಂದು ಪ್ರಶ್ನೆ ಕಾಡುತ್ತಲೇ ಇರ್ತದ. ಅದೇನೆಂದರ
ಏನಿದು ಜಗತ್ತು ಎನ್ನುವುದು. ಒಬ್ಬ ಬಡವ ಇದ್ದಾನೆ, ಇನ್ನೊಬ್ಬ ಶ್ರೀಮಂತ ಇದ್ದಾನೆ. ಒಬ್ಬ ರೋಗಿ
ಇದ್ದಾನೆ. ಇನ್ನೊಬ್ಬ ಆರೋಗ್ಯವಂತ ಇದ್ದಾನೆ. ಒಬ್ಬ ಶ್ರೇಷ್ಠನಾದ, ಒಬ್ಬ ಕನಿಷ್ಠನಾದ. ಒಬ್ಬನಿಗೆ
ಮಿನರಲ್ ವಾಟರ್ ಕುಡಿದರೂ ನೆಗಡಿ ಬರತೈತಿ, ಇನ್ನೊಬ್ಬನಿಗೆ ಹಳ್ಳದ ನೀರು ಕುಡಿದರೂ ಏನೂ
ಆಗೋದಿಲ್ಲ. ಅಂತರರಾಷ್ಟ್ರೀಯ ಶಾಲೆಯಲ್ಲಿ ಓದಿದವ ಫೇಲ್ ಆಗ್ತಾನ, ಜೋಪಡಿಯಲ್ಲಿ ಹುಟ್ಟಿದ ಮಗ
ಮೊದಲ ಸ್ಥಾನ ಗಳಿಸ್ತಾನ. ಇವೆಲ್ಲ ಯಾವ ಕಾರಣಕ್ಕ ಹಿಂಗಾಗ್ತೈತಿ? ಈ ಶ್ರೇಷ್ಠ ಕನಿಷ್ಠತೆಗಳು
ಯಾಕ?

ಬಹಳಾ ಮಂದಿ ಹೇಳ್ತಾರ, ‘ನಾವು ಬಹಳಾ ಒಳ್ಳೇವ್ರು ಅದೀವ್ರೀ. ಆದ್ರೂ ನಮಗ ಯಾಕ್ ಸಂಕಟ
ಕಾಡ್ತದೆ’ ಅಂತ. ಕಾಡುವುದು ಏನು? ಯಾಕ್ ಈ ವ್ಯತ್ಯಾಸ? ಈ ಜಗತ್ತಿನ ತಾರತಮ್ಯಗಳಿಗೆ ಕಾರಣ
ಯಾರು? ಈ ಜಗತ್ತನ್ನು ಸೃಷ್ಟಿ ಮಾಡಿದ್ದು ದೇವರು ಅನ್ನೋದನ್ನು ನಂಬೋದಾದರ ದೇವರಲ್ಲಿ
ತಾರತಮ್ಯ ಮನೋಭಾವ ಐತಲ್ಲ ಅಂದಂಗೆ ಆತಲ್ಲ. ದೇವರು ಅಂದರ ಎಲ್ಲವನ್ನೂ ಸಮಾನವಾಗಿ
ನೋಡಬೇಕಿತ್ತಲ್ಲ? ದೇವರಲ್ಲೇ ಏನೋ ವ್ಯತ್ಯಾಸ ಆಗಿರಬೇಕು ಅಂತ ಅನಸ್ತದಲ್ಲ. ಆದರೆ ಜ್ಞಾನಿಗಳು
‘ಈ ಬಡತನ, ಸಿರಿತನ, ಸುಖ, ದುಃಖ ಇದಕ್ಕೆಲ್ಲಾ ದೇವರು ಕಾರಣನಲ್ಲ’ ಅಂತಾರ.

ನೀವು ಭೂಮಿಯಲ್ಲಿ ಗೋಧಿ ಬಿತ್ತೀರಿ, ಜೋಳ ಬಿತ್ತೀರಿ, ಅಲಸಂದೆ ಬಿತ್ತೀರಿ. ಮಳೆ ಗೋಧಿಗೆ ಬೇರೆ,
ಅಲಸಂದೆಗೆ ಬೇರೆ, ಜೋಳಕ್ಕೆ ಬೇರೆ ಬೇರೆ ಅಂತ ಆಗಿಲ್ಲ. ಎಲ್ಲದಕ್ಕೂ ಒಂದೇ ಮಳೆ. ಆದರೆ ಎಲ್ಲವೂ
ಒಂದೇ ಕಾಳು ಬಂದಿಲ್ಲ. ಬೇರೆ ಬೇರೆ ಕಾಳುಗಳೇ ಬಂದಾವ. ಮಳೆ ಒಂದೇ ಆಗಿದ್ದರೂ ಕಾಳು ಬೇರೆ
ಬೇರೆ ಯಾಕಾದವು ಅಂದರ ಮಳೆಯಲ್ಲಿ ದೋಷ ಇಲ್ಲ. ಕಾಳುಗಳ ಆಂತರ್ಯದೊಳಗೆ ಯಾವ ಶಕ್ತಿ
ಐತೋ ಅದರಂತೆ ಕಾಳುಗಳಾದವು ಅಷ್ಟೆ. ದೇವರು ಅಂದರ ಮಳೆ ಇದ್ದಂಗೆ. ದೇವರು ಅಂದರ ಕ್ಯಾಟೆಲೆಟಿಕ್ ಏಜೆಂಟ್. ಅಂದರ ನೀರು ಐತಲ್ಲ, ಅದು ಎರಡು ವಸ್ತುಗಳು ಕೂಡಿ ಆಗ್ತದೆ. ಎರಡು ಜಲಜನಕ ಮತ್ತು ಒಂದು ಆಮ್ಲಜನಕ ಸೇರಿದರೆ ನೀರು ಆಗುತ್ತದೆ. ಈ ಎರಡು ವಸ್ತುಗಳು ಕೂಡಲು ಸೂರ್ಯನ ಬೆಳಕು ಬೇಕು. ಸೂರ್ಯನ ಬೆಳಕು ಇಲ್ಲದೆ ನೀರಾಗೋದಿಲ್ಲ. ಆಮ್ಲಜನಕ, ಜಲಜನಕ ಎರಡನ್ನೂ ಒಡೆದು ನೋಡಿ ಅದರೊಳಗೆ ಬೆಳಕಿಲ್ಲ. ಆದರೆ, ಕೂಡಿದರೆ ನೀರಾಗುತ್ತವೆ. ಇದು ನಿಸರ್ಗದ ವೈಶಿಷ್ಟ್ಯ. ದೇವರು ಬೆಳಕಿದ್ದಂಗೆ. ಬೆಳಕಿದ್ದರೆ ಓದಬಹುದು, ಬರಿಯಬಹುದು, ಒಬ್ಬನ ಕಪಾಳಕ್ಕೆ ಹೊಡೆಯಬಹುದು. ಯಾವುದೂ ಬೆಳಕಿನ ದೋಷ ಅಲ್ಲ.

ಮಾಡುವವನ ದೋಷ ಅಷ್ಟೆ. ರಾಮಕೃಷ್ಣ ಪರಮಹಂಸರು ಇದ್ದರು. ಅವರು ನರೇಂದ್ರನನ್ನು
ಮುಟ್ಟಲಿಲ್ಲ. ಸುಮ್ಮನೆ ಹೀಂಗೆ ನೋಡಿದ್ದಕ್ಕೇ ವಿವೇಕಾನಂದ ನಿರ್ಮಾಣ ಆಗಿದ್ದ. ಹಾಂಗಿದ್ದರು
ರಾಮಕೃಷ್ಣ ಪರಮಹಂಸರು. ಕಾಳಿ ದೇವಿಯ ಪರಮ ಭಕ್ತರು ಅವರು. ಅಂಥವರಿಗೆ ಕ್ಯಾನ್ಸರ್ ಆತು.
ಇದಕ್ಕೆ ಕಾರಣ ಯಾರು? ಜೀವನದಲ್ಲಿ ಏನಾದರೂ ತಪ್ಪು ಮಾಡಿದ್ದರೇನು? ಬರೀ ತಪಸ್ಸು
ಮಾಡಿದ್ದರು. ಆದರೂ ಅವರಿಗೆ ಕ್ಯಾನ್ಸರ್ ಆತಲ್ಲ ಯಾಕ? ನಮ್ಮ ಬದುಕಿನಲ್ಲಿ ಬರುವ ಸುಖ ದುಃಖ
ಎಲ್ಲದಕ್ಕೂ ನಾವು ಮಾಡುವ ಕರ್ಮಗಳೇ ಕಾರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.