ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣಗೊಂಡ ಮಗನನ್ನು ಒಳ್ಳೆಯ ಪಿಯು ಕಾಲೇಜಿಗೆ ಸೇರಿಸಬೇಕು ಎಂಬ ಆಸೆ ಹುಬ್ಬಳ್ಳಿಯ ಆ ಪೋಷಕರದ್ದು. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರ ಆಡಳಿತ ಮಂಡಳಿ ಸದಸ್ಯರೊಬ್ಬರನ್ನು ಭೇಟಿಯಾಗಿ, ‘ಆರ್ಟ್ಸ್ (ಕಲಾ) ಕಾಲೇಜಿನಲ್ಲಿ ಒಂದು ಸೀಟು ಕೊಡಿ’ ಎಂದು ಕೋರಿದರು. ಅದಕ್ಕೆ ಆ ಸದಸ್ಯರು, ‘ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣನಾಗಿದ್ದರೂ ಸೈನ್ಸ್ ಕಾಲೇಜಿನಲ್ಲಿ ಸೀಟು ಕೊಡಿಸುವೆ. ಚಿಂತೆ ಮಾಡಬೇಡಿ’ ಎಂದರು. ಮಗನ ಇಚ್ಛೆಗೆ ಮನ್ನಣೆ ಕೊಟ್ಟ ಪೋಷಕರು, ಆರ್ಟ್ಸ್ ಕಾಲೇಜಿನಲ್ಲೇ ಸೀಟು ಪಡೆದು ಸಂತಸಪಟ್ಟರು.

ಅದು ಇಷ್ಟಕ್ಕೇ ಮುಗಿಯಲಿಲ್ಲ. ಮನೆಯ ಸುತ್ತಮುತ್ತಲಿನವರಷ್ಟೇ ಅಲ್ಲದೆ ಗೆಳೆಯರು ಸಹ, ‘ಆರ್ಟ್ಸ್ ಕೊಡಿಸಿ ತಪ್ಪು ಮಾಡಿಬಿಟ್ಟೆ. ಅದಕ್ಕೆ ಭವಿಷ್ಯವೇ ಇಲ್ಲ. ಸೈನ್ಸ್ ಕಷ್ಟವಾದರೆ ಕಾಮರ್ಸ್ ಸೀಟಿಗಾದರೂ ಪ್ರಯತ್ನಿಸಬಹುದಿತ್ತು. ಬೇಗನೇ ಕೆಲಸ ಸಿಗುತ್ತಿತ್ತು. ಹಣವನ್ನೂ ಚೆನ್ನಾಗಿ ಗಳಿಸಬಹುದಿತ್ತು’ ಎಂದೆಲ್ಲ ಹೇಳಿ ಭಯ ಹುಟ್ಟಿಸಿದರು. ಆದರೆ, ಆರ್ಟ್ಸ್ ಹೊರತುಪಡಿಸಿ ಬೇರೆ ಯಾವುದನ್ನೂ ಓದುವುದಿಲ್ಲ ಎಂದು ಮನಸ್ಸು ಗಟ್ಟಿ ಮಾಡಿಕೊಂಡ ಆ ಹುಡುಗ ಮುಂದೆ ಬಿ.ಎ. ಮಾಡಿದ. ನಂತರ ಎಂ.ಎ. ಪದವಿ ಗಳಿಸಿದ. ಪಿಎಚ್.ಡಿ. ಮಾಡಲೂ ಪ್ರಯತ್ನಿಸಿದ. ಸದ್ಯ ಕಾಲೇಜೊಂದರಲ್ಲಿ ಉಪನ್ಯಾಸಕ.

ವಿಷಯ ಇಷ್ಟೇ. ಮೇಲಿನ ಘಟನೆ ನಡೆದು ಎರಡು ದಶಕಗಳೇ ಕಳೆದಿದ್ದರೂ ಶಿಕ್ಷಣದಲ್ಲಿನ ವಿಷಯ ಆಯ್ಕೆ ಕುರಿತ ಬಹುತೇಕ ಜನರ ಮನಃಸ್ಥಿತಿ ಇನ್ನೂ ಬದಲಾಗಿಲ್ಲ. ಈಗಲೂ ವಿಜ್ಞಾನ ಮತ್ತು ವಾಣಿಜ್ಯದ ಕಲಿಕೆಗೆ ಪೈಪೋಟಿ ಇದೆ. ಕಲಾ ವಿಭಾಗದ ಕಲಿಕೆಗೆ ಅಷ್ಟು ಆದ್ಯತೆ ಸಿಗುತ್ತಿಲ್ಲ. ವಿಜ್ಞಾನ, ವಾಣಿಜ್ಯ ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿ ತಲೆ ಎತ್ತುತ್ತಿದ್ದರೆ, ಕಲಾ ಕಾಲೇಜುಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ‘ವಿದ್ಯಾರ್ಥಿಗಳೇ ಬಾರದಿರುವಾಗ, ನಾವು ಕಾಲೇಜು ನಡೆಸುವುದು ಹೇಗೆ?’ ಎಂಬ ಪ್ರಶ್ನೆ ಕಲಾ ಕಾಲೇಜಿನವರದ್ದು. ಇಂಥ ಪರಿಸ್ಥಿತಿ ನಗರ ಪ್ರದೇಶದಲ್ಲಷ್ಟೇ ಅಲ್ಲ, ಗ್ರಾಮೀಣ ಪ್ರದೇಶದಲ್ಲೂ ವ್ಯಾಪಿಸಿದೆ.

ಕಲಾ ವಿಭಾಗ ಎಂದ ಕೂಡಲೇ ಅದು ಕಲೆ ಮತ್ತು ಸಾಮಾನ್ಯ ವಿಷಯಗಳಿಗೆ ಸಂಬಂಧಿಸಿದ್ದು ಎಂಬ ಭಾವನೆ ಹಲವರಲ್ಲಿದೆ. ಆದರೆ, ಆ ವಿಭಾಗದಲ್ಲಿ ಇತಿಹಾಸ, ಭೂಗೋಳಶಾಸ್ತ್ರ, ಮನಃಶಾಸ್ತ್ರ, ರಾಜಕೀಯ ವಿಜ್ಞಾನದಂತಹ ಹಲವು ವಿಷಯಗಳನ್ನು ಕಲಿಯಬಹುದು ಎಂಬುದನ್ನು ಹೆಚ್ಚಿನವರು ಗಮನಿಸುವುದಿಲ್ಲ. ಕಲಾ ವಿಭಾಗದ ವಿಷಯಗಳ ಅಧ್ಯಯನದಿಂದ ಸುತ್ತಮುತ್ತಲ ಜಗತ್ತನ್ನು ವಿಭಿನ್ನ, ಸೃಜನಾತ್ಮಕ ಮತ್ತು ವಿಮರ್ಶಾತ್ಮಕ ದೃಷ್ಟಿಕೋನದಿಂದ ನೋಡಬಹುದು. ಉತ್ತಮ ಸಂವಹನವನ್ನು ರೂಢಿಸಿಕೊಂಡು, ಸಾಮಾಜಿಕ ಬದಲಾವಣೆ ತರಬಹುದು ಎಂಬ ಆಶಾಭಾವವೂ ಬಹುತೇಕರಲ್ಲಿ ಕಾಣಿಸುವುದಿಲ್ಲ.

ಸಾಹಿತ್ಯ, ಸಂಸ್ಕೃತಿ, ಸಮಾಜ, ಕಲೆ, ಇತಿಹಾಸ, ಜೀವನಶೈಲಿಯಂತಹ ವಿಷಯಗಳ ಬಗ್ಗೆ ಆಸಕ್ತಿಯುಳ್ಳವರು ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಲು ಬಯಸುತ್ತಾರೆ. ಅವರಲ್ಲಿ ಬಹಳಷ್ಟು ಮಂದಿ ವಿಜ್ಞಾನ, ತಂತ್ರಜ್ಞಾನ, ಗಣಿತದಂತಹ ವಿಷಯಗಳಿಂದ ದೂರ ಇರುತ್ತಾರೆ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದರೂ, ಪೋಷಕರು ಎಷ್ಟೇ ಒತ್ತಡ ಹೇರಿದರೂ ಅವರ ಮೊದಲ ಆಯ್ಕೆ ಕಲಾ ವಿಭಾಗವೇ ಆಗಿರುತ್ತದೆ. ಕಲಾ ವಿಭಾಗದಲ್ಲಿ ಸಿಗುವ ಪೂರಕ ವಾತಾವರಣದಿಂದ ಅವರು ಹಂತ ಹಂತವಾಗಿ ಸಾಧನೆ ಮಾಡುತ್ತಾರೆ.

ಪರಿಚಯಸ್ಥರ ಮಕ್ಕಳ ಪೈಪೋಟಿ ಎದುರಿಸಬೇಕು, ಕುಟುಂಬದ ಪ್ರತಿಷ್ಠೆ ಕಾಯ್ದುಕೊಳ್ಳಬೇಕು ಮತ್ತು ತಮ್ಮ ಮಕ್ಕಳು ಎಂಜಿನಿಯರ್ ಅಥವಾ ಡಾಕ್ಟರ್ ಆಗಬೇಕು ಎಂದೆಲ್ಲ ಕನಸು ಕಾಣುವ ಮುನ್ನ ಪೋಷಕರು ಓದಿನ ವಿಷಯದ ಆಯ್ಕೆಗೆ ಸಂಬಂಧಿಸಿದಂತೆ ಮಕ್ಕಳ ಜೊತೆ ಚರ್ಚಿಸುವುದು ಒಳಿತು. ನದಿಯ ನೀರು ಹರಿದಂತೆ ಸುಮ್ಮನೆ ಹರಿದುಕೊಂಡು ಹೋಗುವುದರಲ್ಲಿ ಅರ್ಥವಿಲ್ಲ. ಯಾವ ದಿಕ್ಕಿನಲ್ಲಿ, ಯಾಕಾಗಿ ಹರಿದುಕೊಂಡು ಹೋಗುತ್ತಿದೆ ಎನ್ನುವ ಸ್ಪಷ್ಟತೆ ಅಗತ್ಯ. ಮಕ್ಕಳ ಆಲೋಚನೆ ಏನಿದೆ ಮತ್ತು ಅವರಿಗೆ ಯಾವುದರಲ್ಲಿ ಆಸಕ್ತಿ ಇದೆ ಎಂಬುದನ್ನು ಅರಿಯಲು ಪ್ರಯತ್ನಿಸಬೇಕು.

ಬರವಣಿಗೆ, ಇತಿಹಾಸ, ಕಲೆ, ಸಂಸ್ಕೃತಿ, ಸಾಮಾಜಿಕ ಅಧ್ಯಯನ, ಜೀವನ ಸಂಸ್ಕೃತಿ, ರಾಜಕೀಯ ವಿದ್ಯಮಾನದ ಬಗ್ಗೆ ಆಸಕ್ತಿಯಿದ್ದರೆ, ಕಲಾ ವಿಭಾಗ ಆಯ್ಕೆ ಮಾಡಿಕೊಳ್ಳಲು ಮಕ್ಕಳಿಗೆ ಅವಕಾಶ ಮಾಡಿಕೊಡಬೇಕು. ‘ಒತ್ತಾಯದಿಂದ ಒಪ್ಪಿದ್ದೇವೆ’ ಎನ್ನುವ ಬದಲು, ‘ಸೂಕ್ತ ನಿರ್ಣಯ ತೆಗೆದುಕೊಂಡ ಬಗ್ಗೆ ಖುಷಿಯಿದೆ’ ಎಂದು ಮನವರಿಕೆ ಮಾಡಬೇಕು. ಹೀಗೆ ಮಾಡದಿದ್ದರೆ, ಮೊಳಕೆಯನ್ನು ಆರಂಭದಲ್ಲೇ ಚಿವುಟಿದಂತೆ ಆಗುತ್ತದೆ.

ಮಕ್ಕಳು ಇಷ್ಟಪಟ್ಟಿದ್ದನ್ನು ಕಲಿಯಲಿಕ್ಕೆ ಅವಕಾಶ ಕಲ್ಪಿಸದೆ ಹೋದರೆ, ಅದರ ಪರಿಣಾಮ ಅವರ ಆರೋಗ್ಯದ ಮೇಲೆ ಬೀರುವ ಸಾಧ್ಯತೆ ಇರುತ್ತದೆ. ಇಂಥ ಶಿಕ್ಷಣ ಶ್ರೇಷ್ಠ ಅಥವಾ ಅಂಥ ಶಿಕ್ಷಣ ಕನಿಷ್ಠ ಎಂಬ ಭಾವನೆಯನ್ನು ಪೋಷಕರು ತೊಡೆದು ಹಾಕಬೇಕು. ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಬಲ್ಲ, ಬದುಕಿಗೆ ಆಸರೆ ಆಗಬಲ್ಲ, ಖುಷಿಯಿಂದ ಓದಬಲ್ಲ ಮತ್ತು ಕಲಿಕಾಸಕ್ತಿ ಮೂಡಿಸಬಲ್ಲ ವಿಷಯಕ್ಕೆ ಆದ್ಯತೆ ನೀಡಬೇಕು.

ಮಕ್ಕಳ ಮನಸ್ಸನ್ನು ಅರಿತುಕೊಳ್ಳದೇ ಹೋಗುವುದು ಹಾಗೂ ಅವರ ಭಾವನೆಗಳಿಗೆ ಸ್ಪಂದಿಸದೇ ಇರುವುದು ಪೋಷಕರಾಗಿ ನಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿನ ವೈಫಲ್ಯವಲ್ಲದೇ ಬೇರೇನೂ ಅಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.