ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ಖರೀದಿಸಿದ್ದ ನನ್ನ ಹಿರಿಯ ಮಿತ್ರರೊಬ್ಬರು ಅಂಗಡಿಯವನಿಗೆ 28 ರೂಪಾಯಿ ಪಾವತಿ ಮಾಡಬೇಕಾಗಿತ್ತು. ಅವರು ನೂರು ರೂಪಾಯಿಯ ನೋಟು ಕೊಟ್ಟು ಉಳಿದ ಹಣ ಕೊಡಲು ಕೇಳಿದರು. ‘ಚಿಲ್ಲರೆ ಇಲ್ಲ, ಫೋನ್ ಪೇ ಮಾಡಿ ಸ್ವಾಮಿ’ ಎಂದು ಅಂಗಡಿಯ ಮಾಲೀಕ ವಿನಂತಿ ಮಾಡಿದರು. ‘ನನ್ನ ಮೊಬೈಲ್ನಲ್ಲಿ ಫೋನ್ ಪೇ ಸೌಲಭ್ಯ ಇಲ್ಲ’ ಎಂದು ನನ್ನ ಮಿತ್ರ ಹೇಳಿದರು. ಅಂಗಡಿ ಮಾಲೀಕ ಎಪ್ಪತ್ತು ರೂಪಾಯಿ ಮತ್ತು ಎರಡು ರೂಪಾಯಿ ಬೆಲೆಯ ಚಾಕೊಲೇಟ್ ಕೊಟ್ಟು ವ್ಯವಹಾರ ಮುಗಿಸಿದರು.

ಅಲ್ಲಿಂದ ನಾವಿಬ್ಬರೂ ಮುಂದಕ್ಕೆ ನಡೆದುಕೊಂಡು ಬರುವಾಗ ‘ಕಾಲ್ ಮಾಡುವುದಕ್ಕೆ ಮಾತ್ರ ಫೋನ್ ಉಪಯೋಗಿಸುತ್ತೇನೆ. ಫೋನ್ ಪೇ, ಮೆಸೇಜ್, ವಾಟ್ಸ್ಆ್ಯಪ್ ಯಾವುದೂ ಮಾಡುವುದಿಲ್ಲ. ಇವುಗಳನ್ನು ಮಾಡುವ ವಿಧಾನವನ್ನೂ ಕಲಿತುಕೊಂಡಿಲ್ಲ. ಇಲ್ಲಿ ರಿಸ್ಕ್ ಇದೆ. ಫ್ರಾಡ್ ನಡೆಯುತ್ತಿರುವ ವರದಿಗಳು ಬರುತ್ತಲೇ ಇರುತ್ತವೆ. ವಯಸ್ಸಾಯಿತು, ಅವೆಲ್ಲ ನಮಗೆ ಯಾಕೆ’ ಎಂದು ಮಿತ್ರ ಪ್ರಶ್ನಿಸಿದರು.

ನನ್ನ ಈ ಮಿತ್ರರೊಬ್ಬರೇ ಅಲ್ಲ, ಬಹಳಷ್ಟು ಹಿರಿಯರು ಇಂತಹುದೇ ಪ್ರಶ್ನೆಯನ್ನು ಕೇಳುತ್ತಾರೆ. ಅವರು ಮೊಬೈಲ್ ಫೋನ್ನ ಸಮರ್ಪಕ ಬಳಕೆಯಿಂದ ದೂರ ಉಳಿದಿದ್ದಾರೆ. ವಯಸ್ಸಾಗಿದೆ, ಹೊಸದನ್ನು ಕಲಿಯುವುದು ಬೇಡ ಎನ್ನುವ ಮನೋಭಾವದಲ್ಲಿ, ಸುಲಭವಾಗಿ ದಕ್ಕುವ ಹಲವಾರು ಅನುಕೂಲಗಳನ್ನು ಹಿರಿಯರು ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಅವರಿಗೆ ಮಾತ್ರವಲ್ಲ, ಅವರೊಂದಿಗೆ ವ್ಯವಹರಿಸುವವರಿಗೂ ತೊಂದರೆಯಾಗುತ್ತಿದೆ ಎಂಬುದು ಗಮನಿಸಬೇಕಾದ ಸಂಗತಿ.

ನಮ್ಮ ಮನೆಯ ಸಮೀಪದಲ್ಲಿ ಪ್ರಭಾವಿ ನಾಯಕರೊಬ್ಬರ ತಂದೆ ವಾಸವಾಗಿದ್ದಾರೆ. ಅವರ ಮಗನ ನಂಬರ್ ಕೇಳಿಕೊಂಡು ಅವರಿಗೆ ಫೋನ್ ಕರೆಗಳು ಆಗಾಗ ಬರುತ್ತಲೇ ಇರುತ್ತವೆ. ಅವರು ಅವರಿವರ ಬಳಿ ಹೋಗಿ ವಿನಂತಿ ಮಾಡಿಕೊಂಡು, ಮಗನ ಫೋನ್ ನಂಬರ್ ಅನ್ನು ಮೆಸೇಜ್ ಮಾಡಿಸುತ್ತಾರೆ. ಆದರೆ ತಾವು ಮಾತ್ರ ಫೋನ್ನಲ್ಲಿ ಮೆಸೇಜ್ ಮಾಡುವುದನ್ನು ಕಲಿತುಕೊಳ್ಳಲು ಸಿದ್ಧರಿಲ್ಲ. ಪತ್ರಿಕೆಗಳು ಡಿಟಿಪಿ ಮಾಡಿ ಇ– ಮೇಲ್ ಮೂಲಕ ಕಳುಹಿಸಿದ ಲೇಖನ, ಬರಹಗಳನ್ನು ಗಮನಿಸಿ ಪ್ರಕಟಿಸು ತ್ತವೆ. ಪುಸ್ತಕ ಪ್ರಕಾಶಕರು ಕೂಡ ಡಿಟಿಪಿ ಬರಹಗಳನ್ನು ಕೇಳುತ್ತಾರೆ. ಕೈಬರಹದಲ್ಲಿ ಕಳುಹಿಸಿದ ಬರಹಗಳನ್ನು ಗಮನಿಸುವುದು ಕಡಿಮೆಯಾಗಿದೆ.

ಬಹಳಷ್ಟು ಹಿರಿಯರು ಮೊಬೈಲ್ ಫೋನ್ ಅಥವಾ ಕಂಪ್ಯೂಟರ್ನಲ್ಲಿ ಟೈಪ್ ಮಾಡುವುದನ್ನು ಕಲಿತುಕೊಂಡಿಲ್ಲ. ಡಿಟಿಪಿ ಸೆಂಟರ್ಗಳಿಗೆ ಹೋಗಿ ಟೈಪ್ ಮಾಡಿ ಬರಹಗಳನ್ನು ಕಳುಹಿಸುವುದು ಕಷ್ಟದ ಕೆಲಸ. ಕೆಲವರು ತಮ್ಮ ಮಕ್ಕಳು, ಕುಟುಂಬದ ಸದಸ್ಯರಿಗೆ ತಮ್ಮ ಬರಹಗಳನ್ನು ಡಿಟಿಪಿ ಮಾಡಲು ಸೂಚಿಸುತ್ತಾರೆ. ಕೆಲಸದ ಒತ್ತಡದಿಂದ ಅವರು ಕೆಲವು ಸಲ ನಿರಾಕರಿಸು ತ್ತಾರೆ. ಇದರಿಂದ ಕುಟುಂಬದಲ್ಲಿ ಅಸಮಾಧಾನ ಹುಟ್ಟಿಕೊಳ್ಳುತ್ತದೆ. ಹೀಗಾಗಿ, ಅನೇಕ ಹಿರಿಯ ಲೇಖಕರು, ಕವಿಗಳು, ಚಿಂತಕರು ಪತ್ರಿಕೆಗಳಿಗೆ ಬರೆಯುವುದನ್ನೇ ಕಡಿಮೆ ಮಾಡಿದ್ದಾರೆ. ಮೊಬೈಲ್ನಲ್ಲಿ ಎಲ್ಲ ಭಾಷೆಗಳಲ್ಲಿ ಲೇಖನಗಳನ್ನು ಸಿದ್ಧಪಡಿಸಿ ಇ– ಮೇಲ್ ಮೂಲಕ ಕಳುಹಿಸುವುದಕ್ಕೆ ಸರಳ ಅವಕಾಶವಿದೆ. ಧ್ವನಿಯ ಮೂಲಕ ಬರಹಗಳನ್ನು ಸಿದ್ಧಪಡಿಸ
ಬಹುದಾಗಿದೆ.

ಡಿಜಿಟಲ್ ತಂತ್ರಜ್ಞಾನದ ಕ್ರಾಂತಿಯು ಮಾನವನ ಜೀವನದಲ್ಲಿ ಬಹಳಷ್ಟು ಬದಲಾವಣೆ ಗಳನ್ನು ತಂದಿದೆ. ಅದು ಅನೇಕ ಅನುಕೂಲಗಳನ್ನು ಒದಗಿಸಿದೆ. ಮೊಬೈಲ್ ಫೋನ್, ಟಿ.ವಿ., ಇ– ಮೇಲ್, ಫೇಸ್ಬುಕ್, ಎಕ್ಸ್, ಲೊಕೇಶನ್ ಮ್ಯಾಪ್ ಇವಷ್ಟೇ ಅಲ್ಲದೆ ಈ ಸಂಶೋಧನೆಗಳ ವಿಸ್ತೃತ ರೂಪ, ಅಂದರೆ ಕುಳಿತಲ್ಲೇ ಸ್ಮಾರ್ಟ್ಫೋನ್ ಮೂಲಕ ಬಸ್, ವಿಮಾನ, ರೈಲು ಟಿಕೆಟ್ ಕಾಯ್ದಿರಿಸುವುದು, ಹಣದ ವಿನಿಮಯ, ಮುಖಾಮುಖಿ ಮಾತು ಎಲ್ಲವನ್ನೂ ಮಾಡಬಹುದಾಗಿದೆ. ಇವು ಡಿಜಿಟಲ್ ತಂತ್ರಜ್ಞಾನದ ಕೊಡುಗೆಯಾಗಿವೆ.

ತಂತ್ರಜ್ಞಾನದ ದೈತ್ಯಶಕ್ತಿ ಮತ್ತು ಅಗಾಧ ಸಾಧ್ಯತೆ ಇನ್ನೂ ಬೆಳೆಯುತ್ತಲೇ ಇದೆ. ಮೈಕ್ರೊಚಿಪ್
ಆವಿಷ್ಕಾರದಿಂದಾಗಿ ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ.

ಓದಲು ಹಾಗೂ ಬರೆಯಲು ಬಾರದವರನ್ನು ಅನಕ್ಷರಸ್ಥರು ಎಂದು ಗುರುತಿಸಲಾಗುತ್ತಿತ್ತು. ಆದರೆ ಇಂದು ಮೊಬೈಲ್ ಫೋನ್, ಕಂಪ್ಯೂಟರ್ ಬಳಕೆ ಅರಿಯದವರನ್ನು ಅನಕ್ಷರಸ್ಥರು ಎಂದು ಕರೆಯುವ ಕಾಲಘಟ್ಟದಲ್ಲಿ ನಾವು ಇದ್ದೇವೆ. ಇಂತಹ ಸಂದರ್ಭದಲ್ಲಿ ಹಿರಿಯ ನಾಗರಿಕರು ಮೊಬೈಲ್ ಫೋನ್ನ ನಿರ್ವಹಣೆಯನ್ನು ಕಲಿತುಕೊಳ್ಳುವುದು ಬಹಳ ಅವಶ್ಯವಾಗಿದೆ. ಮೊಬೈಲ್ ಫೋನ್ ನಿರ್ವಹಣೆಯನ್ನು ಕಲಿತು ಕೊಳ್ಳುವುದಕ್ಕೆ ಹೆಚ್ಚು ಸಮಯ ಬೇಕಾಗುವುದಿಲ್ಲ. ಆಸಕ್ತಿಯಿಂದ ಗಮನಿಸಿದರೆ ಎಲ್ಲ ವಿಧಾನಗಳನ್ನೂ ಅರಿತುಕೊಳ್ಳಬಹುದು.

ಮೊಬೈಲ್ ಫೋನ್ನ ನಿರ್ವಹಣೆಯು ಬದುಕಿಗೆ ಹೊಸ ಗತಿಯನ್ನು ತಂದುಕೊಡುತ್ತದೆ. ಮಾನಸಿಕವಾಗಿ ಮುಪ್ಪನ್ನು ಗೆಲ್ಲಲು ಸಹಕರಿಸುತ್ತದೆ. ಕವಿತೆ, ಲೇಖನ, ಪ್ರಬಂಧಗಳನ್ನು ಪತ್ರಿಕೆಗಳಿಗೆ ಕಳುಹಿಸಿ, ಆಪ್ತೇಷ್ಟರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿ, ಹಾಡು ಕೇಳಿ, ಸ್ವತಃ ಕಥೆ ಹೇಳಿ ಸಂತೋಷಪಡಬಹುದು. ಬೇಕಾದ ಮಾಹಿತಿಯನ್ನು ಹುಡುಕಿ ತೆಗೆಯಬಹುದು. ಹಿರಿಯ ನಾಗರಿಕರೇ, ಮೊಬೈಲ್ ಫೋನ್ನ ಅರ್ಥಪೂರ್ಣ ಬಳಕೆಯ ಖುಷಿ ನಿಮ್ಮದಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.