ರಾಜ್ಯ ಸರ್ಕಾರದ ಇಲಾಖೆ, ಮಂಡಳಿ, ನಿಗಮದಲ್ಲಿ ಯಾವುದೋ ಹುದ್ದೆಗೆ ನೇಮಕವಾಗುವ ಕೆಲವರು, 10ನೇ ತರಗತಿಯನ್ನು ಕನ್ನಡ ಮಾಧ್ಯಮದಲ್ಲಿ ಪಾಸು ಮಾಡಿರುವುದಿಲ್ಲ, ಅಥವಾ 10ನೇ ತರಗತಿಯಲ್ಲಿ ಕನ್ನಡವನ್ನು ಒಂದನೇ ಅಥವಾ ಎರಡನೆಯ ಭಾಷೆಯಾಗಿ ಓದಿ ಪಾಸು ಮಾಡಿರುವುದಿಲ್ಲ. ಅಂಥವರು 2 ವರ್ಷದ ತಮ್ಮ ಪ್ರೊಬೆಷನರಿ ಅವಧಿ ಮುಗಿಯುವುದರೊಳಗೆ ‘ಕೆಪಿಎಸ್ಸಿ’ ನಡೆಸುವ ‘ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ’ಯನ್ನು ಪಾಸು ಮಾಡಬೇಕು. ಇಲ್ಲವಾದರೆ, ಅವರ ವೇತನ ಬಡ್ತಿ ಮತ್ತು ಪದಬಡ್ತಿಯನ್ನು ತಡೆಹಿಡಿಯಲಾಗುವುದು.

ಇದೇ ನಿಯಮವನ್ನು ಕೆಪಿಟಿಸಿಎಲ್, ಎಸ್ಕಾಂಗಳೂ ಅನುಸರಿಸುತ್ತವೆ. ಕೆಲವು ನೇಮಕಾತಿಗಳಲ್ಲಿ ಹುದ್ದೆಗೆ ತಕ್ಕ ವಿದ್ಯಾರ್ಹತೆ ಇದ್ದ ಹೊರತಾಗಿಯೂ, ಅದಕ್ಕೆ ತಕ್ಕ ತಾಂತ್ರಿಕ ವಿಷಯದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಮುಂಚೆ ಅಭ್ಯರ್ಥಿಗಳು ನೇಮಕಾತಿಪೂರ್ವ ಕನ್ನಡ ಪರೀಕ್ಷೆಯನ್ನು ಬರೆದು ಪಾಸು ಮಾಡಬೇಕು, ಇಲ್ಲವಾದರೆ ಅವರಿಗೆ ಮುಂದಿನ ಅರ್ಹತಾ ಪರೀಕ್ಷೆಗಳನ್ನು ಬರೆಯಲು ಅನುಮತಿ ಇರುವುದಿಲ್ಲ.

ಸಾಮಾನ್ಯವಾಗಿ ಇಂಥ ಇಲಾಖಾ ಕನ್ನಡ ಪರೀಕ್ಷೆಗಳನ್ನು ಬರೆಯಬೇಕಾದ ಅಭ್ಯರ್ಥಿಗಳು, ಕೆಲವೊಮ್ಮೆ ಕನ್ನಡ ಮಾತೃಭಾಷೆಯವರೇ ಆಗಿದ್ದರೂ, ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತು, ಇಂಗ್ಲಿಷ್–ಹಿಂದಿ ಅಥವಾ ವಿದೇಶೀ ಭಾಷೆಯೊಂದನ್ನು ಪ್ರಥಮ, ದ್ವಿತೀಯ ಭಾಷೆಯನ್ನಾಗಿ ಕಲಿತಿರುತ್ತಾರೆ. ಕನ್ನಡ ಮಾತೃಭಾಷೀಯರೇ ಆಗಿದ್ದರೂ, ಕನ್ನಡದಲ್ಲಿ ಓದು–ಬರಹ ಕಲಿತಿರುವುದಿಲ್ಲವಾದ್ದರಿಂದ ಪರೀಕ್ಷೆ ಅಷ್ಟರಮಟ್ಟಿಗೆ ಕಷ್ಟಕರವಾಗಿರುತ್ತದೆ. ಆದರೂ ಒಂದೆರಡು ತಿಂಗಳ ಸೂಕ್ತ ತರಬೇತಿಯ ನಂತರ ಇವರು ಕಡ್ಡಾಯ ಕನ್ನಡ ಪರೀಕ್ಷೆಯನ್ನು ಪಾಸು ಮಾಡಿಕೊಳ್ಳುತ್ತಾರೆ.

ಪರೀಕ್ಷೆಯಲ್ಲಿ ಫೇಲಾಗುವ ಜಾಲದಲ್ಲಿ ಸಿಲುಕಿಕೊಳ್ಳುವವರು, ಉರ್ದು, ತಮಿಳು, ಮರಾಠಿ, ಕೊಂಕಣಿ ಮುಂತಾದ ಕನ್ನಡೇತರ ಮಾತೃಭಾಷಿಕರು.

ಮುಖ್ಯ ಸಮಸ್ಯೆ ಶುರುವಾಗುವುದೇ ಇಂಥ ಪರೀಕ್ಷೆಗಳಿಗಾಗಿ ಕೆಪಿಎಸ್ಸಿ ನಿಗದಿಪಡಿಸಿರುವ ಪಠ್ಯಕ್ರಮದಲ್ಲಿ. ಇದರಲ್ಲಿ ಎರಡು ಲಿಖಿತ ಪತ್ರಿಕೆ ಇರುತ್ತವೆ: 100 ಅಂಕಗಳಿಗೆ ಪಠ್ಯವನ್ನು ಆಧರಿಸಿದ ಪತ್ರಿಕೆ, ಇನ್ನೊಂದು 50 ಅಂಕಗಳಿಗೆ ಭಾಷಾಂತರ ಪರೀಕ್ಷೆ. ಉದ್ದೇಶ ಇರುವುದು ಇಂಥ ಪರೀಕ್ಷೆಯನ್ನು ಪಾಸು ಮಾಡಿದ ನಂತರ ಅಭ್ಯರ್ಥಿಗಳು ತಮ್ಮ ಹುದ್ದೆಗಳ ಆಡಳಿತ ನಿರ್ವಹಣೆಯಲ್ಲಿ ಕನ್ನಡವನ್ನು ಬಳಸಬೇಕು ಎನ್ನುವುದು. ಆದರೆ, ಪಠ್ಯ ಇರುವುದು ಮಾತ್ರ, ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಥಮ ಭಾಷೆಗಾಗಿ ಬಳಸುವ 6ನೇ ತರಗತಿ ಪುಸ್ತಕ!

ಕನ್ನಡವನ್ನು ಪ್ರಥಮ ಭಾಷೆ ಯನ್ನಾಗಿ ಕಲಿತು ಬರುವ ಮಕ್ಕಳು, ಆರು ವರ್ಷಗಳ ಕಾಲ ಶಿಕ್ಷಕರ ಮಾರ್ಗದರ್ಶನದಲ್ಲಿ ಕಲಿತು ಪರೀಕ್ಷೆಯನ್ನು ಎದುರಿಸಿ ಪಾಸು ಮಾಡುವ ಅಗತ್ಯವೂ ಇಲ್ಲದ ಒಂದು ಪುಸ್ತಕ, ಕನ್ನಡದಲ್ಲಿ ಮೂಲಭೂತ ಸಾಕ್ಷರತೆಯೂ ಇಲ್ಲದ ಕನ್ನಡೇತರ ಮಾತೃಭಾಷೀಯರು ತಾವಾಗಿಯೇ ಕಲಿತುಕೊಂಡು ಕಡ್ಡಾಯವಾಗಿ ಪಾಸು ಮಾಡಬೇಕಾದ ಪರೀಕ್ಷೆಯ ಪಠ್ಯವಾಗಿದೆ!

6ನೇ ತರಗತಿ ಪುಸ್ತಕದ ಪಠ್ಯದಲ್ಲಿ ಕಚೇರಿ ಆಡಳಿತಕ್ಕೆ ಅಗತ್ಯವಾದ ಕನ್ನಡ ಭಾಷಾಕೌಶಲವನ್ನು ಕಲಿಯುವ ಪಾಠ–ಅಭ್ಯಾಸ ಖಂಡಿತ ಇಲ್ಲ. ಗದ್ಯ, ಪದ್ಯ, ಸಂಧಿ, ಸಮಾಸ, ಛಂದಸ್ಸು ಇತ್ಯಾದಿ ಸಾಹಿತ್ಯಕ ಅಂಶಗಳಿಗೇ ಪಠ್ಯದಲ್ಲಿ ಒತ್ತು. ಕಚೇರಿಯಲ್ಲಿ ಕೆಲಸ ಮಾಡಬೇಕಾಗಿರುವವರು ಈ ಶೈಲಿಯನ್ನು ಕಲಿತರೆ ಏನು ಪ್ರಯೋಜನ? ಹಾಗೆಯೇ ಸರ್ಕಾರಿ ನೌಕರಿಯಲ್ಲಿರುವವರು ಎಲ್ಲರೂ ಇಂಗ್ಲಿಷ್–ಕನ್ನಡ ಅನುವಾದ ಮಾಡುವ ಅಗತ್ಯವೆಲ್ಲಿರುತ್ತದೆ. ಆದರೂ 50 ಅಂಕಗಳ ಕಠಿಣವಾದ ಭಾಷಾಂತರ ಪತ್ರಿಕೆಯನ್ನು ಬರೆದು ಪಾಸು ಮಾಡಬೇಕು. ಹೋಗಲಿ, 10ನೇ ತರಗತಿ ಅಥವಾ ಅದಕ್ಕೂ ಉನ್ನತ ಮಟ್ಟದಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಓದಿ ಉತ್ತಮ ಅಂಕ ಬಳಸಿ ಪಾಸು ಮಾಡಿದ್ದು, ಸರ್ಕಾರದ ನೌಕರರಾಗಿರುವವರಿಗೆ ಆಡಳಿತದಲ್ಲಿ ಕನ್ನಡವನ್ನು ಬಳಸುವ ಕೌಶಲ ಕರಗತವಾಗಿರುತ್ತದೆಯೇ? ಖಂಡಿತ ಇಲ್ಲ. ಹೀಗಾಗಿ ಕಡ್ಡಾಯ ಕನ್ನಡ ಪರೀಕ್ಷೆಗಳ ಉದ್ದೇಶವೇ ಬೇರೆ, ಅದಕ್ಕಾಗಿ ಇಟ್ಟಿರುವ ಪಠ್ಯವೇ ಬೇರೆ. ಈ ಎಲ್ಲಾ ಕಾರಣಗಳಿಗಾಗಿ ಕನ್ನಡೇತರರು ಈ ಪರೀಕ್ಷೆಗಳನ್ನು ಹಲವು ಬಾರಿ ಪ್ರಯತ್ನಿಸಿದರೂ ಫೇಲಾಗುವುದೇ ಹೆಚ್ಚು.

ಇನ್ನೊಂದು ಉದಾಹರಣೆ ನೋಡುವುದಾದರೆ, ಕೆಪಿಟಿಸಿಎಲ್ ಮತ್ತು ಎಸ್ಕಾಂ ಸಂಸ್ಥೆಗಳು ನಡೆಸುವ ಕನ್ನಡ ಪರೀಕ್ಷೆಗಳಲ್ಲಿ 100 ಅಂಕಕ್ಕೆ ಇಟ್ಟಿರುವ ಪಠ್ಯ, ‘ಸಣ್ಣ ಕಥೆಗಳು’ ಎನ್ನುವ 11 ಕಥೆಗಳ ಸಂಚಯ. ಮತ್ತು ಇದಕ್ಕೂ ಅವರ ಉದ್ದೇಶಕ್ಕೂ ನೇರ ಸಂಬಂಧವಿಲ್ಲ. ಇಲ್ಲಿಯೂ 50 ಅಂಕಗಳ ಇಂಗ್ಲಿಷ್–ಕನ್ನಡ ಭಾಷಾಂತರ ಇದೆ. ಇಲ್ಲಿ ತಾಂತ್ರಿಕ ಸಾಮಗ್ರಿಯನ್ನು ನೀಡಲಾಗುತ್ತದೆ. ವಿಶೇಷ ತೀವ್ರತರ ತರಬೇತಿ ಇಲ್ಲದಿದ್ದರೆ ಅಭ್ಯರ್ಥಿಗಳು ಫೇಲಾಗುವುದೇ ಹೆಚ್ಚು.

ಸರ್ಕಾರದ ಉದ್ದೇಶ ನಿಜವಾಗಿಯೂ ತಮ್ಮೆಲ್ಲಾ ಅಭ್ಯರ್ಥಿಗಳು ಆಡಳಿತದಲ್ಲಿ ಕನ್ನಡವನ್ನು ಬಳಸುವ ಸಾಮರ್ಥ್ಯವನ್ನು ಗಳಿಸುವುದಾಗಿದ್ದರೆ, ಅದಕ್ಕೆ ತಕ್ಕನಾದ, ಸರಳವಾದ ಪಠ್ಯವನ್ನು, ಇಡಬೇಕು. ಇಂಥವರಿಗಾಗಿ ಇಲಾಖೆಗಳ ವತಿಯಿಂದಲೇ ನಿರ್ದಿಷ್ಟ ತರಬೇತಿಗಳನ್ನು ಏರ್ಪಡಿಸುವತ್ತ ಸರ್ಕಾರ ಯೋಚಿಸಬೇಕು. ಕನ್ನಡ ಪರೀಕ್ಷೆ ಎನ್ನುವುದು, ಕೆಲವರನ್ನು ಹೊರಗಿಡುವ ಕ್ರಮವಾಗದೇ ಎಲ್ಲರನ್ನೊಳಗೊಳ್ಳುವ ಸಬಲೀಕರಣದ ಯೋಜನೆಯಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.