‘ಸ್ಟುಪಿಡ್, ಸ್ಟುಪಿಡ್, ಸ್ಟುಪಿಡ್’ (ಮೂರ್ಖ, ಮೂರ್ಖ, ಮೂರ್ಖ) ಮುಖದ ತುಂಬಾ ಕೋಪ ತುಳುಕಿಸುತ್ತ ಸುನಿಲ್ ಗಾವಸ್ಕರ್ ಹೀಗೆ ಮೊನ್ನೆ ಮೊನ್ನೆ ಜರೆದರು. ವಿಕೆಟ್ ಕೀಪರ್ ತಲೆಯ ಮೇಲಿಂದ ಹೊಡೆಯುವ ತಮ್ಮ ಶೈಲಿಯ ಆಟಕ್ಕೆ ಕೈ ಹಾಕಿದ ಬ್ಯಾಟ್ಸ್ಮನ್ ರಿಷಭ್ ಪಂತ್, ಥರ್ಡ್ಮ್ಯಾನ್ ಬೌಂಡರಿ ಬಳಿ ಇದ್ದ ಫೀಲ್ಡರ್ಗೆ ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದರು. ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿನ ಅವರ ಆ ಹೊಡೆತಕ್ಕೆ ಗಾವಸ್ಕರ್ ಸಿಟ್ಟಿನಿಂದ ಈ ಪ್ರತಿಕ್ರಿಯೆ ನೀಡಿದರು. ಅವರ ಪಕ್ಕದಲ್ಲೇ ಕುಳಿತಿದ್ದ ಹರ್ಷ ಭೋಗ್ಲೆ ಏನೊಂದೂ ಹೇಳದೆ ಉಗುಳು ನುಂಗಿಕೊಂಡು ಭಾರತದ ಮೊದಲ ಇನಿಂಗ್ಸ್ ಸ್ಕೋರ್ ಎಷ್ಟಾಗಿತ್ತು ಎಂದಷ್ಟೇ ಹೇಳಿದರು.

ವೀಕ್ಷಕ ವಿವರಣೆಕಾರರು ಹೀಗೆ ಭಾವಾವೇಶಕ್ಕೆ ಒಳಗಾಗುವ ಹೊಸ ಮಾದರಿ ಇತ್ತೀಚೆಗೆ ವ್ಯಾಪಕವಾಗಿ ಕಾಣುತ್ತಿದೆ. ಅದರಲ್ಲೂ ಸುನಿಲ್ ಗಾವಸ್ಕರ್ ಅವರಂಥವರು ಮಾತನಾಡಿದರೆ ಅದು ಮಾಧ್ಯಮಕ್ಕೆ ಪೊಗದಸ್ತಾದ ಆಹಾರವೂ ಆಗುತ್ತದೆ. ಅವರ ಆ ಕ್ಷಣದ ಭಾವುಕ ಪ್ರತಿಕ್ರಿಯೆಯೇ ಆಮೇಲೆ ಸಂವಾದವೊಂದಕ್ಕೂ ಎಡೆಮಾಡಿಕೊಟ್ಟಿತು. ಅದರಲ್ಲಿ ಅವರು ರಿಷಭ್ ಪಂತ್ ಬ್ಯಾಟಿಂಗ್ ಕ್ರಮಾಂಕವನ್ನು ಇನ್ನಷ್ಟು ಕೆಳಕ್ಕೆ ಇಳಿಸಬೇಕೆನ್ನುವ ಅಭಿಪ್ರಾಯವನ್ನೂ ಮುಂದಿಟ್ಟರು.

1983ರ ವಿಶ್ವಕಪ್ ಕ್ರಿಕೆಟ್ನಲ್ಲಿ ಭಾರತವು ಕಪ್ ಎತ್ತಿ ಹಿಡಿದಿದ್ದಾಗ ಗಾವಸ್ಕರ್ ಕೂಡ ತಮ್ಮ ಕಳೆಗುಂದಿದ ಆಟದ ಕಾರಣಕ್ಕೆ ಟೀಕೆಗೆ ಗುರಿಯಾಗಿದ್ದವರು. ಅದು ಬೇರೆಯದೇ ಮಾತಾದರೂ, ಟೀಕೆ ಮಾಡುವಾಗ ಅಷ್ಟು
ಭಾವಾವೇಶವನ್ನು ವೀಕ್ಷಕ ವಿವರಣೆಕಾರರು ವ್ಯಕ್ತಪಡಿ ಸದೇ ಇರುವುದು ಲಾಗಾಯ್ತಿನಿಂದ ನಡೆದುಕೊಂಡು ಬಂದಿದ್ದ ಒಂದು ಶಿಷ್ಟಾಚಾರ. ನವಜೋತ್ ಸಿಂಗ್ ಸಿಧು ತರಹದವರು ಮಾತಿನ ಮಂಟಪದಲ್ಲಿ ಭಾವಾತಿರೇಕ ಬೆರೆಸಿದ್ದಷ್ಟೇ ಅಲ್ಲದೆ, ಕೆಲವು ಅಪರೂಪದ ಉಪಮೆಗಳನ್ನೂ ಸೇರಿಸಿ ಅದನ್ನು ಮನರಂಜನೆ
ಯಾಗಿಸಿದರು. ಈಗ ವೀಕ್ಷಕ ವಿವರಣೆಕಾರರ ಮಾತಿನ ವರಸೆ ಸಂಪೂರ್ಣ ಬದಲಾಗಿದೆ.

ಹಿಂದೆ ರೇಡಿಯೊ ಕಾಮೆಂಟರಿ ಹೇಳುವಾಗ ಆಟದ ಸೂಕ್ಷ್ಮಗಳಿಗೆ ಒತ್ತುಕೊಟ್ಟು ಅಭಿವ್ಯಕ್ತಿಸುತ್ತಿದ್ದ ತಣ್ಣಗಿನ ಮಾದರಿಯೊಂದು ಇತ್ತು. ಇದ್ದುದರಲ್ಲೇ ಹೊಸ ಪದಗಳನ್ನು ಹೊಸೆಯುವ ಸೃಜನಶೀಲರೂ ಆಗೀಗ ಕಾಣುತ್ತಿದ್ದರು. ಕನ್ನಡ ವೀಕ್ಷಕ ವಿವರಣೆಕಾರರು ‘ವೈಡ್ ಬಾಲ್’ಗೆ ‘ಅಗಲವಾದ ಚೆಂಡು’ ಎನ್ನುವಂತಹ ವಾಚ್ಯ ಪ್ರಯೋಗ ಮಾಡಿರುವ ಉದಾಹರಣೆಗಳೂ ಇವೆ.

ಈಗ ವೀಕ್ಷಕ ವಿವರಣೆಕಾರರು ಅಭಿಮಾನಿಗಳಂತೆ ಮಾತಾಡಲು ಶುರುವಿಟ್ಟುಕೊಂಡಿದ್ದಾರೆ ಅಥವಾ ಗಾವಸ್ಕರ್ ತರಹ ಭಾವಾವೇಶ ಪ್ರಕಟಿಸುವ ಮಾದರಿಗೆ ಕಟ್ಟುಬಿದ್ದಿದ್ದಾರೆ.

ನೆನಪಿನ ಪುಟವೊಂದು ತಕ್ಷಣಕ್ಕೆ ತೆರೆದುಕೊಳ್ಳು ತ್ತದೆ. 1969-70ರ ಕ್ರಿಕೆಟ್ ಋತುವಿನಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ತಂಡ ಪ್ರವಾಸ ಬಂದಿತ್ತು. ಆಗಿನ ಬಾಂಬೆಯಲ್ಲಿ ಟೆಸ್ಟ್ ಪಂದ್ಯ. ಆಸ್ಟ್ರೇಲಿಯಾದ ಬೌಲರ್ ಅಲನ್ ಕನೋಲಿ ಎಸೆತದಲ್ಲಿ, ವಿಕೆಟ್ ಕೀಪರ್ ಹಿಡಿದ ಕ್ಯಾಚ್ಗೆ ‘ಎಸ್. ವೆಂಕಟರಾಘವನ್ ಅವರು ಔಟ್’ ಎಂದು ಅಂಪೈರ್ ಶಂಭು ಪಿ. ತಪ್ಪು ನಿರ್ಣಯ ಕೊಟ್ಟರು. ದೇವರಾಜ್ ಪುರಿ ಎಂಬ ಜನಪ್ರಿಯ ವೀಕ್ಷಕ
ವಿವರಣೆಕಾರರೊಬ್ಬರು ಆಗ ಎಐಆರ್ನಲ್ಲಿ ಕ್ರಿಕೆಟ್ನ ಅಷ್ಟೂ ಬೆಳವಣಿಗೆಗಳನ್ನು ವಿವರಿಸಿ ಹೇಳುತ್ತಿದ್ದರು. ಅಂಪೈರ್ ನಿರ್ಧಾರ ತಪ್ಪಾಗಿತ್ತು ಎಂದು ಅವರು ವೀಕ್ಷಕ ವಿವರಣೆಯಲ್ಲಿ ಬಿಚ್ಚಿಟ್ಟಿದ್ದೇ ಅಲ್ಲದೆ ಅದನ್ನು
ವಿಶ್ಲೇಷಣಾತ್ಮಕ ಶೈಲಿಯಲ್ಲಿ ಬಣ್ಣಿಸಿದರು.

ಟ್ರಾನ್ಸಿಸ್ಟರ್ಗಳು ಜನಪ್ರಿಯವಾಗಿದ್ದ ಕಾಲ ಅದು. ಕ್ರಿಕೆಟ್ ಮೈದಾನಕ್ಕೆ ಪಂದ್ಯ ನೋಡಲು ಹೋದವರ ಕೈಲೂ ಒಂದೊಂದು ಟ್ರಾನ್ಸಿಸ್ಟರ್ ಇರುತ್ತಿತ್ತು. ದೂರ ದಿಂದ ಆಟ ನೋಡುತ್ತಲೇ, ವೀಕ್ಷಕ ವಿವರಣೆಕಾರ ನೀಡುತ್ತಿದ್ದ ಒಳನೋಟಗಳನ್ನು, ಕಿವಿಗೆ ಟ್ರಾನ್ಸಿಸ್ಟರ್ ಆನಿಸಿಕೊಂಡು ಕೇಳುತ್ತಿದ್ದರು. ವೆಂಕಟರಾಘವನ್ ಔಟ್ ಆಗಿದ್ದು ಅಂಪೈರ್ ತಪ್ಪು ನಿರ್ಣಯದಿಂದ ಎಂದು ತಿಳಿದದ್ದೇ ವೀಕ್ಷಕರು ಕ್ರುದ್ಧರಾದರು. ಸ್ಟ್ಯಾಂಡ್ಗೆ ಬೆಂಕಿ ಹಚ್ಚಿದರು. ಕ್ರಿಕೆಟ್ ವೀಕ್ಷಕ ವಿವರಣೆಯನ್ನು ಜನ ಯಾವ ಮಟ್ಟಕ್ಕೆ ನಂಬುತ್ತಿದ್ದರು ಎನ್ನುವುದಕ್ಕೆ ಈ ಪ್ರಕರಣ
ದಂತೆಯೇ ಹಲವು ನಿದರ್ಶನಗಳು ಸಿಗುತ್ತವೆ.

ಯಾವುದು ಒಳ್ಳೆಯ ವೀಕ್ಷಕ ವಿವರಣೆ ಎನ್ನುವ ಅನೌಪಚಾರಿಕ ಪ್ರಶ್ನೆಗೆ, ಖುದ್ದು ವೀಕ್ಷಕ ವಿವರಣೆಕಾರ ರಾದ ಚಂದ್ರಮೌಳಿ ಸಿ.ಕಣವಿ ಅವರು ಒಂದೊಮ್ಮೆ, ‘ಆಟವನ್ನು ಚಿತ್ರವತ್ತಾಗಿ ಕಟ್ಟಿಕೊಡುವ ರೀತಿಯದ್ದು’ ಎಂದು ಉತ್ತರಿಸಿದ್ದರು.

ಈಗ ಹೊಸಕಾಲದವರಿಗೆ ರುಚಿಸುತ್ತದೆ ಎಂಬ ಸಬೂಬು ನೀಡಿ, ಕನ್ನಡದ ಟಿ.ವಿ. ವೀಕ್ಷಕ ವಿವರಣೆಯಂತೂ ಹುಬ್ಬೇರಿಸುವಂತಹ, ಮುಖ ಕಿವುಚುವಂತೆ ಮಾಡುವ ಪದಪುಂಜಗಳನ್ನು ಹೊಮ್ಮಿಸುತ್ತಿದೆ. ‘ಡಿಮಿಲ್ ಡಮಾಲ್’ ಎಂದು ಹೊಡೆದರು, ‘ಏನು ಗುದ್ದಿದರು ಗುರೂ’ ಎನ್ನುವಂತಹ ಪದಗಳ ಪ್ರಯೋಗವೂ ಈಗ ಸ್ವೀಕೃತವಾಗಿಬಿಟ್ಟಿದೆ. ಬ್ಯಾಟಿಂಗ್ನಲ್ಲಿ ಪಂಚ್ ಎನ್ನುವುದನ್ನು ಪದಶಃ ‘ಗುದ್ದಿದರು’ ಎಂದು ಹೇಳುವ ಮಾದರಿಯನ್ನು ಕಂಡರೆ ವ್ಯಾಕರಣಪ್ರಿಯರಿಗೆ ಪಿಚ್ಚೆನ್ನಿಸಬಹುದು.

ಇದು ಒಂದು ಆಯಾಮವಷ್ಟೇ. ಟೆಸ್ಟ್ ಪಂದ್ಯ ಅತ್ತ ಇತ್ತ ಇರುವ ಸನ್ನಿವೇಶದಲ್ಲಿಯೂ ಒಂದು ತಂಡದ ಪರವಾಗಿಯೇ ಅಭಿಪ್ರಾಯ ಮಂಡಿಸುವ ವೀಕ್ಷಕ ವಿವರಣೆಯ ಬಗೆಯೊಂದು ಈಗ ಎದ್ದುಕಾಣುತ್ತಿದೆ.
ಇವೆಲ್ಲ ಚುಟುಕು ಕ್ರಿಕೆಟ್ನಿಂದ ಉಂಟಾಗಿರುವ ಪರಿಣಾಮ ಎನ್ನಲೂ ಹಲವು ಉದಾಹರಣೆಗಳು ಸಿಗುತ್ತವೆ. ಅದರಲ್ಲೂ ವಿಶೇಷವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಪರವಾಗಿಯೇ ಕನ್ನಡದ ವೀಕ್ಷಕ ವಿವರಣೆಕಾರರು ನುಡಿಮುತ್ತುಗಳನ್ನು ಪೋಣಿಸುತ್ತಿರುತ್ತಾರೆ.

ಆಟದ ಸೂಕ್ಷ್ಮಗಳಿಗಿಂತ ಹೆಚ್ಚಾಗಿ ನುಡಿಸಾಣಿಕೆ ಯನ್ನೇ ಮುಂದುಮಾಡುವ ವಾಚಾಳಿ ವೀಕ್ಷಕ ವಿವರಣೆಕಾರರ ನಡುವೆ ಹರ್ಷ ಭೋಗ್ಲೆ ತರಹದವರು ತಣ್ಣಗಿನ ಸ್ವಭಾವದಿಂದಲೇ ಗಮನ ಸೆಳೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.