ಎಲ್ಲ ಧರ್ಮಗಳ ನಾಗರಿಕರ ಬಳಕೆಗಾಗಿ ಇರುವ ಸಾರ್ವಜನಿಕ ಸ್ಥಳಗಳಲ್ಲಿ ಮತೀಯ ಆಚರಣೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕಾದ ತುರ್ತು ಇಂದಿನದು.

‘ಸರ್ಕಾರಿ ಶಾಲೆ–ಕಾಲೇಜು, ಆಟದ ಮೈದಾನಗಳು ಮತ್ತು ಸರ್ಕಾರಿ ಜಾಗಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳನ್ನು ನಿರ್ಬಂಧಿಸಬೇಕು’ ಎಂದು ಒತ್ತಾಯಿಸಿ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಅದರ ಬೆನ್ನಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ, ‘ಸರ್ಕಾರಿ ಜಾಗ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಮಾಜಿಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಮೊದಲ ಪತ್ರ ಸಾಂಸ್ಕೃತಿಕ ಎನ್ನುವ ಸಂಸ್ಥೆಯ ರಾಜಕೀಯ ಚಟುವಟಿಕೆಗೆ ಸಂಬಂಧಿಸಿದ್ದರೆ, ಎರಡನೇ ಪತ್ರ ಶುದ್ಧ ಧಾರ್ಮಿಕ ಕ್ರಿಯೆಗೆ ಪ್ರತಿಕ್ರಿಯೆಯಾಗಿದೆ. ಈ ಪತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿ ಯೋಚಿಸಿ, ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿರುವ ಎಲ್ಲ ಆಚರಣೆಗಳಿಗೂ ನಿರ್ಬಂಧ ಹಾಕಬೇಕು. ಆ ನಿರ್ಬಂಧ ಎಲ್ಲ ಧರ್ಮಗಳ ಮೆರವಣಿಗೆಗೂ ಅನ್ವಯ ಮಾಡಬೇಕಿದೆ.

ಆರಾಧನೆ ಮತ್ತು ಪ್ರಾರ್ಥನೆ, ವೈಯಕ್ತಿಕ ನೆಲೆಯನ್ನು ದಾಟಿ ಸಮುದಾಯವನ್ನು ಬಳಸಿಕೊಳ್ಳುವ ಮೂಲಕ ರಾಜಕೀಯಗೊಳ್ಳುತ್ತಿವೆ. ಮನೆಗೆ ಸೀಮಿತವಾಗಬೇಕಾದ ಜಾತಿ–ಧರ್ಮಗಳ ಸಂಪ್ರದಾಯ ತನ್ನ ಮಿತಿಯನ್ನು ದಾಟಿ ಸಮಾಜದ ಹಿತವನ್ನು ಬಲಿ ಪಡೆಯುತ್ತಿದೆ. ಹಾದಿಬೀದಿಗಳಲ್ಲಿ ಸ್ಫೋಟಿಸುವ ಪಟಾಕಿ ಮಲಗಿದ್ದವರನ್ನು ಬಡಿದೆಬ್ಬಿಸುತ್ತಿದೆ. ಸಾರ್ವಜನಿಕ ಸ್ಥಳಗಳ ಒತ್ತುವರಿಶೂರರು, ಭೂಗಳ್ಳರು, ಸಮಾಜಘಾತುಕ ಶಕ್ತಿಗಳು ಭಾವನಾತ್ಮಕ ವಿಷಯವನ್ನು ಬಳಸಿಕೊಂಡು ತಮ್ಮ ಸ್ವಾರ್ಥವನ್ನು ನಿರಂತರವಾಗಿ ಸಾಧಿಸುತ್ತಿದ್ದಾರೆ. ಇಂತಹ ಸಮಾಜಘಾತುಕ ಕಾರ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಚಿವ–ಶಾಸಕರ ಪತ್ರಗಳಿಗೆ ವಿಶೇಷ ಮಹತ್ವವಿದೆ.

ಸಾರ್ವಜನಿಕ ಮತ್ತು ಸರ್ಕಾರಿ ಸ್ಥಳಗಳಲ್ಲಿ ಧಾರ್ಮಿಕ ಅಥವಾ ಮತೀಯ ಚಟುವಟಿಕೆಯನ್ನು ನಿರ್ಬಂಧಿಸಿದರೆ ಸಂವಿಧಾನದ ಆಶಯವನ್ನು ಜಾರಿಗೊಳಿಸಿದಂತೆ ಆಗುತ್ತದೆ. ಈ ವಿಷಯದಲ್ಲಿ ಸರ್ಕಾರ ತನ್ನ ಇಚ್ಛಾಶಕ್ತಿಯನ್ನು ತೋರಿಸಬೇಕು ಎನ್ನುವ ಸವಾಲನ್ನು ಒಡ್ಡಿದಂತೆ ಜನಪ್ರತಿನಿಧಿಗಳ ಪತ್ರಗಳು ಕಾಣುತ್ತಿವೆ.

ಸರ್ಕಾರ ತನ್ನ ಬುಡದಲ್ಲೇ ಕಟ್ಟಿರುವ ಮತೀಯ ಹುತ್ತವನ್ನು ಒಡೆಯಬೇಕಿರುವುದು ಸದ್ಯದ ತುರ್ತು. ವಿಧಾನಸೌಧ ಮಾತ್ರವಲ್ಲದೆ, ಬಹುತೇಕ ಸರ್ಕಾರಿ ಕಟ್ಟಡಗಳ ಆಸುಪಾಸು ದೇವಕುಟೀರಗಳು ಹುಟ್ಟಿಕೊಂಡಿವೆ. ಅಷ್ಟೇ ಅಲ್ಲ, ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಮಿನಿ ಮಂದಿರವೊಂದು ಅವತರಿಸಿರುತ್ತದೆ. ಲಿಫ್ಟ್, ಸರ್ಕಾರಿ ಕಾರುಗಳಲ್ಲಿಯೂ ಮೂರ್ತಿಗಳು ಕೂತಿರುತ್ತವೆ. ಅನೇಕ ಸಚಿವರು ಪದಗ್ರಹಣವನ್ನು ಪ್ರಮಾಣ ವಚನಕ್ಕೆ ಮುಗಿಸುವುದಿಲ್ಲ; ತಮ್ಮ ಇಚ್ಛೆಯಂತೆ ಪೂಜೆ, ಹೋಮ ಮಾಡಿಸುತ್ತಾರೆ. ಕೆಲವೊಮ್ಮೆ ಕಚೇರಿಯ ವಾಸ್ತುದೋಷ ಪರಿಹಾರವನ್ನೂ ನಡೆಸುತ್ತಾರೆ. ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ವಾರದ ಒಂದು ದಿನದ ಅರ್ಧ ಭಾಗ ಪೂಜೆಗೆ ಮೀಸಲಾಗಿರುತ್ತದೆ. ಸಂವಿಧಾನದ ಆಶಯವನ್ನು ಮಕ್ಕಳಿಗೆ ತಿಳಿಸಬೇಕಾದ ಶಾಲೆ–ಕಾಲೇಜುಗಳಲ್ಲಿಯೂ ಹಬ್ಬ, ಪೂಜೆ, ಪ್ರಾರ್ಥನೆ, ಆರಾಧನೆ ನಡೆಯುತ್ತಿವೆ. ಇಂತಹ ಆಚರಣೆಗಳಿಗೆ ಸಂಪೂರ್ಣ ನಿರ್ಬಂಧ ಹಾಕಬೇಕಾದ ಅಗತ್ಯವಿದೆ.

ಸಾರ್ವಜನಿಕ ಸ್ಥಳದಲ್ಲಿ ಧಾರ್ಮಿಕ ಚಟುವಟಿಕೆಗೆ ಅವಕಾಶ ಇರಬಾರದು. ಅದನ್ನು ನ್ಯಾಯಾಲಯ ಆಗಾಗ ಮನವರಿಕೆ ಮಾಡುತ್ತಲೇ ಇರುತ್ತದೆ. ಆದರೆ, ನಾಗರಿಕ ಸಮಾಜ ಕಿವಿ ಮೇಲೆ ಹಾಕಿಕೊಳ್ಳುವುದಿಲ್ಲ. ಸಮಾಜದ ನಿಷ್ಕ್ರಿಯತೆಯನ್ನು ಬಳಸಿಕೊಂಡು ಕೆಲವು ಕಿಡಿಗೇಡಿಗಳು ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಒತ್ತುವರಿ ಮಾಡಿಕೊಳ್ಳುತ್ತಾರೆ. ತಮ್ಮ ಹಿತಾಸಕ್ತಿಗೆ ನಿರ್ಭೀಡೆಯಿಂದ ‘ಧರ್ಮ’, ‘ದೇವರು’ ಬಳಕೆ ಮಾಡಿಕೊಳ್ಳುತ್ತಾರೆ. ಹಾಗಾಗಿಯೇ ಅನೇಕ ರಸ್ತೆಗಳನ್ನು ಮಂದಿರ–ಮಸೀದಿಗಳು ಆಕ್ರಮಿಸಿವೆ. ನಗರ–ಪಟ್ಟಣಗಳ ಹಲವು ಕಡೆ ಪಾದಚಾರಿ ಮಾರ್ಗಗಳನ್ನೂ ಅವು ನುಂಗಿ ನಿಂತಿರುತ್ತವೆ.

ಕೆಲವು ಕಡೆ ಐತಿಹಾಸಿಕ ಮತ್ತು ಪಾರಂಪರಿಕ ಸ್ಮಾರಕಗಳನ್ನು ವಿರೂಪಗೊಳಿಸುವ ಕೆಲಸವೂ ಆಗುತ್ತಿದೆ. ಬೆಂಗಳೂರಿನ ಕೇಂದ್ರ ಭಾಗದಂತೆ ಇರುವ ಮೈಸೂರು ಬ್ಯಾಂಕ್ ಎದುರಿನ ವೃತ್ತದಲ್ಲಿ, ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಾಣಾರ್ಪಣೆ ಮಾಡಿದ ಹುತಾತ್ಮರ ಸ್ಮಾರಕವೊಂದಿದೆ. ಆ ಸ್ಮಾರಕ ‘ಶಾಮಣ್ಣ ಬಿನ್ ಬೇಟೆ ರಂಗಪ್ಪ, ತಿರುಮಲಯ್ಯ, ಪ್ರಹ್ಲಾದ ಶೆಟ್ಟಿ, ಗುಂಡಪ್ಪ’ ಅವರನ್ನು ಸ್ಮರಿಸುತ್ತದೆ. ಅದರ ಮತ್ತೊಂದು ಮಗ್ಗುಲಲ್ಲಿ ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಕೆತ್ತಲಾಗಿದೆ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಚಾರಿತ್ರಿಕ ಮಹತ್ವ ಸಾರಬೇಕಾದ ಸ್ಮಾರಕವು ಮಂದಿರದ ನೆರಳಿನಲ್ಲಿ ನಗಣ್ಯ ಎನ್ನುವಂತಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಪ್ರಾಣಾರ್ಪಣೆಯ ಸ್ಮಾರಕದ ದುಃಸ್ಥಿತಿ ನೋಡಿದಾಗ ಬೇಸರ ಅನ್ನಿಸುತ್ತದೆ.

ಧಾರ್ಮಿಕ ಉದ್ದೇಶಗಳಿಗಾಗಿ ಐತಿಹಾಸಿಕ ಸ್ಮಾರಕಗಳನ್ನು ಗಾಸಿಗೊಳಿಸುವ ನಿದರ್ಶನಗಳು ರಾಜ್ಯದ ಉಳಿದೆಡೆಗಳಲ್ಲೂ ಸಿಗಬಹುದು. ರಸ್ತೆ, ಉದ್ಯಾನ, ಶಾಲೆಯ ಆವರಣವನ್ನು ಆಕ್ರಮಿಸಿದ ಅನೇಕ ಮಸೀದಿ, ಮಂದಿರ, ಚರ್ಚ್ಗಳೂ ಕಾಣಸಿಗಬಹುದು. ಇಂತಹದನ್ನೆಲ್ಲ ತಪ್ಪಿಸಿ ಸರ್ಕಾರಿ ಆಸ್ತಿ ಮತ್ತು ಸ್ಮಾರಕಗಳ ಸಂರಕ್ಷಣೆಯ ದೃಷ್ಟಿಯಿಂದ ಶಾಸಕರ ಪತ್ರಕ್ಕೆ ಅತ್ಯಂತ ಮಹತ್ವ ಇದೆ. ಅವರ ಒತ್ತಾಯದ ಮತೀಯ ನೋಟವನ್ನು ಮೀರಿ ಸರ್ವಧರ್ಮಗಳಿಗೂ ಅನ್ವಯಿಸಿ ಕೈಗೊಳ್ಳುವ ಕ್ರಮ ಸಮಗ್ರವಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.