ಕೈದಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ತಡೆ

ನವದೆಹಲಿ, ಆಗಸ್ಟ್ 29– ಕರ್ನಾಟಕ ಸರ್ಕಾರ ಮೊಕದ್ದಮೆಗಳನ್ನು ಕೈಬಿಟ್ಟಿರುವ ಯಾವ ಟಾಡಾ ಕೈದಿಯನ್ನೂ ಸೆಪ್ಟೆಂಬರ್ 1ರವರೆಗೆ ಬಿಡುಗಡೆ ಮಾಡಬಾರದೆಂದು ಸುಪ್ರೀಂ ಕೋರ್ಟ್ ಇಂದು ತಡೆಯಾಜ್ಞೆ ನೀಡಿರುವ ಕಾರಣ, ವರನಟ ರಾಜ್ಕುಮಾರ್ ಅವರ ಬಿಡುಗಡೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆ.

ಕಾಡುಗಳ್ಳ ವೀರಪ್ಪನ್ಗೆ ಬಲಿಯಾದ ಸಬ್ಇನ್ಸ್ಪೆಕ್ಟರ್ ಶಕೀಲ್ ಅಹ್ಮದ್ ಅವರ ತಂದೆ ಅಬ್ದುಲ್ ಕರೀಮ್ ಅವರು, ಸಲ್ಲಿಸಿದ ವಿಶೇಷ ರಜೆ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಮೂರ್ತಿಗಳಾದ ಎಸ್.ಪಿ. ಭರೂಚ, ಎಸ್.ಎಸ್.ಎಂ. ಖಾದ್ರಿ ಮತ್ತು ಸಂತೋಷ್ ಹೆಗ್ಡೆ ಅವರನ್ನು ಒಳಗೊಂಡ ಮೂವರು ಸದಸ್ಯರ ಪೀಠ ಈ ಆದೇಶ ನೀಡಿದೆ.

ಆಂಧ್ರಪ್ರದೇಶ ಪೂರ್ಣ ಬಂದ್

ಹೈದರಾಬಾದ್, ಆಗಸ್ಟ್ 29 (ಪಿಟಿಐ)– ಕಾಂಗ್ರೆಸ್ ಹಾಗೂ ಎಡಪಕ್ಷಗಳ ಕಾರ್ಯಕರ್ತರ ಮೇಲೆ ಹೈದರಾಬಾದ್ನಲ್ಲಿ ನಿನ್ನೆ ಪೊಲೀಸರು ನಡೆಸಿದ ಗೋಲಿಬಾರ್ ಪ್ರತಿಭಟಿಸಿ ಇಂದು ಆಂಧ್ರಪ್ರದೇಶದಲ್ಲಿ ಪೂರ್ಣ ಬಂದ್ ಆಚರಿಸಲಾಯಿತು.

ರಾಜ್ಯ ಸಾರಿಗೆ ಸಂಸ್ಥೆ ಬಸ್ಗಳ ಮೇಲೆ ಕಲ್ಲು ತೂರಿದ ಮತ್ತು ಕೆಲವು ರೈಲುಗಳನ್ನು ಬಲವಂತವಾಗಿ ತಡೆದ ಘಟನೆಗಳನ್ನು ಹೊರತುಪಡಿಸಿದರೆ ಉಳಿದಂತೆ ಬಂದ್ ಶಾಂತಿಯುತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.