‘ಕೆಪಿಎಸ್ಸಿ ಭ್ರಷ್ಟಾಚಾರದ ಗಂಗೋತ್ರಿ’

ಬೆಂಗಳೂರು, ನ. 21– ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್ಸಿ) ಮಿತಿ ಮೀರಿರುವ ಭ್ರಷ್ಟಾಚಾರವನ್ನು ಕವಿ ಸಿದ್ಧಲಿಂಗಯ್ಯ, ತಮ್ಮದೇ ಆದ ವಿಶಿಷ್ಟ ಧಾಟಿಯಲ್ಲಿ ಸ್ವಂತ ಅನುಭವದ ಮೂಲಕ ಇಂದು ವಿಧಾನಪರಿಷತ್ತಿನಲ್ಲಿ ಬಿಚ್ಚಿಟ್ಟರು.

‘ನನಗೆ ಕೆಲವು ದಿನಗಳ ಹಿಂದೆ ಮೌಲ್ಯಮಾಪನಕ್ಕಾಗಿ ಉತ್ತರಪತ್ರಿಕೆಗಳ ಒಂದು ಬಂಡಲ್ (ಕಟ್ಟು) ಬಂತು. ಎಲ್ಲಿದ್ದರೊ ಆ ಜನಗಳು, ಬಂದ್ರು ನೋಡಿ ಬಂಡಲ್ನ ಹಿಂದೆಯೇ’ ಎಂದು ಹೇಳಿದ ಸಿದ್ಧಲಿಂಗಯ್ಯ, ತಮಗೆ ಅಭ್ಯರ್ಥಿಗಳು ಒಡ್ಡಿದ ಆಮಿಷವನ್ನು ವಿಷಾದದಿಂದ ಪ್ರಸ್ತಾಪಿಸಿದರು.

‘ನಿಮಗೆ ನನ್ನ ಬಳಿ ಈ ಬಂಡಲ್ ಬಂದಿರುವುದು ಹೇಗೆ ಗೊತ್ತಾಯ್ತು?’ ಎಂದು ಕೇಳಿದರೆ, ನಮಗೆಲ್ಲ ಗೊತ್ತಾಗುತ್ತದೆ– ಎಂಬ ಉತ್ತರ ಬಂತು. ನಾನು ತಡಮಾಡದೇ ಸ್ವಂತ ಖರ್ಚಿನಲ್ಲಿ ಆಟೊರಿಕ್ಷಾದಲ್ಲಿ ಆ ಬಂಡಲ್ ಹಾಕಿಕೊಂಡು ಲೋಕಸೇವಾ ಆಯೋಗಕ್ಕೆ ಹೋಗಿ, ಅವನ್ನು ವಾಪಸ್ ಕೊಟ್ಟು, ಆದದ್ದನ್ನು ವಿವರಿಸಿ ಪತ್ರ ಕೊಟ್ಟು ಬಂದೆ’ ಎಂದರು.

ದಲಿತ ಮಹಿಳೆಗೆ ಅರೆ ಬೆತ್ತಲೆ ಶಿಕ್ಷೆ

ಚಿತ್ರದುರ್ಗ, ನ. 21– ಹೊಳಲ್ಕೆರೆ ತಾಲ್ಲೂಕು ಉಪ್ಪರಿಗೇನಹಳ್ಳಿಯಲ್ಲಿ
ದಲಿತ ಮಹಿಳೆಯನ್ನು ಅರೆ ಬೆತ್ತಲೆಯಾಗಿ ಗ್ರಾಮದ ದೇವಸ್ಥಾನದ ಮುಂದೆ ನಿಲ್ಲಿಸಿದ ಅಮಾನುಷ ಪ್ರಕರಣ ನಡೆದಿದೆ. ಪ್ರಮುಖ ಆರೋಪಿ ಶಾಲಾ ಶಿಕ್ಷಕ ತಿಪ್ಪೇಸ್ವಾಮಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.