ಮಂಗಳವಾರ, ಮೇ 18, 2021
30 °C
25 ವರ್ಷಗಳ ಹಿಂದೆ ಸೋಮವಾರ 22.4.1996

ಪ್ರಜಾವಾಣಿ 25 ವರ್ಷಗಳ ಹಿಂದೆ| ಸೋಮವಾರ 22.4.1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೀಲಾ ಕೌಲ್ ರಾಜೀನಾಮೆ

ಶಿಮ್ಲಾ, ಏ. 21 (ಯುಎನ್‌ಐ)– ವಸತಿ ಹಗರಣದ ಸಂಬಂಧ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯದ ಹಿನ್ನೆಲೆಯಲ್ಲಿ, ಹಿಮಾಚಲ ಪ್ರದೇಶದ ರಾಜ್ಯಪಾಲೆ ಆಗಿರುವ ಶೀಲಾ ಕೌಲ್ ಅವರು ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದರು.

ರಾಜೀನಾಮೆ ವಿಷಯವನ್ನು ಅವರು ರಾಷ್ಟ್ರಪತಿ ಡಾ. ಶಂಕರ್ ದಯಾಳ್ ಶರ್ಮಾ ಅವರಿಗೆ ಫ್ಯಾಕ್ಸ್ ಮಾಡುವ ಮೂಲಕ, ಕಳೆದ ಐದು ದಿನಗಳಿಂದ ಇದ್ದ ಅಸ್ಥಿರತೆಗೆ ಇಂದು ಇತಿಶ್ರೀ ಹಾಡಿದ್ದಾರೆ.

ದೆಹಲಿ ಸ್ಫೋಟ: 17 ಜನರ ಸಾವು

ನವದೆಹಲಿ, ಏ. 21 (ಪಿಟಿಐ, ಯುಎನ್ಐ)– ಮಧ್ಯ ದೆಹಲಿಯ ಹೋಟೆಲೊಂದರಲ್ಲಿ ನಿನ್ನೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಸತ್ತವರ ಸಂಖ್ಯೆ 17ಕ್ಕೆ ಏರಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟದಲ್ಲಿ ಗಾಯಗೊಂಡ 30 ಜನರನ್ನು ದೆಹಲಿಯ ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು