ಬೆಂಗಳೂರು ಹುಡುಗಿ ಭುವನದ ಬೆಡಗಿ

ನಿಕೋಸಿಯ, ಮೇ 13 (ರಾಯಿಟರ್ಸ್)– ಎಪ್ಪತ್ತೆಂಟು ದೇಶಗಳ ಸುಂದರಿಯರನ್ನು ಬದಿಗೆ ಸರಿಸಿ ಭಾರತ ಸುಂದರಿ ಕುಮಾರಿ ಲಾರಾ ದತ್ತ ಅವರು ವಿಶ್ವಸುಂದರಿ ಪಟ್ಟವನ್ನು ತಮ್ಮದಾಗಿಸಿಕೊಂಡರು.

ಸೈಪ್ರಸ್ ದ್ವೀಪದ ರಾಜಧಾನಿಯಾದ ನಿಕೋಸಿಯದಲ್ಲಿ ಧಾರ್ಮಿಕ ಗುಂಪುಗಳು ಈ ಸ್ಪರ್ಧೆಯನ್ನು ವಿರೋಧಿಸಿ ಪ್ರತಿಭಟನಾ ಪ್ರದರ್ಶನ ನಡೆಸಿ ಈ ವರ್ಣರಂಜಿತ ಸಮಾರಂಭದ ಪ್ರಾರಂಭವನ್ನು ವಿಳಂಬ
ಗೊಳಿಸಿದರು. ವಿಶ್ವಸುಂದರಿಯಾಗಿ ಆಯ್ಕೆಗೊಂಡ ಸಂದರ್ಭದಲ್ಲಿ ಲಾರಾ ಅವರು ಸ್ಪರ್ಧೆಯನ್ನು ಸಮರ್ಥಿಸಿ ಹೇಳಿಕೆ ನೀಡಿದರು.

ಭಾರತದ ಸುಷ್ಮಿತಾ ಸೇನ್ ಈ ಹಿಂದೆ ವಿಶ್ವಸುಂದರಿ ಪಟ್ಟವನ್ನು ಗೆದ್ದಿರುವುದನ್ನು ಇಲ್ಲಿ ಸ್ಮರಿಸಬಹುದು. ಮೂಲತಃ ಬೆಂಗಳೂರಿನವ ರಾದ ಲಾರಾ ಅವರ ತಂದೆ ಪಂಜಾಬಿ ಹಾಗೂ ತಾಯಿ ಅಂಶಿಕಾ ಐರೋಪ್ಯರು.

ಎಸ್ಮಾ ನೆರಳಿನಲ್ಲಿ ಮೌಲ್ಯಮಾಪನ

ಬೆಂಗಳೂರು, ಮೇ 13– ಅಗತ್ಯ ಸೇವಾ ನಿರ್ವಹಣೆ ಕಾಯ್ದೆ (ಎಸ್ಮಾ) ಭಯದ ನೆರಳಲ್ಲಿ, ರಾಜ್ಯದ ಎಲ್ಲ 22 ಮೌಲ್ಯಮಾಪನ ಕೇಂದ್ರಗಳಲ್ಲಿ ಇಂದು ಪಿಯುಸಿ ಉತ್ತರಪತ್ರಿಕೆ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಯಿತು.

ಜತೆಗೆ ಎಸ್ಮಾ ಅನ್ವಯ ರಾಜ್ಯ ಪದವಿ ಪೂರ್ವ ಶಿಕ್ಷಣ ಅಧಿಕಾರಿಗಳ, ಪ್ರಾಚಾರ್ಯರ, ಉಪನ್ಯಾಸಕರ ಮತ್ತು ಬೋಧಕೇತರ ಒಕ್ಕೂಟದ ಕೆಲವು ಪದಾಧಿಕಾರಿಗಳನ್ನು ಪೊಲೀಸರು ಬೆಳಿಗ್ಗೆ ಬಂಧಿಸುವುದರೊಂದಿಗೆ ಎಸ್ಮಾ ಬಿಸಿ ಉಪನ್ಯಾಸಕರಿಗೆ ತಟ್ಟತೊಡಗಿದೆ.

ಪೊಲೀಸ್ ಮೂಲಗಳ ಪ್ರಕಾರ ಈವರೆಗೆ ರಾಜ್ಯದಲ್ಲಿ 16 ಪದಾಧಿಕಾರಿಗಳನ್ನು ಬಂಧಿಸಲಾಗಿದೆ. ಒಟ್ಟು 54 ಮಂದಿಯನ್ನು ಬಂಧಿಸಲು ಸರ್ಕಾರದಿಂದ ಪೊಲೀಸ್ ಇಲಾಖೆಗೆ ಸೂಚನೆ ಬಂದಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.