ವಿಮಾನದಲ್ಲಿ ಹೆರಿಗೆ

ಅಂಕಾರ, ಜುಲೈ 17 (ಡಿಪಿಎ)– ತುರ್ಕಿಯಿಂದ ನುರೆಂಬರ್ಗ್ಗೆ ಪ್ರಯಾಣಿಸುತ್ತಿದ್ದ ಜರ್ಮನ್ ಮಹಿಳೆಯೊಬ್ಬರು ನಿನ್ನೆ ವಿಮಾನ ದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ.

ಅಂಕಾರದಿಂದ ವಿಮಾನ ಹೊರಟ ಸ್ವಲ್ಪ ಸಮಯದಲ್ಲೇ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ವಿಮಾನ ದಲ್ಲಿದ್ದ ವೈದ್ಯರೊಬ್ಬರು ಹೆರಿಗೆ ಮಾಡಿಸಿದರು. ನಂತರ ವಿಮಾನವನ್ನು ಇಸ್ತಾಂಬುಲ್ನಲ್ಲಿ ಇಳಿಸಿ ತಾಯಿ, ಮಗುವನ್ನು ಆಸ್ಪತ್ರೆಗೆ ಸೇರಿಸಲಾಯಿತು.

ಮನೆಗಳ ಮೇಲೆ ವಿಮಾನ ಅಪ್ಪಳಿಸಿ 55 ಸಾವು

ಪಟ್ನಾ, ಜುಲೈ 17 (ಪಿಟಿಐ)– ದೆಹಲಿಗೆ ಹೊರಟಿದ್ದ ಅಲಯೆನ್ಸ್ ಏರ್ ಬೋಯಿಂಗ್– 737 ವಿಮಾನ ಇಂದು ಬೆಳಿಗ್ಗೆ ಪಟ್ನಾ ವಿಮಾನ ನಿಲ್ದಾಣದಲ್ಲಿ ಇಳಿಯುವ ಕೆಲವೇ ನಿಮಿಷಗಳ ಮೊದಲು ಅಪಘಾತಕ್ಕೀಡಾಗಿ ಮನೆಗಳ ಮೇಲೆ ಅಪ್ಪಳಿಸಿದ್ದರಿಂದ ಒಟ್ಟು 55 ಮಂದಿ ಸತ್ತಿದ್ದಾರೆ. ಇವರಲ್ಲಿ ವಿಮಾನದಲ್ಲಿದ್ದ 51 ಮಂದಿ ಹಾಗೂ ಮನೆಗಳಲ್ಲಿದ್ದ ನಾಲ್ವರು ಸೇರಿದ್ದಾರೆ.

ವಿಮಾನದಲ್ಲಿ 58 ಪ್ರಯಾಣಿಕ ರಿದ್ದರು. ಅಪಘಾತದಲ್ಲಿ ಬದುಕಿ ಉಳಿದಿರುವ ಏಳು ಮಂದಿ ಹಾಗೂ ಗಾಯಗೊಂಡಿರುವ ನಿವಾಸಿಗಳನ್ನು ಚಿಕಿತ್ಸೆಗಾಗಿ ವಿಶೇಷ ವಿಮಾನವೊಂದರಲ್ಲಿ ದೆಹಲಿಗೆ ಕೊಂಡೊಯ್ಯಲಾಗಿದೆ. ಅವರ ಪೈಕಿ ಕೆಲವರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.