25 ವರ್ಷಗಳ ಹಿಂದೆ: ಮಂಗಳವಾರ, ಜನವರಿ 13, 1998

ಸೋನಿಯಾ ಪ್ರಚಾರ ಕಾಂಗ್ರೆಸ್‌ಗೆ ಪ್ರತಿಕೂಲ
ಚೆನ್ನೈ, ಜ. 12– ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಸೋನಿಯಾ ಗಾಂಧಿ ಅವರ ಪ್ರಚಾರ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯ ಸಚಿವ ಹಾಗೂ ಜನತಾದಳದ ಧುರೀಣ ಎಸ್.ಆರ್. ಬೊಮ್ಮಾಯಿ ಅವರು ಹೇಳಿದ್ದಾರೆ.
ಸೋನಿಯಾ ಅವರು ಶ್ರೀಪೆರಂಬುದೂರಿನಲ್ಲಿ ನಿನ್ನೆ ಮಾಡಿದ ತಮ್ಮ ಚೊಚ್ಚಲ ಭಾಷಣದಲ್ಲಿ ಬಿಜೆಪಿಯ ಮೇಲೆ ನಡೆಸಿದ ದಾಳಿ ಹಾಗೂ ಸಂಯುಕ್ತರಂಗದ ಕುರಿತು ಟೀಕೆ ಮಾಡದಿರುವುದರತ್ತ ಪತ್ರಕರ್ತರು ಅವರ ಗಮನ ಸೆಳೆದಾಗ ‘ಅವರ ಪ್ರಚಾರ ಭಾಷಣವನ್ನು ಗಮನಿಸಿಲ್ಲ’ ಎಂದ ಅವರು, ‘ಸೋನಿಯಾ ಅವರ ಪ್ರಚಾರವು ಮತದಾರರ ಮೇಲೆ ಪ್ರಭಾವ ಬೀರುವುದಿಲ್ಲ. ಬದಲಾಗಿ ಪ್ರತಿಕೂಲ ಪರಿಣಾಮ ಬೀರಲಿದೆ’ ಎಂದರು.
ಟೀವಿ, ಕೇಬಲ್ ಪ್ರಚಾರಕ್ಕೆ ನಿರ್ಬಂಧ
ನವದೆಹಲಿ, ಜ. 12 (ಪಿಟಿಐ)– ಮತದಾನಕ್ಕೆ 48 ಗಂಟೆಗಳ ಮುನ್ನ ಟೀವಿ ಹಾಗೂ ಖಾಸಗಿ ಕೇಬಲ್ ವ್ಯವಸ್ಥೆಯ ಮೂಲಕ ಚುನಾವಣಾ ಪ್ರಚಾರ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.
ಈ ನೀತಿ ಸಂಹಿತೆಯ ಉಲ್ಲಂಘನೆಗೆ ಎರಡು ವರ್ಷ ಶಿಕ್ಷೆ ಅಥವಾ ದಂಡ ಅಥವಾ ಶಿಕ್ಷೆಯ ಜತೆಗೆ ದಂಡವನ್ನೂ ತೆರಬೇಕಾಗುತ್ತದೆ ಎಂದು ಉಪ ಚುನಾವಣಾ ಆಯುಕ್ತ ಸುಭಾಷ್ ಪಾಣಿ ಅವರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.