ದೆಹಲಿಯಲ್ಲಿ ಮತ್ತೊಬ್ಬ ಪಾಕ್ ನೌಕರನಿಂದ ನಿಷ್ಠೆ ಬದಲಾವಣೆ
ನವದೆಹಲಿ, ಸೆ. 3– ಇಲ್ಲಿನ ಪಾಕಿಸ್ತಾನಿ ಹೈಕಮಿಷನ್ ನೌಕರವರ್ಗದ ಬಂಗಾಳಿ ಸದಸ್ಯ, ಎಲೆಕ್ಟ್ರಿಷಿಯನ್ ಅಮ್ಜದ್ ಆಲೀ ಅವರು ಇಂದು ಪತ್ನಿ ಮತ್ತು ಮೂರು ತಿಂಗಳ ಪುತ್ರಿ ಸಮೇತ ಹೈಕಮಿಷನ್ ಕಚೇರಿ ಆವರಣದಿಂದ ಪರಾರಿಯಾದರಲ್ಲದೆ ಭಾರತದಲ್ಲಿ ಆಶ್ರಯ ಕೋರಿದರು.

ಬಾಂಗ್ಲಾ ದೇಶಕ್ಕೆ ತಮ್ಮ ನಿಷ್ಠೆ ಬದಲಾಯಿಸಿದ ಪಾಕ್ ಹೈಕಮಿಷನ್ ನೌಕರರ ಸಂಖ್ಯೆಯು ಇದರಿಂದ ಐದಕ್ಕೆ ಏರಿತು.

ಬಂಗಾಳಿ ನೌಕರರು ಕಚೇರಿ ಆವರಣ ಬಿಟ್ಟು ಹೊರಗಡೆ ಹೋಗುವುದಕ್ಕೆ ಇದುವರೆ ವಿಗೂ ಅವಕಾಶಗಳಿರಲಿಲ್ಲ. ಆದರೆ ಪತ್ನಿ–ಪುತ್ರಿ ಜತೆ ಫೋಟೊ ತೆಗೆಸಿಕೊಳ್ಳುವ ನೆಪ ಒಡ್ಡಿದರು ಅಮ್ಮದ್ ಆಲೀ. ಭದ್ರತಾ ಅಧಿಕಾರಿಗಳು ದಂಪತಿಯನ್ನು ಹಿಂಬಾಲಿಸಿದರು.

ಸವಾಲು ಎದುರಿಸಲು ಸತತ ಸಜ್ಜು: ವಿಮಾನ ಪಡೆಗೆ ಇಂದಿರಾ ಕರೆ
ನವದೆಹಲಿ, ಸೆ. 3– ಆತಂರಿಕವಾದ ಕೆಲವು ಸಮಸ್ಯೆಗಳು ಮತ್ತು ವಿದೇಶಿ ಬೆದರಿಕೆಯೂ ಸೇರಿದಂತೆ ರಾಷ್ಟ್ರವು ಈಗ ತೀವ್ರ ರೀತಿಯ ಸವಾಲುಗಳನ್ನು ಎದುರಿಸುತ್ತಿರುವುದೆಂದು ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ವಾಯುಪಡೆ ಕಮಾಂಡರುಗಳಿಗೆ ತಿಳಿಸಿದರು.

‘ಈ ಸವಾಲುಗಳು ಹೆಚ್ಚು ಎಚ್ಚರಿಕೆಯಿಂದಿರಬೇಕೆಂಬ ಮುನ್ಸೂಚನೆ ನೀಡಿವೆ’ ಎಂದು ಅವರು ದ್ವೈವಾರ್ಷಿಕ ಸಮ್ಮೇಳನದಲ್ಲಿ ಕಮಾಂಡರುಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.