ಮಂಗಳವಾರ, ಜುಲೈ 5, 2022
25 °C

50 ವರ್ಷಗಳ ಹಿಂದೆ: ಗುರುವಾರ, ಮೇ 25, 1972

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಡಳಿತ ಸ್ವಚ್ಛತೆಗಾಗಿ ರಾಜ್ಯದ ಅಧಿಕಾರಿಗಳ ಆಸ್ತಿ ತನಿಖೆಗೆ ಕ್ರಮ
ಬೆಂಗಳೂರು. ಮೇ 24–
ಆಡಳಿತವನ್ನು ಸ್ವಚ್ಛಗೊಳಿಸುವ ಬೃಹತ್‌ ಕಾರ್ಯಕ್ರಮದ ಅಂಗವಾಗಿ ಸರ್ಕಾರಿ ಅಧಿಕಾರಿಗಳ ಆಸ್ತಿಪಾಸ್ತಿಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಯೋಚಿಸಿದೆ.

ಕಳೆದ 10 ವರ್ಷಗಳ ಅವಧಿಯ ಆಸ್ತಿಪಾಸ್ತಿಗಳ ಬಗ್ಗೆ ಘೋಷಿಸಬೇಕೆಂದು ಸರ್ಕಾರಿ ಗೆಜೆಟೆಡ್‌ ಅಧಿಕಾರಿಗಳಿಗೆ ಸರ್ಕಾರ ತಿಳಿಸಿದೆ ಎಂದು ಇಲ್ಲಿ ತಿಳಿದುಬಂದಿದೆ.  ಘೋಷಿಸಲಾದ ಆಸ್ತಿಪಾಸ್ತಿಗಳ ಬಗ್ಗೆ ಪರಿಶೀಲನೆ ನಡೆಸಲು ಸೆಕ್ರೆಟೇರಿಯೇಟ್‌ ಮಟ್ಟದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪರಿಶೀಲನಾ ಘಟ್ಟದಲ್ಲಿ ಅನುಮಾನಕ್ಕೆ ಬರಲಾಗುವ ಎಲ್ಲ ಪ್ರಕರಣಗಳನ್ನೂ ಶೀಘ್ರ ತನಿಖೆಗಾಗಿ ಜಾಗೃತ ಆಯೋಗಕ್ಕೆ ಒಪ್ಪಿಸಲಾಗುವುದು.  

ಚಂದ್ರಕಂಪನ ಪ್ರಯೋಗ ಭಾಗಶಃ ಯಶಸ್ವಿ 
ಹೂಸ್ಟನ್‌, ಮೇ 24–
ವೈಜ್ಞಾನಿಕ ಉಪಕರಣವನ್ನಾಗಿ ಪುನರ್‌ ರೂಪಿಸಿದ ಸಮರ ಶಸ್ತ್ರಾಸ್ತ್ರವೊಂದನ್ನು ಚಂದ್ರಗ್ರಹದಲ್ಲಿ ಮಂಗಳವಾರ ಬೆಳಿಗ್ಗೆ ಸ್ಪೋಟಿಸಲಾಯಿತು. ಆದರೆ ಪ್ರಯೋಗ ಭಾಗಶಃ ಯಶಸ್ವಿಯಾಯಿತು ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು