ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯ ಘನತೆಗೆ ಧಕ್ಕೆ ತರದಿರಿ

Last Updated 18 ಜೂನ್ 2021, 19:30 IST
ಅಕ್ಷರ ಗಾತ್ರ

‘ಅಡುಗೆ, ಅಧಿಕಾರ, ಅಹಂಕಾರ’ ಎಂಬ ಡಾ. ಗೀತಾ ವಸಂತ ಅವರ ಲೇಖನ (ಪ್ರ.ವಾ., ಜೂನ್‌ 17) ಔಚಿತ್ಯ ಪೂರ್ಣವಾಗಿದೆ. ಹೆಣ್ಣಿಗೆ ಸಮಯವೆಂಬುದು ಎಷ್ಟು ಮರೀಚಿಕೆಯಾಗಿದೆ ಎಂಬುದು ಈ ಪುರುಷಪ್ರಾಬಲ್ಯದ ಸಮಾಜದಲ್ಲಿ ಯಾರಿಗೂ ತಿಳಿಯುವುದಿಲ್ಲ. ಮನೆಯ ಒಳಗೂ ಹೊರಗೂ ಅವಳು ಅವಳ ಸಮಯಕ್ಕಾಗಿ ಹಪಹಪಿಸುತ್ತಿರುತ್ತಾಳೆ. ಎಷ್ಟೇ ಓದಿಕೊಂಡು ಎಂತಹ ಉನ್ನತ ಹುದ್ದೆಯಲ್ಲಿದ್ದರೂ ಅವಳೊಬ್ಬಳು ಹೆಣ್ಣು ಎಂಬ ಒಂದೇ ಕಾರಣ ಸಾಕು ಈ ಸಮಾಜಕ್ಕೆ ಅವಳನ್ನು ಹೀಗಳೆಯಲು.

ಪುರುಷನಾಗಲೀ ಮಹಿಳೆಯಾಗಲೀ ಮನೆಯಿಲ್ಲದೆ ಬದುಕಲು ಸಾಧ್ಯವಿಲ್ಲ. ಇಲ್ಲಿ ಮನೆ ಪದ ನಿರ್ಜೀವ, ಆದರೆ ಆ ಮನೆಯೊಳಗೊಬ್ಬಳು ಹೆಣ್ಣು ಜೀವಿಸಿದರೆ ಮನೆ ಸದಾ ಜೀವಂತ. ಮನೆಯ ಒಳಗೂ ಹೊರಗೂ ಅವಳ ಕೆಲಸಗಳಿಗೆ ಸಹಾಯ ಮಾಡದಿದ್ದರೆ ಬೇಡ, ಕನಿಷ್ಠಪಕ್ಷ ಕುಹಕವಾಡದೆ ಅವಳನ್ನು ಬದುಕಲು ಬಿಟ್ಟರೆ ಸಾಕು ಎಂಬಂತಿದೆ ಈಗಿನ ಪರಿಸ್ಥಿತಿ. ನನ್ನಂತಹ ಉದ್ಯೋಗಸ್ಥ ಹೆಣ್ಣುಮಕ್ಕಳು ಇಂತಹ ಸಮಾಜದಲ್ಲಿ ಅಪರಾಧಿ ಪ್ರಜ್ಞೆಯಲ್ಲೇ ಬದುಕಬೇಕಾಗಿದೆ. ಮಹಿಳೆಯರ ಘನತೆಗೆ ಧಕ್ಕೆ ತರದಿದ್ದರೆ ಮಾತ್ರ ಈ ಸಮಾಜ ಘನತೆಗೆ ಬದ್ಧವಾಗಿರುತ್ತದೆ.

- ಮಹಾಲಕ್ಷ್ಮಿ ಎಂ. ಕೃಷ್ಣಮೂರ್ತಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT