ಸರ್ಕಾರಿ ಆಸ್ಪತ್ರೆ: ಉಚಿತ ಔಷಧಿ ನೀಡಲಿ

ಸರ್ಕಾರಿ ಆಸ್ಪತ್ರೆಗಳ ಎದುರು ಜನೌಷಧಿ ಕೇಂದ್ರಗಳನ್ನು ರದ್ದು ಮಾಡಿದ್ದನ್ನು ಹಿಂಪಡೆಯುವಂತೆ ಹೈಕೋರ್ಟ್ ಆದೇಶಿಸಿರುವುದಕ್ಕೆ, ವಿರೋಧ ಪಕ್ಷಗಳ ಶಾಸಕರುಗಳು ವಿಚಿತ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯನ್ನು ಸಹಿಸಲಾರದೆ ಕಾಂಗ್ರೆಸ್ ಸರ್ಕಾರ ಆ ಅಂಗಡಿಗಳನ್ನು ಮುಚ್ಚಿತ್ತು ಎಂದು ಹೇಳುತ್ತಿರುವ ಆ ಶಾಸಕರು ಒಂದು ವಿಷಯ ಅರಿಯಬೇಕು. ಜನೆರಿಕ್ ಔಷಧಿ ಅಂಗಡಿಗಳನ್ನು ಆಂಭಿಸಿದ್ದು ಮೋದಿಯವರಲ್ಲ, ಅವರಿಗಿಂತ ಹಿಂದಿನ ಮನಮೋಹನ್ ಸಿಂಗ್ ಸರ್ಕಾರ!

ಸರ್ಕಾರಿ ಆಸ್ಪತ್ರೆಗಳ ಎದುರು ಅಥವಾ ಆವರಣದೊಳಗೆ ಇರುವ ಅಂಗಡಿಗಳನ್ನು ಮುಚ್ಚಿಸಿದ್ದು ದ್ವೇಷ ಅಥವಾ ಅಸಹನೆಯಿಂದಲ್ಲ, ಸಂಘಟನೆಗಳ ಒತ್ತಾಯಕ್ಕೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳು ಉಚಿತವಾಗಿ ಸಿಗುತ್ತವೆ ಎಂದು ಹೇಳಿಕೊಳ್ಳುತ್ತ ಆಸ್ಪತ್ರೆಯ ಆವರಣದಲ್ಲೇ ಔಷಧಿ ಅಂಗಡಿಗಳನ್ನು ಇಟ್ಟಿರುವುದೇಕೆ ಎಂದು ಸಂಘಟನೆಗಳು ಪ್ರಶ್ನೆ ಮಾಡಿದ್ದವು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಗಳನ್ನು ಕೊಡಬೇಕೆಂದು ಅವುಗಳ ಒತ್ತಾಯವಿತ್ತು. ಆದರೆ, ಸರ್ಕಾರ ಜನೆರಿಕ್ ಔಷಧಿ ಅಂಗಡಿಗಳನ್ನು ಮುಚ್ಚಿಸಿತ್ತೇ ಹೊರತು, ಆಸ್ಪತ್ರೆಯೊಳಗಡೆ ಉಚಿತವಾಗಿ ಔಷಧಗಳು ಲಭ್ಯವಾಗುವಂತೆ ಮಾಡಲಿಲ್ಲ. ಇದು ವಿಷಯ. ಈಗಲೂ ಸರ್ಕಾರಕ್ಕೆ ನಮ್ಮ ಒತ್ತಾಯ ಇದ್ದೇ ಇದೆ: ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಗಳನ್ನು ಕೊಡಿ.

-ಶಾರದಾ ಗೋಪಾಲ, ಧಾರವಾಡ

ನಿಶ್ಶಕ್ತಗೊಳ್ಳುತ್ತಿವೆ ದೇಶದ ಶಕ್ತಿಕೇಂದ್ರಗಳು

ಸರ್ಕಾರಿ ಶಾಲೆಗಳು ದೇಶದ ಭವಿಷ್ಯವನ್ನು ರೂಪಿಸುವ, ನಿರ್ಣಯಿಸುವ ಶಕ್ತಿಕೇಂದ್ರಗಳು. ದುರಂತವೆಂದರೆ, ಈವರೆಗಿನ ಎಲ್ಲ ಸರ್ಕಾರಗಳೂ ಸರ್ಕಾರಿ ಶಾಲೆಗಳನ್ನು ಕಡೆಗಣಿಸಿವೆ. ಇದರ ಫಲವಾಗಿಯೇ ಶಾಲೆಗಳು ನಿರಂತರವಾಗಿ ಮುಚ್ಚುತ್ತಿವೆ; ಬಡ ಮಕ್ಕಳ ಭವಿಷ್ಯವೂ ಮುಕ್ಕಾಗುತ್ತಿದೆ. ಈಗ ಉಳಿದಿರುವ ಶಾಲೆಗಳು ಶಿಕ್ಷಕರ ಕೊರತೆ ಮತ್ತು ಮೂಲ ಸೌಕರ್ಯಗಳಿಲ್ಲದೆ ಉಸಿರುಗಟ್ಟಿವೆ. ಜರೂರು ಸುಧಾರಣೆ ಮಾಡದೆ ಹೋದರೆ ಸಾಮಾಜಿಕ ಅಸಮಾನತೆ ಇನ್ನಷ್ಟು ಹೆಚ್ಚಾಗುತ್ತದೆ.

-ಸಿದ್ದಣ್ಣ ಪೂಜಾರಿ, ಯಾದಗಿರಿ

ಸರ್ಕಾರದಿಂದ ಕ್ರೀಡಾಭಿಮಾನಿಗಳ ತುಳಿತ

ಭಾರತ ಪ್ರವಾಸದಲ್ಲಿರುವ ಫುಟ್ಬಾಲ್ ತಾರೆ ಮೆಸ್ಸಿ ಅವರನ್ನು ನೋಡಲು ಕೊಲ್ಕತ್ತದ ಸ್ಟೇಡಿಯಂನಲ್ಲಿ ಸಾವಿರಾರು ರೂಪಾಯಿ ತೆತ್ತು ನೆರೆದಿದ್ದ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ತಾರೆಯನ್ನು ಕೆಲವು ನಿಮಿಷಗಳು ಕೂಡ ಕಣ್ತುಂಬಿಕೊಳ್ಳಲು ಆಗಿಲ್ಲ. ಆ ಕಾರಣಕ್ಕಾಗಿಯೇ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಅವರ ಆಕ್ರೋಶವನ್ನು ಅಂಧಾಭಿಮಾನ, ದಾಂಧಲೆ ಎಂದೆಲ್ಲ ತಿರುಚುವುದು ಸರಿಯಲ್ಲ. ಪೂರ್ವಸಿದ್ಧತೆಯ ಕೊರತೆ ಹಾಗೂ ಭದ್ರತಾ ವೈಫಲ್ಯದೊಂದಿಗೆ ರಾಜಕಾರಣಿಗಳೂ ಸಂಘರ್ಷಕ್ಕೆ ಕಾರಣರಾಗಿದ್ದಾರೆ.

ಮೆಸ್ಸಿ ಅವರನ್ನು ಸುತ್ತುವರಿದಿದ್ದ ರಾಜಕಾರಣಿಗಳು ಮತ್ತು ಅವರ ಸಂಬಂಧಿಕರಿಂದಾಗಿ ತಮ್ಮ ನೆಚ್ಚಿನ ಆಟಗಾರನನ್ನು ನೋಡಲು ಸಾಧ್ಯವಾಗದಿರುವುದು ಅಭಿಮಾನಿಗಳ ಸಹಜ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಂತೆಯೇ ಇಲ್ಲಿಯೂ ರಾಜಕಾರಣಿಗಳ ವೈಯಕ್ತಿಕ ಹಿತಾಸಕ್ತಿಗೆ ಜನಸಾಮಾನ್ಯರು ನೋವು ಅನುಭವಿಸುತ್ತಿದ್ದಾರೆ.

-ಹಣಮಂತ ಕಾಂಬಳೆ, ಬಾಗಲಕೋಟೆ

ದೇಶಿ ಆಟ ಮರೆ; ಮಕ್ಕಳ ನಾಳೆಗಳಿಗೆ ಬರೆ!

ತೊಂಬತ್ತರ ದಶಕದಲ್ಲಿ ಆಡುತ್ತಿದ್ದ ದೇಶಿ ಆಟಗಳಾದ ಖೋ ಖೋ, ಕಬ್ಬಡಿ, ಮರಕೋತಿ, ಕುಂಟೋಬಿಲ್ಲೆ, ಬುಗುರಿ, ಗೋಲಿ, ಗಿಲ್ಲಿದಾಂಡು, ಮುಂತಾದ ದೇಸಿ ಆಟಗಳು ನೇಪಥ್ಯಕ್ಕೆ ಸರಿದಿವೆ. ಮಕ್ಕಳು ಮೊಬೈಲ್ನಲ್ಲಿನ ಆಟಗಳಲ್ಲಿ ಮುಳುಗಿದ್ದಾರೆ. ಇದು ಎಳೆಯರ ವೈಯಕ್ತಿಕ ಆರೋಗ್ಯದ ಜೊತೆಗೆ, ಸಾಮಾಜಿಕ ಸಂಬಂಧಗಳಿಂದಲೂ ಅವರನ್ನು ದೂರವಾಗಿಸುತ್ತಿದೆ. ಇಂತಹ ಆಟಗಳ ಬಗ್ಗೆ ಶಾಲೆ ಮತ್ತು ಸರ್ಕಾರಗಳು ಗಮನಹರಿಸಬೇಕು.

-ನಾಗಾರ್ಜುನ ಸಿರಿವಂತ

ಬಡವರ ಅನ್ನ ಲಪಟಾಯಿಸುವುದು ಸಲ್ಲ

ರಾಜ್ಯದಲ್ಲಿ ಪಡಿತರ ಅಕ್ಕಿ ಕಳ್ಳಸಾಗಣೆ ಹೆಚ್ಚಾಗುತ್ತಿದೆ (ಡಿ.8, ಪ್ರ.ವಾ. ಸಂಪಾದಕೀಯ). ಕಳವು ಮಾಡಿದ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಪಡಿತರ ಕೇಂದ್ರಗಳಲ್ಲಿ ತೂಕದ ವ್ಯವಸ್ಥೆಯೂ ಸರಿಯಾಗಿಲ್ಲ. ಈ ಅವ್ಯವಹಾರದಲ್ಲಿ ಪಡಿತರ ವಿತರಣೆದಾರರೂ ಶಾಮೀಲಾಗಿರುವಂತಿದೆ. ಬಡವರ ಹೊಟ್ಟೆ ತುಂಬಿಸಬೇಕಾದ ಅಕ್ಕಿಯನ್ನು ಲಪಟಾಯಿಸುವುದು ಸರಿಯಲ್ಲ.

-ಸಂತೋಷ ಪೂಜಾರಿ, ತಡಲ

ಶಿಕ್ಷಕರ ಜೀವನಕ್ಕೆ ಸರ್ಕಾರದಿಂದ ಕಲ್ಲು

ಯುಜಿಸಿಯ ಮಾನದಂಡಗಳ ಪ್ರಕಾರ ಈವರೆಗೆ ಕಾರ್ಯ ನಿರ್ವಹಿಸುತ್ತಿದ್ದ ಸಾವಿರಾರು ಶಿಕ್ಷಕರನ್ನು ಸರ್ಕಾರ ಸೇವೆಯಿಂದ ಹೊರಗಿಟ್ಟಿದೆ. ಹಲವು ವರ್ಷಗಳಿಂದ ಕನಿಷ್ಠ ಸಂಭಾವನೆಗೆ ದುಡಿಯುತ್ತಿದ್ದವರನ್ನು ಬೀದಿಪಾಲು ಮಾಡಿದೆ. ಇದು ಮಾನವೀಯತೆಯ? ಈವರೆಗೆ ಕಡಿಮೆ ಸಂಬಳಕ್ಕೆ ದುಡಿಸಿಕೊಂಡ ಶಿಕ್ಷಕರ ಬಗ್ಗೆ ಸರ್ಕಾರಕ್ಕೆ ಯಾವುದೇ ಉತ್ತರದಾಯಿತ್ವ ಇಲ್ಲವೆ? ಶಿಕ್ಷಕರ ಅನುಭವಕ್ಕೆ ಬೆಲೆ ಇಲ್ಲವೆ?

ಉತ್ತಮ ಶಿಕ್ಷಣ ಎಷ್ಟು ಮುಖ್ಯವೋ ಉತ್ತಮ ಶಿಕ್ಷಕರೂ ಅಷ್ಟೇ ಮುಖ್ಯ ಎನ್ನುವುದನ್ನು ಸರ್ಕಾರ ಮರೆತಂತಿದೆ. ಸೇವಾ ಅನುಭವ ಇರುವ ಶಿಕ್ಷಕರನ್ನು ಉಳಿಸಿಕೊಳ್ಳುವ ದಾರಿಗಳ ಬಗ್ಗೆ ಯೋಚಿಸದೆ ಹೋದರೆ, ಸರ್ಕಾರವನ್ನು ಹೃದಯಶೂನ್ಯ ಎಂದೇ ಭಾವಿಸಬೇಕಾಗುತ್ತದೆ. ಮೌಲ್ಯಾಧಾರಿತ ಶಿಕ್ಷಣದ ಕೊರತೆ ಎದ್ದುಕಾಣಿಸುತ್ತಿರುವ ಸಂದರ್ಭದಲ್ಲಿ, ಅದನ್ನು ಮತ್ತಷ್ಟು ಹೆಚ್ಚು ಮಾಡುವ ನಡವಳಿಕೆ ಸರ್ಕಾರದ್ದಾಗಬಾರದು.

-ಶ್ರೀಧರ ವಂದಾಲ, ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.