ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಸ್, ಸರ್‌ಚಾರ್ಜ್‌ಗಳಲ್ಲಿ ರಾಜ್ಯಗಳಿಗೂ ಪಾಲಿರಲಿ!

ಅಕ್ಷರ ಗಾತ್ರ

ಈಗಿರುವ ವ್ಯವಸ್ಥೆಯಲ್ಲಿ ಸೆಸ್ ಮತ್ತು ಸರ್‌ಚಾರ್ಜ್‌ಗಳಿಂದ ಬರುವ ರೆವಿನ್ಯೂವನ್ನು ಒಕ್ಕೂಟ ಸರ್ಕಾರ ಸಂಪೂರ್ಣ ವಾಗಿ ಅನುಭವಿಸುತ್ತಿದೆ. ಈ ತೆರಿಗೆಗಳಿಂದ ಬರುವ ರೆವಿನ್ಯೂ 2011-12ರಲ್ಲಿ ₹ 49,628 ಕೋಟಿಯಷ್ಟಿದ್ದುದು 2020-21ರಲ್ಲಿ ₹ 3,74,471 ಕೋಟಿಯಾಗಿದೆ. ಒಕ್ಕೂಟ ಸರ್ಕಾರದ ಹಂಚಿಕೊಳ್ಳಬಹುದಾದ ತೆರಿಗೆ ರಾಶಿಯಲ್ಲಿ ಇದರ ಪಾಲು 2011-12ರಲ್ಲಿ ಶೇ 10ರಷ್ಟಿದ್ದುದು 2020-21ರಲ್ಲಿ ಶೇ 20ರಷ್ಟಾಗಿದೆ.

ಈ ರೆವಿನ್ಯೂವನ್ನು 15ನೆಯ ಹಣಕಾಸು ಆಯೋಗದ ಸೂತ್ರದ ಪ್ರಕಾರ (ಶೇ 41) ರಾಜ್ಯಗಳಿಗೆ ಹಂಚಿದ್ದರೆ ಅವುಗಳಿಗೆ ₹ 1,53,533 ಕೋಟಿಯಷ್ಟು ದೊರೆಯುತ್ತಿತ್ತು. ನಮ್ಮ ದೇಶದ 14 ಮತ್ತು 15ನೆಯ ಹಣಕಾಸು ಆಯೋಗಗಳು ಈ ತೆರಿಗೆಗಳನ್ನು ‘ಹಂಚಿಕೊಳ್ಳುವ ತೆರಿಗೆ ರಾಶಿ’ಯ ಭಾಗವನ್ನಾಗಿ ಮಾಡಬೇಕೆಂದು ಶಿಫಾರಸು ಮಾಡಿವೆ. ಆದ್ದರಿಂದ ಬರುವ ಫೆಬ್ರುವರಿ 1ರಂದು ಮಂಡನೆಯಾಗುವ 2022-23ರ ಬಜೆಟ್ಟಿನಲ್ಲಿ ಸೆಸ್ ಮತ್ತು ಸರ್‌ ಚಾರ್ಜ್‌ಗಳ ರೆವಿನ್ಯೂವನ್ನು ರಾಜ್ಯಗಳ ಜೊತೆ ಹಂಚಿಕೊಳ್ಳುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು. ಇದರಿಂದ ನಮ್ಮ ಸಂವಿಧಾನಾತ್ಮಕ ಒಕ್ಕೂಟ ವ್ಯವಸ್ಥೆಗೆ ಒಂದು ಅರ್ಥ ಬರುತ್ತದೆ ಮತ್ತು ಅದರ ಮಹತ್ವ ಹೆಚ್ಚುತ್ತದೆ.

- ಟಿ.ಆರ್.ಚಂದ್ರಶೇಖರ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT