ಪಠ್ಯದಲ್ಲಿ ಖಗೋಳ ವಿಜ್ಞಾನ ಸೇರಿಸಿ

ಪ್ರಧಾನಿ ನರೇಂದ್ರ ಮೋದಿ ಅವರು, ‘ಮನದ ಮಾತು’ ಮಾಸಿಕ ಕಾರ್ಯಕ್ರಮದಲ್ಲಿ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸುರಕ್ಷಿತವಾಗಿ ಹಿಂದಿರುಗಿದ್ದನ್ನು ಶ್ಲಾಘಿಸಿದ್ದಾರೆ. ಮಕ್ಕಳಲ್ಲಿ ಬಾಹ್ಯಾಕಾಶ ಕ್ಷೇತ್ರವು ಕುತೂಹಲ ಮೂಡಿಸುತ್ತಿದೆ ಎಂದು ಹೇಳಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಜ್ಞಾನ ಪಠ್ಯದಲ್ಲಿ ಖಗೋಳ ವಿಜ್ಞಾನ ವಿಷಯವನ್ನು ಸೇರ್ಪಡೆಗೊಳಿಸಿದರೆ, ಮಕ್ಕಳಲ್ಲಿ ಮೂಲ ವಿಜ್ಞಾನ ಹಾಗೂ ಬಾಹ್ಯಾಕಾಶ ಕುರಿತು ಕುತೂಹಲ ಹೆಚ್ಚಲಿದೆ. ಭವಿಷ್ಯದಲ್ಲಿ ವಿಜ್ಞಾನಿಗಳಾಗುವ ಅವರ ಆಸೆಗೆ ದೀವಿಗೆಯಾಗಲಿದೆ.

– ಎಚ್.ಎಸ್.ಟಿ. ಸ್ವಾಮಿ, ಚಿತ್ರದುರ್ಗ

ಮಾದಕ ವಸ್ತುಗಳಿಗೆ ಕಡಿವಾಣ ಹಾಕಿ

ಮೈಸೂರಿನಲ್ಲಿ ಮಾದಕ ವಸ್ತುಗಳ ತಯಾರಿಕಾ ಘಟಕ ಪತ್ತೆಯಾಗಿರುವುದು ಆತಂಕಕಾರಿ. ರಾಜ್ಯದ ಹಲವು ನಗರಗಳು ಮಾದಕ ವ್ಯಸನಿಗಳ ಕೇಂದ್ರಗಳಾಗುತ್ತಿರುವುದು ದುರದೃಷ್ಟಕರ. ಈ ದಂಧೆಯ ಹಿಂದೆ ವಿದೇಶಿ ಪೆಡ್ಲರ್ಗಳು ಮತ್ತು ಸ್ಥಳೀಯ ವಿತರಕರ ಜಾಲ ಇರುವುದು ಚಿದಂಬರ ರಹಸ್ಯವಾಗಿ ಉಳಿದಿಲ್ಲ. ಒಂದು ಕಾಲದಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಸರಾಗಿದ್ದ ಮೈಸೂರು, ಧಾರವಾಡ, ಮತ್ತು ಕರಾವಳಿ ತೀರದ ಊರುಗಳಲ್ಲಿ ಈ ಜಾಲ ಸಕ್ರಿಯವಾಗಿದೆ. ಇದನ್ನು ಪತ್ತೆ ಹಚ್ಚುವಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತದೆ.

- ಡಿ.ಎಂ. ನದಾಫ್, ಅಫಜಲಪುರ

ಯೂರಿಯಾ ಸಮರ್ಪಕ ಬಳಕೆ ಹೇಗೆ?

ರಾಜ್ಯದಲ್ಲಿ ಯೂರಿಯಾ ರಸಗೊಬ್ಬರದ ಕೊರತೆಯ ಬಗ್ಗೆ ಪ್ರತಿದಿನ ಆಡಳಿತ ಪಕ್ಷ ಹಾಗೂ ವಿಪಕ್ಷದ ನಾಯಕರು ಪರಸ್ಪರ ಆರೋಪ– ಪ್ರತ್ಯಾರೋಪದಲ್ಲಿ ತೊಡಗುವುದು ಸಾಮಾನ್ಯವಾಗಿದೆ. ಆದರೆ, ರೈತರು ಯೂರಿಯಾವನ್ನು ಸಮರ್ಪಕವಾಗಿ ಬಳಕೆ ಮಾಡುವ ಮೂಲಕ ಕೊರತೆಯನ್ನು ತಗ್ಗಿಸಬಹುದಾಗಿದೆ. 10 ಕೆ.ಜಿ ಯೂರಿಯಾಕ್ಕೆ 100 ಕೆ.ಜಿ ತಿಪ್ಪೆಗೊಬ್ಬರ ಮಿಶ್ರ ಮಾಡಿ ಬಳಸಬಹುದು. 10 ಕೆ.ಜಿ ಯೂರಿಯಾಕ್ಕೆ 100 ಕೆ.ಜಿ ಕೆರೆಯ ಮಣ್ಣಿನ ಜೊತೆ ಬೆರೆಸಿ ಸ್ವಲ್ಪ ನೀರು ಚುಮಕಿಸಿ ಹದ ಮಾಡಿ ಬಳಸಬಹುದು. ಅರ್ಧ ಕೆ.ಜಿ ಕೋಲ್ಟಾರ್ ಅನ್ನು ಒಂದು ಲೀಟರ್ ಸೀಮೆಎಣ್ಣೆಯಲ್ಲಿ ಕರಗಿಸಿ ಅದನ್ನು 50 ಕೆ.ಜಿ ಯೂರಿಯಾಕ್ಕೆ ಲೇಪನ ಮಾಡಿದ ನಂತರ, 15 ಕೆ.ಜಿ ಬೇವಿನ ಹಿಂಡಿ ಲೇಪಿಸಿ ಬಳಕೆ ಮಾಡಬಹುದು.

ಜೈವಿಕ ಗೊಬ್ಬರ ಬಳಸುವ ಮೂಲಕ ಶೇ 25ರಷ್ಟು ಯೂರಿಯಾ ಬಳಕೆಯನ್ನು ತಗ್ಗಿಸಬಹುದು. ನಾಟಿ ಅಥವಾ ಬಿತ್ತನೆ ಸಮಯದಲ್ಲಿ ಡಿಎಪಿ/ ಕಾಂಪ್ಲೆಕ್ಸ್ ರಸಗೊಬ್ಬರ ಬಳಸಬಹುದು. ಯೂರಿಯಾವನ್ನು ಮೇಲು ಗೊಬ್ಬರವಾಗಿ ಬಳಸಬಹುದು. ನೆಲಗಡಲೆ, ತೊಗರಿ, ದ್ವಿದಳಧಾನ್ಯ ಬೆಳೆಗಳಿಗೆ ಯೂರಿಯಾ ಕೊಡಬಾರದು. ಇದಕ್ಕೆ ಬದಲಾಗಿ ಡಿಎಪಿ ಗೊಬ್ಬರ ಬಳಸಬೇಕು. ಬೆಳೆಗಳಿಗೆ ಕೃಷಿ ತಜ್ಞರ ಶಿಫಾರಸಿಗಿಂತಲೂ ಹೆಚ್ಚಿನ ಪ್ರಮಾಣದ ಯೂರಿಯಾ ಕೊಡಬಾರದು.

- ಎಚ್.ಆರ್. ಪ್ರಕಾಶ್, ಮಂಡ್ಯ

ಅತ್ತವರಿಗಷ್ಟೇ ಹಾಲು ಕುಡಿಸಬೇಡಿ

ದೇವನಹಳ್ಳಿ ತಾಲ್ಲೂಕಿನ ರೈತರ ಜಮೀನಿನ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸರ್ಕಾರ ಕೈಬಿಟ್ಟಿದೆ. ಈ ನಿರ್ಧಾರವು ನಿರ್ದಿಷ್ಟ ಹೋರಾಟಕ್ಕಷ್ಟೇ ಸೀಮಿತವಾಗಿದೆ. ಒಂದರ್ಥದಲ್ಲಿ ಇದು ಅತ್ತವರಿಗಷ್ಟೇ ಹಾಲು ಕುಡಿಸಿದಂತಾಗಿದೆ!

ರಾಜ್ಯದ ವಿವಿಧೆಡೆ ಕೈಗಾರಿಕಾ ಉದ್ದೇಶಕ್ಕೆ ಭೂಮಿ ನೀಡಲು ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೂ, ಸಣ್ಣ ರೈತರ ಅಸಹಾಯಕ ಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡಿರುವ ಸರ್ಕಾರ, ಅವರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತದ ನಿರ್ಧಾರಗಳ ಫಲವು ಕೇಳದೆ ಇರುವವರಿಗೂ ಸಿಗುವಂತಾಗಬೇಕು.

-ಜಿ. ಬೈರೇಗೌಡ, ನೆಲಮಂಗಲ

ನಾಲ್ವಡಿ ಕೃಷ್ಣರಾಜರಿಗೆ ಅವರೇ ಸಾಟಿ

ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು, ತಮ್ಮ ತಂದೆಯವರ ಸಾಧನೆಯನ್ನು ಹೊಗಳುವ ಭರದಲ್ಲಿ ಮೈಸೂರಿನ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿಂತಲೂ ಸಿದ್ದರಾಮಯ್ಯನವರ ಕೊಡುಗೆ ಹೆಚ್ಚಿದೆ ಎಂಬ ಮಾತುಗಳನ್ನಾಡಿದ್ದಾರೆ. ಇದು ಯಾರೂ ಒಪ್ಪುವಂತಹ ಮಾತಲ್ಲ. ಆಡಳಿತದಲ್ಲಾಗಲಿ, ದಾರ್ಶನಿಕತೆಯಲ್ಲಾಗಲಿ, ಅಭಿವೃದ್ಧಿ ಕಾರ್ಯದಲ್ಲಾಗಲಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಜೊತೆ ಸಮೀಕರಿಸಿ ನೋಡಬಹುದಾದ ಯಾವೊಬ್ಬ ರಾಜಕಾರಣಿಯೂ ದೇಶದಲ್ಲಿ ಇಲ್ಲ. ಅವರಿಗೆ ಅವರೇ ಸಾಟಿ.

- ದರ್ಶನ್ ಚಂದ್ರ ಎಂ.ಪಿ., ಚಾಮರಾಜನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.