ಕಡಿಮೆ ಅಂಕ ನೀಡಿದ್ದಾರೆಂಬ ಕಾರಣಕ್ಕೆ ಶಿಕ್ಷಕರು ಮತ್ತು ಗುಮಾಸ್ತರನ್ನು 9ನೇ ತರಗತಿಯ ವಿದ್ಯಾರ್ಥಿಗಳು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಕೃತ್ಯ ಜಾರ್ಖಂಡ್‍ನಲ್ಲಿ ನಡೆದಿರುವುದು ವರದಿಯಾಗಿದೆ (ಪ್ರ.ವಾ., ಆ. 31). ಮಕ್ಕಳ ಕಳ್ಳರನ್ನೋ ಕೋಳಿ-ಕುರಿ ಕಳ್ಳರನ್ನೋ ಸರಗಳ್ಳರನ್ನೋ ಸಾರ್ವಜನಿಕರು ಹೀಗೆ ಥಳಿಸುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಅದು ಕೂಡ ತಪ್ಪು. ಆದರೆ ಪ್ರಸ್ತುತ ಘಟನೆಯನ್ನು ತಿಳಿದಾಗ ‘ಹೀಗೂ ಉಂಟೇ?’ ಎನಿಸದಿರದು. ವಿದ್ಯಾರ್ಥಿಗಳನ್ನು ಈ ಮಟ್ಟಕ್ಕೆ ತಿದ್ದಿ, ತೀಡಿ ಬೆಳೆಸಿದ ಶಿಕ್ಷಕರನ್ನೂ ಗಣನೆಗೆ ತೆಗೆದುಕೊಳ್ಳಲೇಬೇಕು.

ಸದ್ದಿಲ್ಲದೆ ನಕಲಿ ಅಂಕಪಟ್ಟಿಗಳನ್ನೋ ಪದವಿ ಪ್ರಮಾಣ ಪತ್ರಗಳನ್ನೋ ಡಾಕ್ಟರೇಟ್ ಪದವಿಗಳನ್ನೋ ಪಡೆಯುವ ಸುಲಭೋಪಾಯ ಇರುವಾಗ, ವಿದ್ಯಾರ್ಥಿಗಳು ಇಂಥ ರಂಪಾಟ ಮಾಡಿ, ತಾವು ಇನ್ನೂ ಎಳಸು, ಅಡ್ಡಕಸುಬಿಗಳು ಎಂಬುದನ್ನು ಸಾಬೀತುಪಡಿಸಿದರು. ಸಾಲದೆಂಬಂತೆ, ವ್ಯಾಪ್ತಿ ಪ್ರದೇಶದಿಂದ ಹೊರಗಿರುವ ಗುಮಾಸ್ತರಿಗೂ ಒದ್ದು ಸದ್ದು ಮಾಡುವ ಅಗತ್ಯವಾದರೂ ಏನಿತ್ತು? ಈ ಬಡಪಾಯಿ ಗುಮಾಸ್ತರಿಗೆ, ಶಿಕ್ಷಕರಿಗೆ ಇರುವಂತೆ ಆ ವಿದ್ಯಾರ್ಥಿಗಳಿಗೆ ಚೆನ್ನಾಗಿ ತದುಕಿ ಮುಯ್ಯಿ ತೀರಿಸಿಕೊಳ್ಳುವ ಅವಕಾಶವೂ ಇಲ್ಲ.

-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.