ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕನ ಮಾದರಿ ನಡೆ

Last Updated 6 ಸೆಪ್ಟೆಂಬರ್ 2020, 16:55 IST
ಅಕ್ಷರ ಗಾತ್ರ

‘ನಮ್ಮೂರ ಶಾಲೆ’ ಎಂಬ ಸರ್ಕಾರದ ಫಲಕಗಳಿಗೆ ಜೀವ ತುಂಬುವ ಕೆಲಸಗಳು ಕೆಲವೊಮ್ಮೆ ಶಿಕ್ಷಣ ಕ್ಷೇತ್ರದಲ್ಲಿ ಆಶಾದಾಯಕ ಮತ್ತು ನಿರೀಕ್ಷೆಗೂ ಮೀರಿದ ಬೆಳವಣಿಗೆಯ ಭರವಸೆಯನ್ನು ಮೂಡಿಸುತ್ತವೆ. ಈ ದಿಸೆಯಲ್ಲಿ ತಾವು ವರ್ಗಾವಣೆಗೊಂಡ ಕುಗ್ರಾಮಗಳಲ್ಲಿನ ಶಾಲೆಗಳಲ್ಲಿ ಶೈಕ್ಷಣಿಕ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡು ಕಾಯಕ ಮಾಡುತ್ತಿರುವ ಶಿರಸಿಯ ಶಿಕ್ಷಕ ನಾಗರಾಜ ವಿ. ನಿಲೇಕಣಿಯವರಂಥ ‘ಸಮಾಜಮುಖಿ’ ಮನಸ್ಸಿನವರು ಮೆಚ್ಚುಗೆಗೆ ಅರ್ಹರು (ಪ್ರ.ವಾ., ಸೆ.5). ಊರಿನ ಜನರೂ ಶಿಕ್ಷಕರ ಆಲೋಚನೆಗೆ ‍ಪೂರಕವಾಗಿ ಸಹಕರಿಸಿದ್ದು ವಿಶೇಷ.

ಇಂತಲ್ಲಿಗೆ ವರ್ಗಾವಣೆಗೊಂಡರೆ ಅನುಕೂಲಕರವೆಂದೋ ಅಥವಾ ಅಧಿಕಾರಿಗಳು ಹೇಳಿದ ಕಡೆ ಹೋಗಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯಕ್ಕೋ ಶಿಕ್ಷಕರು ಸಿಲುಕುವುದು ಸಾಮಾನ್ಯ. ಇದಕ್ಕೆ ವಿರುದ್ಧವಾಗಿಕುಗ್ರಾಮಗಳನ್ನೇ ಆಯ್ಕೆ ಮಾಡಿಕೊಂಡು ವರ್ಗಾವಣೆಗೊಂಡು ಅದೂ ‘ನಮ್ಮೂರ ಶಾಲೆ’ ಎಂಬಂತೆಕಾರ್ಯನಿರ್ವಹಿಸುವ ಆಲೋಚನೆ ನಿಜಕ್ಕೂ ಮಾದರಿ ನಡೆ.

ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸುವ ಜವಾಬ್ದಾರಿಯೇ ತಮಗೆ ಸಿಗುವ ನಿಜವಾದ ಪ್ರಶಸ್ತಿ ಎಂಬ ಅವರ ಮಾತು ಕೂಡ, ಶಿಕ್ಷಕ ಸಮುದಾಯದ ನಿಸ್ವಾರ್ಥ ಭಾವನೆಯ ಪ್ರತೀಕ.

-ಡಾ. ಜಿ.ಬೈರೇಗೌಡ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT