ಮಂಗಳವಾರ, ಮೇ 18, 2021
28 °C

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ: ಗುರುವರ್ಗದ ಒತ್ತಡ ತಗ್ಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರ್ಗಾವಣೆ ಪ್ರಕ್ರಿಯೆ ಯಾವಾಗ ಪ್ರಾರಂಭವಾಗುವುದೋ ಎಂದು ಮೂರು ವರ್ಷಗಳಿಂದ ದುಗುಡದಲ್ಲಿದ್ದ ಶಿಕ್ಷಕ ವರ್ಗಕ್ಕೆ, ಈ ಕಾರ್ಯವನ್ನು ಪ್ರಾರಂಭಿಸುವ ಮೂಲಕ ಸರ್ಕಾರ ಆಶಾಭಾವವನ್ನು ಮೂಡಿಸಿದೆ. ಆದರೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಸಮಯಾವಕಾಶ ಕಡಿಮೆ ಇದ್ದು, ದಿನಾಂಕವನ್ನು ವಿಸ್ತರಿಸಬೇಕು ಎಂಬುದು ಶಿಕ್ಷಕ ಸಮೂಹದ ಬೇಡಿಕೆಯಾಗಿದೆ. ರಜೆ ಸಮಸ್ಯೆ, ಟಿಡಿಎಸ್ ಸಮಸ್ಯೆ, ಸರ್ವರ್ ಸಮಸ್ಯೆ... ಹೀಗೆ ಹಲವಾರು ಕಾರಣಗಳಿಂದ ಅರ್ಜಿ ಸಲ್ಲಿಸಲು ತೊಂದರೆಯಾಗುತ್ತಿದೆ. ಹಲವು ವರ್ಷಗಳಿಂದ ಮರೀಚಿಕೆಯಾಗಿದ್ದ ವರ್ಗಾವಣೆ ಪ್ರಕ್ರಿಯೆಯಲ್ಲಿ, ಗುರುವರ್ಗವು ಒತ್ತಡಕ್ಕೆ ಒಳಗಾಗದೆ ಅರ್ಜಿ ಸಲ್ಲಿಸಲು ವ್ಯವಸ್ಥೆ ಕಲ್ಪಿಸಬೇಕು.

–ಜಿ.ಪಿ.ಬಿರಾದಾರ, ದೇವರಹಿಪ್ಪರಗಿ, ವಿಜಯಪುರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು