ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ಪಠ್ಯಕ್ರಮ: ಸಕಾರಾತ್ಮಕ ಚರ್ಚೆಯಾಗಲಿ

Last Updated 30 ಜೂನ್ 2020, 19:30 IST
ಅಕ್ಷರ ಗಾತ್ರ

ಉನ್ನತ ಶಿಕ್ಷಣದಲ್ಲಿ ಏಕರೂಪ ಪಠ್ಯಕ್ರಮವನ್ನು ಜಾರಿಗೊಳಿಸಲು ನಿರ್ಧರಿಸಿದ್ದನ್ನು ನಾನು ಜೂನ್ ಒಂದರಂದು ‘ಪ್ರಜಾವಾಣಿ’ಯಲ್ಲಿ ಬರೆದ ಲೇಖನದಲ್ಲಿ ಪ್ರಸ್ತಾಪಿಸಿ ವಿರೋಧಿಸಿದ್ದೆ. ಆನಂತರ ಕೆಲವು ವಿಶ್ರಾಂತ ಕುಲಪತಿಗಳೂ ಸೇರಿದಂತೆ ಅನೇಕರು ಏಕರೂಪ ಪಠ್ಯಕ್ರಮ ಜಾರಿಯ ನಿರ್ಧಾರವನ್ನು ವಿರೋಧಿಸಿದರು. ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕರು ಜೂನ್ 23ರಂದು ‘ಪ್ರಜಾವಾಣಿ’ಯಲ್ಲೇ ಕೆಲವು ಸ್ಪಷ್ಟನೆ ನೀಡಿದರು. ಆದರೆ ಅವರ ಸ್ಪಷ್ಟನೆಯ ಕೆಲವು ವೈರುಧ್ಯಗಳನ್ನು ಪ್ರಸ್ತಾಪಿಸಿ, ಸ್ಪಷ್ಟ ಸುತ್ತೋಲೆ ಹೊರಡಿಸಬೇಕೆಂದು ಜೂನ್ 25ರಂದು ಬರೆದೆ.

ಈಗ ಒಟ್ಟು ಚರ್ಚೆಗೆ ಮನ್ನಣೆ ಎಂಬಂತೆ, ಕಾರ್ಯನಿರ್ವಾಹಕ ನಿರ್ದೇಶಕರು ತಿದ್ದುಪಡಿ ಸುತ್ತೋಲೆ ಹೊರಡಿಸಿ, ‘ಏಕರೂಪ ಪಠ್ಯಕ್ರಮ’ ಎಂಬುದನ್ನು ಬದಲಾಯಿಸಿ ‘ಮಾದರಿ ಪಠ್ಯಕ್ರಮ’ ಎಂದು ಸ್ಪಷ್ಟಪಡಿಸಿದ್ದಾರೆ. ಅದಕ್ಕಾಗಿ ಧನ್ಯವಾದ ಮತ್ತು ಈ ಮಾದರಿ ಪಠ್ಯಕ್ರಮವು ರೂಪುಗೊಂಡ ಮೇಲೆ ಉನ್ನತ ಶಿಕ್ಷಣದ ಪ್ರಾತಿನಿಧಿಕ ಸಂಸ್ಥೆಗಳು ಮತ್ತು ಪರಿಣತರ ಜೊತೆ ಸಕಾರಾತ್ಮಕ ಚರ್ಚೆಯೂ ಆಗಲಿ.

-ಬರಗೂರು ರಾಮಚಂದ್ರಪ್ಪ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT