24 ವರ್ಷದ ಮಾನಸ ಅವರು, 2020ರಲ್ಲಿ ಫೆಮಿನಾ ಮಿಸ್ ಇಂಡಿಯಾ 2020 ಸ್ಪರ್ಧೆಯ ವಿಜೇತರೂ ಆಗಿದ್ದಾರೆ.
ಪೋರ್ಟೊ ರಿಕೊದಲ್ಲಿ ನಡೆಯಲಿರುವ ವಿಶ್ವ ಸುಂದರಿ ಸ್ಪರ್ಧೆಯ ಫೈನಲ್ ಅನ್ನು ಕೋವಿಡ್ ಕಾರಣದಿಂದ ಮುಂದೂಡಲಾಗಿದೆ.
ಭಾರತದ ಸ್ಪರ್ಧಿ ಮಾನಸ ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿದೆ.
ಮಾನಸ ಅವರು ಹೈದರಾಬಾದ್‌ನ ವಾಸವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದಾರೆ.
ಪುಸ್ತಕ ಓದುವುದು, ಸಂಗೀತ ಕೇಳುವುದು, ಯೋಗ ಹವ್ಯಾಸ ರೂಢಿಸಿಕೊಂಡಿರುವ ಅವರಿಗೆ ಭರತನಾಟ್ಯ ಮತ್ತು ಸಂಗೀತವೆಂದರೆ ಅಚ್ಚುಮೆಚ್ಚು.
ಮಾನಸ ಅವರನ್ನು ಪ್ರಭಾವಿಸಿದ ಪ್ರಮುಖರೆಂದರೆ ಆಕೆಯ ತಾಯಿ ಮತ್ತು ಅಜ್ಜಿ ಎಂಬುದನ್ನು ಮಿಸ್ ಇಂಡಿಯಾ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.
ಫೆಮಿನಾ ಮಿಸ್ ತೆಲಂಗಾಣ 2020 ಮತ್ತು ಫೆಮಿನಾ ಮಿಸ್ ಇಂಡಿಯಾ 2020 ಸ್ಪರ್ಧೆಯಲ್ಲಿ ಅವರು ಗೆಲುವು ದಾಖಲಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.