ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯೂ ಒಂದಾಗಿದೆ. ಈ ಯೋಜನೆ ಮೂಲಕ ಎಲ್ಪಿಜಿ ಸಿಲಿಂಡರ್ಗಳ ಸಂಪರ್ಕವನ್ನು ಒದಗಿಸಲಾಗುತ್ತದೆ. ಈ ಯೋಜನೆಯನ್ನು 2016ರಲ್ಲಿ ಪ್ರಾರಂಭ ಮಾಡಲಾಯಿತು.

ಪ್ರಸ್ತುತ ಪಿಎಂ ಉಜ್ವಲ ಯೋಜನೆಯಡಿ 25 ಲಕ್ಷ ಹೊಸ ಸಿಲಿಂಡರ್ ಸಂಪರ್ಕ ಒದಗಿಸಲು ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಗೆ ₹676 ಕೋಟಿಯನ್ನು ಬಿಡುಗಡೆ ಮಾಡಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಪ್ರತಿ ಸಿಲಿಂಡರ್ ಬಳಕೆದಾರರಿಗೆ ₹300 ಗಳ ಅನುದಾನವನ್ನು ನೀಡಲಾಗುತ್ತದೆ.

ಏನೆಲ್ಲಾ ಸೌಲಭ್ಯ ದೊರೆಯಲಿದೆ?

ಪಿಎಂ ಉಜ್ವಲ ಯೋಜನೆಯಲ್ಲಿ ಫಲಾನುಭವಿಗಲಿಗೆ ಸಿಲಿಂಡರ್, ಅನಿಲ ಒತ್ತಡ ನಿಯಂತ್ರಕ, ಸುರಕ್ಷಾ ಮೃದು ಕೊಳವೆ ಹಾಗೂ ಸ್ಟೌವ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಫಲಾನುಭವಿಗಳಿಗೆ ಮೊದಲ ಸಿಲಿಂಡರ್ ಹಾಗೂ ಸ್ಟೌವ್ಗೆ ಯಾವುದೇ ಶುಲ್ಕವನ್ನು ಪಾವತಿ ಮಾಡುವ ಹಾಗಿಲ್ಲ. ಇದರ ವೆಚ್ಚವನ್ನು ಸರ್ಕಾರವೆ ಭರಿಸುತ್ತದೆ.
.PM Kisan Samman Nidhi: ರೈತರು ವಾರ್ಷಿಕ ₹6000 ಪಡೆಯುವುದು ಹೇಗೆ?.
ಯೋಜನೆ ಪಡೆಯಲು ಇರಬೇಕಾದ ಅರ್ಹತೆಗಳೇನು?

ಬಡ ಕುಟುಂಬಕ್ಕೆ ಸೇರಿದ ಮತ್ತು ಮನೆಯಲ್ಲಿ ಎಲ್ಪಿಜಿ ಸಂಪರ್ಕ ಹೊಂದಿರದ ವಯಸ್ಕ ಮಹಿಳೆ ಅರ್ಹರಾಗಿರುತ್ತಾರೆ.

ಎಸ್ಇಸಿಸಿ 2011 ಪಟ್ಟಿಯ ಪ್ರಕಾರ ಅರ್ಹರಾಗಿರಬೇಕು.

ಎಸ್ಸಿ, ಎಸ್ಟಿ ಕುಟುಂಬಗಳಿಗೆ ಸೇರಿದವರಾಗಿರಬೇಕು.

ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY),

ಅಂತ್ಯೋದಯ ಅನ್ನ ಯೋಜನೆ (AAY),

ಅರಣ್ಯವಾಸಿಗಳು, ಅತ್ಯಂತ ಹಿಂದುಳಿದ ವರ್ಗಗಳು (MBC)

ಬುಡಕಟ್ಟು ಜನಾಂಗದವರು, ನದಿ ದ್ವೀಪಗಳಲ್ಲಿ ವಾಸಿಸುವ ಜನರು ಅರ್ಹರಾಗಿರುತ್ತಾರೆ.

ಅಗತ್ಯ ದಾಖಲೆಗಳು ಯಾವುವು?

ಆಧಾರ್ ಕಾರ್ಡ್

ಪಡಿತರ ಚೀಟಿ

ವಿಳಾಸ ಪುರಾವೆ

ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರ

ಬ್ಯಾಂಕ್ ವಿವರಗಳು

.ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ಸಿಗಲಿದೆ ಹೆಚ್ಚು ಬಡ್ಡಿ: ಹೂಡಿಕೆ ಹೇಗೆ? .
ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಅರ್ಜಿಯನ್ನು ಆನ್ಲೈನ್ ಮೂಲಕ ಯೋಜನೆಯ ಅಧಿಕೃತ ಅಂತರ್ಜಾಲ ತಾಣ https://www.pmuy.gov.in/e-kyc.html ಭೇಟಿ ನೀಡಿ.

ಇಂಡೇನ್, ಭಾರತ್ ಗ್ಯಾಸ್, ಎಚ್ಪಿ ಗ್ಯಾಸ್ ತೈಲ ಕಂಪನಿ ಹೆಸರನ್ನು ಆಯ್ಕೆ ಮಾಡಿ.

ಸಂಪರ್ಕದ ಪ್ರಕಾರವನ್ನು ಆಯ್ಕೆಮಾಡಿ.

ರಾಜ್ಯ, ಜಿಲ್ಲೆ ಮತ್ತು ವಿತರಕರ ಹೆಸರನ್ನು ಆರಿಸಿ.

ಮೊಬೈಲ್ ಸಂಖ್ಯೆ ಹಾಗೂ ಒಟಿಪಿ ನಮೂದಿಸಿ.

ವಲಸೆ ಕುಟುಂಬದವರಾಗಿದ್ದರೆ, ಹೌದು ಅಥವಾ ಇಲ್ಲ ಆಯ್ಕೆ ಮಾಡಿ.

ರೇಷನ್ ಕಾರ್ಡ್ ಮಾಹಿತಿಯನ್ನು ಭರ್ತಿ ಮಾಡಿ

ವರ್ಗವನ್ನು ಆಯ್ಕೆ ಮಾಡಿ.

ಕುಟುಂಬದ ವಿವರ, ವೈಯಕ್ತಿಕ ವಿವರ, ವಿಳಾಸ ಹಾಗೂ ಬ್ಯಾಂಕ್ ವಿವರಗಳನ್ನು ಭರ್ತಿ ಮಾಡಿ. ಗ್ರಾಮೀಣ ಅಥವಾ ನಗರವನ್ನು ಆಯ್ಕೆ ಮಾಡಿ ಅರ್ಜಿಯನ್ನು ಸಲ್ಲಿಸಿ.

ಉಲ್ಲೇಖ ಸಂಖ್ಯೆಯನ್ನು ಪಡೆದುಕೊಂಡು ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.