ಸರ್ಕಾರ ರೈತರಿಗಾಗಿ ರೂಪಿಸಿದ ಯೋಜನೆಗಳಲ್ಲಿ ಕಿಸಾನ್ ವಿಕಾಸ್ ಪತ್ರ (KVP) ಒಂದಾಗಿದೆ. 1988ರಲ್ಲಿ ಈ ಯೋಜನೆಯನ್ನು ಆರಂಭಿಸಲಾಯಿತು. ರೈತರಿಗಾಗಿಯೇ ರೂಪಿಸಲಾಗಿದ್ದ ಈ ಯೋಜನೆಯಲ್ಲಿ ಇಂದು ಎಲ್ಲರೂ ಹೂಡಿಕೆ ಮಾಡಬಹುದು. ಇದು 113(9 ವರ್ಷ 5 ತಿಂಗಳು) ತಿಂಗಳ ಪೂರ್ವನಿಗದಿತ ಯೋಜನೆಯಾಗಿದ್ದು, ಹೂಡಿಕೆಗೆ ವಾರ್ಷಿಕವಾಗಿ ಶೇ 7.5 ರಷ್ಟು ಬಡ್ಡಿಯನ್ನು ಪಡೆಯಬಹುದು. ಈ ಯೋಜನೆಯನ್ನು ಇಂದಿರಾ ವಿಕಾಸ್ ಪತ್ರ ಅಥವಾ ಕಿಸಾನ್ ವಿಕಾಸ್ ಪತ್ರ ಎಂತಲೂ ಕರೆಯಲಾಗುತ್ತದೆ.

ಈ ಯೋಜನೆಯನ್ನು ಪಡೆಯಲು ಇರಬೇಕಾದ ಅರ್ಹತೆಗಳು ಹಾಗೂ ಇಡಬಹುದಾದ ಠೇವಣಿ, ಹಣ ಹಿಂಪಡೆಯಲು ಅನುಸರಿಸಬೇಕಾದ ನಿಯಮಗಳೇನು ಎಂಬ ಮಾಹಿತಿ ಇಲ್ಲಿದೆ.

ಯೋಜನೆ ಪಡೆಯಲು ಬೇಕಾದ ಅರ್ಹತೆಗಳೇನು?

ಭಾರತದ ನಿವಾಸಿಯಾಗಿರಬೇಕು.

ಠೇವಣಿ ಇಡಬಹುದಾದ ಮೊತ್ತ ಎಷ್ಟು?

ಖಾತೆಯ ಮಾಲೀಕತ್ವ ಒಬ್ಬ ವ್ಯಕ್ತಿಗೆ ಮಾತ್ರ ಸೀಮಿತ.

ಕನಿಷ್ಠ ₹1000 ಠೇವಣಿಯೊಂದಿಗೆ ಖಾತೆ ತೆರೆಯಬೇಕು. ಖಾತೆಗೆ ₹100ರ ವೃದ್ಧಿಯಲ್ಲಿ ಮಾತ್ರ ಠೇವಣಿ ಮಾಡಬಹುದು. ಗರಿಷ್ಠ ಹೂಡಿಕೆಗೆ ಮಿತಿಇಲ್ಲ.

ಅವಧಿಪೂರ್ವ ಮುಚ್ಚುವಿಕೆಯ ನಿಯಮಗಳೇನು?

ಖಾತೆದಾರರು ಮರಣ ಹೊಂದಿದರೆ ಖಾತೆಯನ್ನು ಮುಚ್ಚಬಹುದು.

ಉಳಿತಾಯ ಖಾತೆಗೆ ಕಾಲಕಾಲಕ್ಕೆ ಅನ್ವಯವಾಗುವ ದರದಲ್ಲಿ ಲೆಕ್ಕಹಾಕಿದ ಅಸಲು ಮೊತ್ತ ಮತ್ತು ಸರಳ ಬಡ್ಡಿಯನ್ನು ಪಾವತಿಸಲಾಗುತ್ತದೆ.

ಖಾತೆ ವರ್ಗಾವಣೆ ಸಾಧ್ಯವೇ?

ಖಾತೆಯನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಬಹುದು.

ವರ್ಗಾವಣೆ ಪಡೆಯುವವರು ಈ ಯೋಜನೆಯಡಿಯಲ್ಲಿ ಖಾತೆ ತೆರೆಯಲು ಅರ್ಹರಾಗಿರಬೇಕು.

ಠೇವಣಿ ಹಿಂಪಡೆಯುವುದು ಯಾವಾಗ?

ಯೋಜನೆಯ ಅವಧಿಯು ಮುಕ್ತಾಯವಾದ ಬಳಿಕ ಖಾತೆಯಲ್ಲಿ ಹೂಡಿಕೆ ಮಾಡಿದ ಮೊತ್ತವು ದ್ವಿಗುಣವಾಗುತ್ತದೆ.

ಖಾತೆ ತೆರೆಯುವ ಸಮಯದಲ್ಲಿ ಅನ್ವಯವಾಗುವ ಬಡ್ಡಿದರದ ಮೇಲೆ ಠೇವಣಿಯ ಮುಕ್ತಾಯ ಅವಧಿಯನ್ನು ನಿರ್ಧರಿಸಲಾಗುತ್ತದೆ.

ಠೇವಣಿ ಮಾಡಿದ ಪ್ರಮಾಣಪತ್ರದ ಮೇಲೆ ಸಾಲಸೌಲಭ್ಯಗಳನ್ನು ಪಡೆಯಬಹುದಾಗಿದೆ.

ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಹತ್ತಿರವಿರುವ ಅಂಚೆ ಕಚೇರಿಗೆ ಭೇಟಿ ನೀಡಬಹುದು, ಅಥವಾ ಇಲಾಖೆಯ ಅಧಿಕೃತ ಅಂತರ್ಜಾಲ ತಾಣದಲ್ಲಿ ಮಾಹಿತಿಯನ್ನು ಪಡೆಯಬಹುದು.
.ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿದೆ ಆಕರ್ಷಕ ಬಡ್ಡಿ: ಹೂಡಿಕೆ ಮಾಡುವುದು ಹೇಗೆ? .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.