ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಕಡಿತ ಮಾಡಿತು. ಇದರ ಪರಿಣಾಮ ದೇಶದ ವಿವಿಧ ಬ್ಯಾಂಕುಗಳ ಠೇವಣಿ ಮೇಲಿನ ಬಡ್ಡಿದರದಲ್ಲಿ ವ್ಯತ್ಯಾಸವಾಗಲಿದೆ. ಅಂಚೆ ಕಚೇರಿಯ ಯೋಜನೆಗಳಾದ ಸುಕನ್ಯಾ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಸಾರ್ವಜನಿಕ ಭವಿಷ್ಯ ನಿಧಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿದಂತೆ ಹಲವು ಯೋಜನೆಗಳ ಬಡ್ಡಿದರದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಸುಕನ್ಯಾ ಸಮೃದ್ಧಿ ಯೋಜನೆಯು ಕೇಂದ್ರ ಸರ್ಕಾರದ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. 'ಬೇಟೀ ಪಡವೋ ಬೇಟೀ ಬಚಾವೋ' ಯೋಜನೆಯಲ್ಲಿ ಜಾರಿಯಾದ ಇದರ ಮುಖ್ಯ ಉದ್ದೇಶ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಹಣವನ್ನು ಉಳಿತಾಯ ಮಾಡುವುದಾಗಿದೆ. 10 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಹೆಸರಿನಲ್ಲಿ ಪೋಷಕರು ಅಥವಾ ಪಾಲಕರು ಖಾತೆಯನ್ನು ತೆರೆದು ಹಣವನ್ನು ಹೂಡಿಕೆ ಮಾಡಬಹುದು.

ಈ ಯೋಜನೆಯಲ್ಲಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹಣವನ್ನು ಹೂಡಿಕೆ ಮಾಡಿದರೆ ಶೇ 8.2ರಷ್ಟು ಬಡ್ಡಿದರವನ್ನು ವಾರ್ಷಿಕವಾಗಿ ಪಡೆಯಬಹುದಾಗಿದೆ. ಖಾತೆಯನ್ನು ತೆರೆಯಲು ಬೇಕಾದ ದಾಖಾಲೆಗಳು ಹಾಗೂ ಅರ್ಹತೆಗಳೇನು ಎಂಬ ಮಾಹಿತಿ ಇಲ್ಲಿದೆ.

ಹೂಡಿಕೆಗೆ ಬೇಕಾದ ಅರ್ಹತೆಗಳೇನು?

ಭಾರತೀಯ ನಾಗರಿಕನಾಗಿರಬೇಕು.

ಖಾತೆ ತೆರೆಯುವ ದಿನಾಂಕಕ್ಕೆ ಬಾಲಕಿಯ ವಯಸ್ಸು ಹತ್ತು ವರ್ಷ ಮೀರಿರಬಾರದು.

ಈ ಯೋಜನೆಯಡಿಯಲ್ಲಿ ಪ್ರತಿಯೊಬ್ಬ ಖಾತೆದಾರರೂ ಒಂದು ಖಾತೆಯನ್ನು ಮಾತ್ರ ಹೊಂದಿರಲು ಸಾಧ್ಯ.

ಒಂದು ಕುಟುಂಬದಲ್ಲಿ ಗರಿಷ್ಠ ಇಬ್ಬರು ಹೆಣ್ಣು ಮಕ್ಕಳಿಗೆ ಖಾತೆ ತೆರೆಯಬಹುದು.

ಒಂದೇ ಕುಟುಂಬದಲ್ಲಿ ಅವಳಿ/ತ್ರಿವಳಿಗಳ ಜನನವಾದರೇ, ಅವರ ಜನನ ಪ್ರಮಾಣ ಪತ್ರವನ್ನು ಅಫಿಡವಿಟ್ ಮಾಡಿಸಿ ನಂತರ ಎರಡಕ್ಕಿಂತ ಹೆಚ್ಚು ಖಾತೆಗಳನ್ನು ತೆರೆಯಬಹುದು.

ಖಾತೆದಾರನಿಗೆ ಹದಿನೆಂಟು ವರ್ಷ ಪೂರ್ಣಗೊಳ್ಳುವವರೆಗೂ ಖಾತೆಯನ್ನು ಪೋಷಕರು ನಿರ್ವಹಿಸಬೇಕು. ನಂತರ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಖಾತೆಯನ್ನು ಖಾತೆದಾರರೇ ನಿರ್ವಹಿಸಬೇಕು.

ಹೂಡಿಕೆಯ ಠೇವಣಿ ಎಷ್ಟು?

ಕನಿಷ್ಠ ₹250 ರ ಠೇವಣಿಯೊಂದಿಗೆ ಖಾತೆಯನ್ನು ತೆರೆಯಬಹುದು.

ಒಂದು ವರ್ಷದಲ್ಲಿ ಒಟ್ಟು ಮೊತ್ತವನ್ನು ಒಂದೇ ಬಾರಿ ಅಥವಾ ಹಲವು ಕಂತುಗಳಲ್ಲಿ ಠೇವಣಿ ಮಾಡಬಹುದು.

ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ ಠೇವಣಿ ₹250 ಮತ್ತು ಗರಿಷ್ಠ ಠೇವಣಿ ₹1.5 ಲಕ್ಷದವರೆಗೆ ಇಡಬಹುದು.

ಖಾತೆ ತೆರೆದ ದಿನಾಂಕದಿಂದ ಹದಿನೈದು ವರ್ಷಗಳ ಅವಧಿ ಪೂರ್ಣಗೊಳ್ಳುವವರೆಗೆ ಠೇವಣಿ ಇಡಬಹುದು.

ಒಂದು ಹಣಕಾಸು ವರ್ಷದಲ್ಲಿ (FY) ಖಾತೆಯಲ್ಲಿ ಕನಿಷ್ಠ ₹250 ಠೇವಣಿ ಇಲ್ಲದಿದ್ದರೆ, ಆ ಖಾತೆಯನ್ನು ನಿಷ್ಕ್ರಿಯ ಖಾತೆ ಎಂದು ಪರಿಗಣಿಸಲಾಗುತ್ತದೆ.

ನಿಷ್ಕ್ರಿಯವಾಗಿರುವ ಖಾತೆಯನ್ನು ಖಾತೆ ತೆರೆದ ದಿನಾಂಕದಿಂದ ಹದಿನೈದು ವರ್ಷಗಳ ಅವಧಿ ಪೂರ್ಣಗೊಳ್ಳುವವರೆಗೆ ಯಾವುದೇ ಸಮಯದಲ್ಲಿ ಪುನರ್ ಸ್ಥಾಪಿಸಬಹುದು.

ವಾರ್ಷಿಕ ₹50 ದಂಡ ಮತ್ತು ಪ್ರತಿ ವರ್ಷ ಖಾತೆಯಲ್ಲಿ ಇರಬೇಕಿದ್ದ ಕನಿಷ್ಠ ವಾರ್ಷಿಕ ಠೇವಣಿಯನ್ನು ಪಾವತಿಸಬೇಕು.

ಹಿಂಪಡೆಯುವಿಕೆಯ ನಿಯಮಗಳೇನು?

ಖಾತೆ ತೆರೆದು 1 ವರ್ಷ ಪೂರ್ಣವಾದ ಬಳಿಕ ಹಿಂದಿನ ಹಣಕಾಸು ವರ್ಷದ ಕೊನೆಯಲ್ಲಿ ಠೇವಣಿ ಮಾಡಿದ ಅರ್ಧದಷ್ಟು ಹಣವನ್ನು ಶಿಕ್ಷಣದ ಉದ್ದೇಶಕ್ಕಾಗಿ ಹಿಂಪಡೆಯಬಹುದು.(ಶಿಕ್ಷಣಕ್ಕಾಗಿ ಶುಲ್ಕ ಭರಿಸಿದ ರಸೀದಿಯನ್ನು ಸಲ್ಲಿಸಬೇಕು).

ಖಾತೆದಾರರು ಹದಿನೆಂಟು ವರ್ಷ ವಯಸ್ಸನ್ನು ತಲುಪಿದ ಬಳಿಕ ಅಥವಾ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಹಿಂಪಡೆಯುವಿಕೆಯನ್ನು ಅನುಮತಿಸಲಾಗುತ್ತದೆ.

ಹಿಂಪಡೆಯುವಿಕೆಯನ್ನು ಒಂದೇ ಬಾರಿಗೆ ಅಥವಾ ವರ್ಷಕ್ಕೆ ಒಂದು ಬಾರಿಯಂತೆ ಗರಿಷ್ಠ ಐದು ವರ್ಷಗಳವರೆಗೆ ಪಡೆಯಬಹುದು.

ಅವಧಿಪೂರ್ವ ಖಾತೆಯನ್ನು ಮುಚ್ಚಬಹುದೇ?

ಖಾತೆದಾರ ಮೃತಪಟ್ಟರೇ ಮರಣ ಪ್ರಮಾಣಪತ್ರವನ್ನು ಅಂಚೆ ಕಚೇರಿಗೆ ಸಲ್ಲಿಸಬೇಕು. ಖಾತೆದಾರರ ಖಾತೆಯಲ್ಲಿ ಮರಣದವರೆಗೂ ಇರುವ ಠೇವಣಿ ಹಾಗೂ ಬಡ್ಡಿಯನ್ನು ಪೋಷಕರಿಗೆ ನೀಡಿ ಖಾತೆಯನ್ನು ಮುಚ್ಚಬಹುದು. ಖಾತೆ ತೆರೆದ 5 ವರ್ಷಗಳ ನಂತರ ಮಾತ್ರ ಖಾತೆಯನ್ನು ಅವಧಿಪೂರ್ವ ಮುಚ್ಚಬಹುದು.

ಖಾತೆದಾರರು ಗಂಭೀರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿದ್ದರೆ, ತುರ್ತು ವೈದ್ಯಕೀಯ ನೆರವಿಗಾಗಿ ಖಾತೆಯನ್ನು ಅವಧಿಗೆ ಮೊದಲೇ ಕೊನೆಗೊಳಿಸಿ ಹಣ ಹಿಂಪಡೆಯಬಹುದು.

ಖಾತೆಯ ಅವಧಿ ಮುಗಿಯುವುದು ಯಾವಾಗ?

ಖಾತೆ ತೆರೆದ ದಿನದಿಂದ 21 ವರ್ಷ ಪೂರ್ಣಗೊಂಡ ನಂತರ ಖಾತೆಯ ಅವಧಿ ಪೂರ್ಣಗೊಳ್ಳಲಿದೆ.
ಈ 21 ವರ್ಷದೊಳಗೆ ಖಾತೆಯನ್ನು ಮುಕ್ತಾಯಗೊಳಿಸಲು ಸಕಾರಣದೊಂದಿಗೆ ಕೋರಿಕೆ ಸಲ್ಲಿಸುವುದು ಅಗತ್ಯ.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.