ಶುಕ್ರವಾರ, ಫೆಬ್ರವರಿ 26, 2021
18 °C

ಕ್ರಿಕೆಟ್‌ನಲ್ಲಿ ನಮಸ್ಕಾರದ ಕಾಲ!: ಅಜಿಂಕ್ಯ ರಹಾನೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕ್ರಿಕೆಟ್‌ನಲ್ಲಿ ಇನ್ನು ಮುಂದೆ ಹಸ್ತಲಾಘವ ಹಾಗೂ ಹೈಫೈವ್ ಸ್ಥಾನವನ್ನು ನಮಸ್ತೆ ಮತ್ತು ಚಪ್ಪಾಳೆಗಳು ತುಂಬಲಿವೆ ಎಂದು ಭಾರತ ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಹೇಳಿದ್ದಾರೆ.

‘ಕೊರೊನಾ ವೈರಸ್‌ ಹತೋಟಿಗೆ ಬಂದ ನಂತರ ಕ್ರಿಕೆಟ್‌ ವೈಭವ ಮರುಕಳಿಸುವುದು ಖಚಿತ. ಆದರೆ ಮುಂಜಾಗ್ರತೆಗಾಗಿ ಕೆಲವು ಬದಲಾವಣೆಗಳಾಗುವ ಸಾಧ್ಯತೆ ಇದೆ. ಅದರಲ್ಲಿ ಆಟಗಾರರು, ಸಿಬ್ಬಂದಿಯು ಕೈಕುಲುಕುವುದನ್ನು ಬಿಡಬಹುದು. ಎರಡೂ ಕೈಜೋಡಿಸಿ ನಮಸ್ಕಾರ ಮಾಡಿ ಅಭಿನಂದಿಸುವ ರೂಢಿಯಾಗಬಹುದು. ಸಂಭ್ರಮಿಸುವ ಸಂದರ್ಭದಲ್ಲಿ ಪರಸ್ಪರ ಆಟಗಾರರು ತಮ್ಮ ಕೈಗಳನ್ನು ಹೈಫೈವ್ ಮಾಡುವುದನ್ನು ಬಿಟ್ಟು ಚಪ್ಪಾಳೆ ತಟ್ಟುತ್ತಾರೆ’ ಎಂದು ರಹಾನೆ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು