ಬುಧವಾರ, ಮಾರ್ಚ್ 3, 2021
18 °C

ಐತಿಹಾಸಿಕ ಜಯ: ಟೀಂ ಇಂಡಿಯಾ ಆಟಗಾರರಿಗೆ ಥಾರ್ ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

BCCI Twitter

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಅಮೋಘ ಸಾಧನೆ ಪ್ರದರ್ಶಿಸುವ ಮೂಲಕ ದೇಶದ ಕ್ರಿಕೆಟ್ ಪ್ರಿಯರ ಮನಗೆದ್ದಿದೆ.

ನಾಲ್ಕು ಟೆಸ್ಟ್ ಪಂದ್ಯಗಳ ಪೈಕಿ, ಮೂರನೇ ಟೆಸ್ಟ್ ಡ್ರಾ ಆದರೆ, ಉಳಿದ ಮೂರು ಪಂದ್ಯಗಳ ಪೈಕಿ ಭಾರತ ಎರಡನ್ನು ಗೆದ್ದುಕೊಂಡಿದೆ. ಈ ಮೂಲಕ 2-1 ಟೆಸ್ಟ್ ಪಂದ್ಯ ಗೆಲುವು ದಾಖಲಿಸಿದೆ. ಈ ಮೂಲಕ ಟೀಂ ಇಂಡಿಯಾಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ಈ ಮಧ್ಯೆ ದೇಶದ ಪ್ರಮುಖ ಅಟೋಮೊಬೈಲ್ ಮತ್ತು ಉದ್ಯಮ ಸಂಸ್ಥೆ ಮಹೀಂದ್ರಾ ಗ್ರೂಪ್‌ ಅಧ್ಯಕ್ಷ ಆನಂದ್ ಮಹೀಂದ್ರಾ, ಅತ್ಯುತ್ತಮ ನಿರ್ವಹಣೆ ತೋರಿದ 6 ಮಂದಿ ಆಟಗಾರರಿಗೆ ಹೊಸ ಮಹೀಂದ್ರಾ ಥಾರ್ ಎಸ್‌ಯುವಿ ನೀಡುವುದಾಗಿ ಘೋಷಿಸಿದ್ದಾರೆ.

ಯಾರಿಗೆಲ್ಲ ದೊರೆಯಲಿದೆ ಥಾರ್ ಗಿಫ್ಟ್?

ಐತಿಹಾಸಿಕ ಗೆಲುವು ದಾಖಲಿಸಲು ಕಾರಣರಾದ ಶುಭಮಾನ್ ಗಿಲ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಟಿ. ನಟರಾಜನ್, ಸವದೀಪ್ ಸೈನಿ ಮತ್ತು ಶಾರ್ದೂಲ್ ಠಾಕೂರ್‌ಗೆ ಆನಂದ್ ಮಹೀಂದ್ರಾ ಥಾರ್ ಉಡುಗೊರೆ ನೀಡಲಿದ್ದಾರೆ. ಅಲ್ಲದೆ, ಕಂಪನಿಯ ಹಣವಲ್ಲ, ಇದು ನನ್ನ ಸ್ವಂತ ಖಾತೆಯಿಂದ ಭರಿಸುತ್ತಿದ್ದೇನೆ, ದೇಶದ ಯುವಕರಿಗೆ ಈ ಆಟಗಾರರು ಸ್ಫೂರ್ತಿಯಾಗಿದ್ದು, ಕನಸನ್ನು ನನಸು ಮಾಡಲು ಮತ್ತು ಹೊಸದನ್ನು ಸಾ‌ಧಿಸಲು ಇವರು ಮಾದರಿಯಾಗಿದ್ದಾರೆ ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

 

ಟ್ವೀಟ್ ಮೂಲಕ ಘೋಷಿಸಿದ ಆನಂದ್ ಮಹೀಂದ್ರಾ

ವಿಶೇಷ ಉಡುಗೊರೆ ನೀಡುತ್ತಿರುವ ಕುರಿತು ಆನಂದ್ ಮಹೀಂದ್ರಾ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ. ಹೊಸ ಮಹೀಂದ್ರಾ ಥಾರ್ ಎಕ್ಸ್ ಶೋ ರೂಂ. ದರ ₹10 ಲಕ್ಷದಿಂದ ಆರಂಭವಾಗುತ್ತಿದ್ದು, ₹14.5 ಲಕ್ಷ ವರೆಗಿನ ವಿವಿಧ ಆವೃತ್ತಿ ಹೊಂದಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಜಯಿಸಿದ ಟೀಂ ಇಂಡಿಯಾಗೆ ಬಿಸಿಸಿಐ ಕೂಡ ₹5 ಕೋಟಿ ವಿಶೇಷ ಬಹುಮಾನ ಪ್ರಕಟಿಸಿತ್ತು.

ಇದನ್ನೂ ಓದಿ: 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು