ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್​ ನಾಯಕತ್ವ ತ್ಯಜಿಸಿದ ಕೊಹ್ಲಿ ಕುರಿತು ಪತ್ನಿ ಅನುಷ್ಕಾ ಶರ್ಮಾ ಹೇಳಿದ್ದೇನು?

Last Updated 16 ಜನವರಿ 2022, 13:01 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಸ್ಥಾನಕ್ಕೆ ವಿದಾಯ ಹೇಳಿರುವ ವಿರಾಟ್‌ ಕೊಹ್ಲಿ ಅವರ ಬಗ್ಗೆ ಪತ್ನಿ ಅನುಷ್ಕಾ ಶರ್ಮಾ ಅವರು ಭಾವನಾತ್ಮಕ ಪೋಸ್ಟ್‌ವೊಂದನ್ನು ಪ್ರಕಟಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪತಿ ವಿರಾಟ್‌ ಕೊಹ್ಲಿ ಫೋಟೊ ಹಂಚಿಕೊಂಡಿರುವ ಅವರು, ‘2014ರಲ್ಲಿ ಎಂ.ಎಸ್‌.ಧೋನಿ ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಲು ನಿರ್ಧರಿಸಿದ್ದರಿಂದ ನಿಮ್ಮನ್ನು ನಾಯಕನನ್ನಾಗಿ ಮಾಡಲಾಗಿದೆ ಎಂದು ನೀವು ನನಗೆ ಹೇಳಿದ ದಿನ ನೆನಪಿದೆ. ಆ ದಿನದ ನಂತರ ಎಂ.ಎಸ್, ನೀವು ಮತ್ತು ನಾನು ಚಾಟ್ ಮಾಡಿದ್ದು, ‘ಧೋನಿ ಅವರು ನಿಮ್ಮ ಗಡ್ಡವನ್ನು ನೋಡಿ ಎಷ್ಟು ಬೇಗ ಬಿಳಿ ಕೂದಲು ಬರುತ್ತಿದೆ ಎಂದು ತಮಾಷೆ ಮಾಡಿದ್ದು ನನಗಿನ್ನೂ ನೆನಪಿದೆ. ‘ಅಂದಿನಿಂದ ನಿಮ್ಮ ಗಡ್ಡ ಬಿಳಿ ಬಣ್ಣಕ್ಕೆ ತಿರುಗುವುದಕ್ಕಿಂತ ಹೆಚ್ಚಿನದನ್ನು ನಾನು ನೋಡಿದ್ದೇನೆ. ನಾನು ನಿಮ್ಮ ಪ್ರಗತಿಯನ್ನು ಹತ್ತಿರದಿಂದ ಗಮನಿಸಿದ್ದೇನೆ. ನಿಮಗೆ ಭಾರತ ಕ್ರಿಕೆಟ್ ತಂಡದ ನಾಯಕನ ಸ್ಥಾನ ಸಿಕ್ಕಿದ್ದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ’ ಎಂದಿದ್ದಾರೆ.

‘ನಿಮ್ಮ (ಕೊಹ್ಲಿ) ನಾಯಕತ್ವದಲ್ಲಿ ಭಾರತ ತಂಡ ಉತ್ತಮ ಸಾಧನೆ ಮಾಡಿದೆ. ಆದರೆ, ನಿಮ್ಮಲ್ಲಿ ನೀವು ಸಾಧಿಸಿದ ಪ್ರಗತಿಯ ಬಗ್ಗೆ ನನಗೆ ಹೆಚ್ಚು ಹೆಮ್ಮೆ ಅನಿಸುತ್ತದೆ. 2014ರಲ್ಲಿ ಒಳ್ಳೆಯ ಚಿಂತನೆ, ಸಕಾರಾತ್ಮಕ ಮನೋಭಾವ ಜೀವನದಲ್ಲಿ ಮುಂದೆ ಕೊಂಡೊಯ್ಯಬಹುದು ಎಂಬ ಯೋಚನೆಗಳು ನಿಮ್ಮದಾಗಿದ್ದವು. ನೀವು ಎದುರಿಸಿರುವ ಹಲವು ಸವಾಲುಗಳು ಮೈದಾನದಲ್ಲಷ್ಟೇ ಆಗಿರಲಿಲ್ಲ’ ಎಂದಿದ್ದಾರೆ.

ನೀವು ತಂಡವನ್ನು ಉದಾಹರಣೆಯ ಮೂಲಕ ಮುನ್ನಡೆಸಿದ್ದೀರಿ. ಪಂದ್ಯ ಸೋಲಿನ ಬಳಿಕ ನಾನು ನಿಮ್ಮ ಕಣ್ಣುಗಳಲ್ಲಿ ಕಣ್ಣೀರನ್ನು ನೋಡಿ ನಿಮ್ಮ ಪಕ್ಕದಲ್ಲಿ ಕುಳಿತಿದ್ದೇನೆ. ಆದರೆ, ನೀವು ಇನ್ನೂ ಏನಾದರೂ ಮಾಡಬಹುದಿತ್ತೇ ಎಂದು ಆಶ್ಚರ್ಯಪಡಿಸಿದ್ದಿರಿ ಎಂದು ವಿವರಿಸಿದ್ದಾರೆ.

ನೀವು ಪ್ರತಿಯೊಬ್ಬರಿಂದ ನಿರೀಕ್ಷಿಸಿದ್ದು ಇದನ್ನೇ. ನೀವು ನೇರನುಡಿಯ ವ್ಯಕ್ತಿ. ಯಾವಾಗಲೂ ಶುದ್ಧ, ದುರುದ್ದೇಶವಿಲ್ಲದ ಉದ್ದೇಶಗಳನ್ನು ಹೊಂದಿದ್ದವರು. ಆದರೆ, ನಿಮ್ಮನ್ನು ಇತರರು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

‘ನಾನು ಹೇಳಿದಂತೆ, ನಿಮ್ಮ ಕಣ್ಣುಗಳನ್ನು ನೋಡಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವವರು ನಿಜವಾಗಿಯೂ ಧನ್ಯರು. ನೀವು ಪರಿಪೂರ್ಣರಲ್ಲ. ನೀವೂ ಕೂಡ ನ್ಯೂನತೆಗಳನ್ನು ಹೊಂದಿದ್ದೀರಿ. ಆದರೆ, ನೀವು ಅದನ್ನು ಯಾವಾಗ ಮರೆಮಾಚಲು ಪ್ರಯತ್ನಿಸಿದ್ದೀರಿ? ಎಂದು ಪ್ರಶ್ನಿಸಿರುವ ಅನುಷ್ಕಾ, ‘ನೀವು ಕಠಿಣವಾದರೂ ಯಾವಾಗಲೂ ಸರಿಯಾದ ಕೆಲಸವನ್ನೇ ಮಾಡಿದ್ದೀರಿ. ನೀವು ದುರಾಶೆಯಿಂದ ಏನನ್ನೂ ಪಡೆದಿಲ್ಲ. ಈ ಸ್ಥಾನವೂ ಕೂಡ (ನಾಯಕತ್ವ) ಅದು ನನಗೆ ತಿಳಿದಿದೆ. ಏಕೆಂದರೆ ಒಬ್ಬರು ಇನ್ನೊಬ್ಬರನ್ನು ತುಂಬಾ ಬಿಗಿಯಾಗಿ ಹಿಡಿದಾಗ ತಮ್ಮೊಳಗಿನ ಭಾರದ ಮಿತಿಯನ್ನು ಕಡಿಮೆ ಮಾಡಿಕೊಳ್ಳಲು ಯತ್ನಿಸುತ್ತಾರೆ. ನೀವು ನನ್ನನ್ನು ಅಪರಿಮಿತವಾಗಿ ಪ್ರೀತಿಸುತ್ತೀರಿ. ನಿಮ್ಮಈ 7 ವರ್ಷಗಳ ಕಲಿಕೆಯನ್ನು ನಮ್ಮ ಮಗಳು ನಿಮ್ಮೊಳಗೆ ನೋಡುತ್ತಾಳೆ’ ಎಂದು ಬರೆದುಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವು ದಾಖಲಿಸುವ ಸುವರ್ಣಾವಕಾಶವನ್ನು ಕಳೆದುಕೊಂಡ ಬಳಿಕ ವಿರಾಟ್ ಕೊಹ್ಲಿ ಶನಿವಾರ ನಾಯಕತ್ವ ತ್ಯಜಿಸುವುದಾಗಿ ಪ್ರಕಟಿಸಿದ್ದಾರೆ.

ವಿರಾಟ್‌ ಕೊಹ್ಲಿ ಅವರು 68 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. 40 ಪಂದ್ಯಗಳಲ್ಲಿ ಭಾರತ ತಂಡವು ಗೆಲುವು ಸಾಧಿಸಿತ್ತು. 17 ಟೆಸ್ಟ್‌ಗಳಲ್ಲಿ ಪರಾಭವಗೊಂಡಿದ್ದು, 11 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿದ್ದವು.

33 ವರ್ಷದ ವಿರಾಟ್‌ ಕೊಹ್ಲಿ ಎರಡು ತಿಂಗಳ ಹಿಂದೆ ಟಿ–20 ನಾಯಕತ್ವ ತ್ಯಜಿಸಿದ್ದರು. ಇದಾದ ಬಳಿಕ ಏಕದಿನ ತಂಡದ ನಾಯಕತ್ವದಿಂದ ಬಿಸಿಸಿಐ ಅವರನ್ನು ಕೆಳಗಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT