ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) 2024ನೇ ಸಾಲಿನ ವರ್ಷದ ಪುರುಷರ ಟ್ವೆಂಟಿ-20 ಕ್ರಿಕೆಟಿಗ ಪ್ರಶಸ್ತಿಗೆ ಟೀಮ್ ಇಂಡಿಯಾದ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಭಾಜನರಾಗಿದ್ದಾರೆ.

2024ರಲ್ಲಿ ಭಾರತ ತಂಡವು ಅಮೆರಿಕ ಹಾಗೂ ಕೆರೆಬಿಯನ್ ಜಂಟಿ ಆತಿಥ್ಯದಲ್ಲಿ ನಡೆದ ಐಸಿಸಿ ಟ್ವೆಂಟಿ-20 ವಿಶ್ವಕಪ್ ಗೆಲ್ಲುವಲ್ಲಿ ಅರ್ಷದೀಪ್ ಮಹತ್ವದ ಪಾತ್ರ ವಹಿಸಿದ್ದರು.

25 ವರ್ಷದ ಅರ್ಷದೀಪ್, ಕಳೆದ ಸಾಲಿನಲ್ಲಿ ಆಡಿರುವ 18 ಪಂದ್ಯಗಳಲ್ಲಿ ಒಟ್ಟು 36 ವಿಕೆಟ್ಗಳನ್ನು ಗಳಿಸಿದ್ದರು. ಈ ಪೈಕಿ ಟಿ20 ವಿಶ್ವಕಪ್ನಲ್ಲಿ ಎಂಟು ಪಂದ್ಯಗಳಲ್ಲಿ 17 ವಿಕೆಟ್ಗಳನ್ನು ಕಬಳಿಸಿದ್ದರು.

ಪಾಕಿಸ್ತಾನದ ಬಾಬರ್ ಆಜಂ ಹಾಗೂ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಅವರನ್ನು ಹಿಂದಿಕ್ಕಿ ಅರ್ಷದೀಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಐಸಿಸಿ ವರ್ಷದ ಪುರುಷರ ಟಿ20 ಕ್ರಿಕೆಟ್ ತಂಡದಲ್ಲೂ ಅರ್ಷದೀಪ್ ಸಿಂಗ್ ಕಾಣಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ನಾಯಕರಾಗಿದ್ದು, ಹಾರ್ದಿಕ್ ಪಾಂಡ್ಯ ಹಾಗೂ ಜಸ್ಪ್ರೀತ್ ಬೂಮ್ರಾ ಸ್ಥಾನ ಪಡೆದಿದ್ದಾರೆ.
.ಐಸಿಸಿ ವರ್ಷದ ಟಿ20 ತಂಡಕ್ಕೆ ರೋಹಿತ್ ನಾಯಕ; ಭಾರತೀಯರದ್ದೇ ಅಧಿಪತ್ಯ.ರೋಹಿತ್, ಜೈಸ್ವಾಲ್, ರಹಾನೆ..ತಾರೆಯರಿದ್ದ ಮುಂಬೈ ವಿರುದ್ಧ ಜಮ್ಮುವಿಗೆ ಸ್ಮರಣೀಯ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.