ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ashes ನಾಲ್ಕನೇ ಟೆಸ್ಟ್‌: ಮಳೆಯಿಂದ ಪಂದ್ಯಕ್ಕೆ ಅಡ್ಡಿ- ಲಾಬುಷೇನ್ ಶತಕ

Published 22 ಜುಲೈ 2023, 18:17 IST
Last Updated 22 ಜುಲೈ 2023, 18:17 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ ವಿರುದ್ಧ ಸೋಲಿನ ಭೀತಿಯಲ್ಲಿರುವ ಆಸ್ಟ್ರೇಲಿಯಾ ಓಲ್ಡ್‌ ಟ್ರಾಫರ್ಡ್‌ನಲ್ಲಿ ನಡೆಯುತ್ತಿರುವ ಆ್ಯಷಸ್‌ ಸರಣಿಹಯ ನಾಲ್ಕನೇ ಟೆಸ್ಟ್‌ ಪಂದ್ಯವನ್ನು ಉಳಿಸಲು ಹೋರಾಟ ನಡೆಸುತ್ತಿದೆ. ನಾಲ್ಕನೇ ದಿನವಾದ ಶನಿವಾರ ಲಂಚ್‌ ಮೊದಲಿನ ಸಂಪೂರ್ಣ ಅವಧಿ ಮಳೆಗೆ ಕೊಚ್ಚಿಹೋಯಿತು. ಆಟ ಮುಂದುವರಿದ ನಂತರ ಮಾರ್ನಸ್‌ ಲಾಬುಷೇನ್‌ (111) ಶತಕ ಪೂರೈಸಿದರಲ್ಲದೇ, ಮಿಚೆಲ್‌ ಮಾರ್ಷ್ ಪ್ರತಿರೋಧ ಪ್ರದರ್ಶಿಸಿದರು.

ಚಹ ವಿರಾಮದ ವೇಳೆಗೆ ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ಲ್ಲಿ 69 ಓವರುಗಳಲ್ಲಿ 5 ವಿಕೆಟ್‌ಗೆ 214 ರನ್‌ ಗಳಿಸಿದೆ. ಇನಿಂಗ್ಸ್‌ ಸೋಲು ತಪ್ಪಿಸಿಕೊಳ್ಳಲು ಇನ್ನೂ 61 ರನ್‌ ಗಳಿಸಬೇಕಾಗಿದೆ. ಚಹವಿರಾಮದವರೆಗೆ ನಡೆದಿದ್ದು 28 ಓವರುಗಳ ಆಟವಷ್ಟೇ. ಈ ಅವಧಿಯಲ್ಲಿ ಆಸ್ಟ್ರೇಲಿಯಾ ಲಾಬುಷೇನ್‌ ಅವರನ್ನು ಕಳೆದುಕೊಂಡಿತು. ಮಾರ್ಷ್‌ 31 ಮತ್ತು ಗ್ರೀನ್‌ 3 ರನ್‌ ಗಳಿಸಿ ಆಡುತ್ತಿದ್ದರು. ಟೀ ನಂತರ ಎರಡು ಓವರುಗಳ ಆಟವಷ್ಟೇ ಸಾಧ್ಯವಾಗಿದ್ದು, ಮಳೆ ಮತ್ತೆ ಆರಂಭವಾಯಿತು.

ಉತ್ತಮ ಲಯದಲ್ಲಿರುವ ಲಾಬುಷೇನ್ (ಶುಕ್ರವಾರ: ಔಟಾಗದೇ 44) ಐದನೇ ವಿಕೆಟ್‌ಗೆ ಮಾರ್ಷ್‌ ಜೊತೆ 103 ರನ್‌ ಸೇರಿಸಿದರು. 270 ನಿಮಿಷ ಕ್ರೀಸ್‌ನಲ್ಲಿ ಕಳೆದ ಅವರು 173 ಎಸೆತಗಳನ್ನು ಎದುರಿಸಿದ್ದು, ಎರಡು ಸಿಕ್ಸರ್‌, 10 ಬೌಂಡರಿಗಳನ್ನು ಬಾರಿಸಿ ಇಂಗ್ಲೆಂಡ್‌ ಸುಲಭ ವಿಜಯಕ್ಕೆ ಅಡ್ಡಬಂದರು. ಆದರೆ ‘ಚಹ ಕುಡಿಯಲು ಹೋಗುವ’ ಸ್ವಲ್ಪ ಮೊದಲು ಜೋ ರೂಟ್‌ ಅವರಿಗೆ ವಿಕೆಟ್‌ ಕೀಪರ್‌ಗೆ ಕ್ಯಾಚಿತ್ತರು. ಆದರೆ ಇಂಗ್ಲೆಂಡ್‌ ಮನವಿಯನ್ನು ಅಂಪೈರ್‌ ನಿತಿನ್‌ ಮೆನನ್ ಪುರಸ್ಕರಿಸಲಿಲ್ಲ. ರಿವೀವ್‌ನಲ್ಲಿ ಚೆಂಡು ಬ್ಯಾಟಿನಂಚಿಗೆ ತಗುಲಿದ್ದು ಸ್ವ‌ಷ್ಪವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT