ದುಬೈ: ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಭಾರತದ ಮಧ್ಯಮ ವೇಗಿ ಭುವನೇಶ್ವರ್ ಕುಮಾರ್ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬೆಳಗಿದರು.

ಇವರಿಬ್ಬರ ಅಮೋಘ ಆಟದ ನೆರವಿನಿಂದ ಭಾರತಕ್ಕೆ ಪಾಕಿಸ್ತಾನ ಎದುರು ಐದು ವಿಕೆಟ್‌ಗಳ ಜಯ ಲಭಿಸಿತು. ಈ ಮೂಲಕ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ರೋಹಿತ್ ಶರ್ಮ ಬಳಗ ತನ್ನ ಅಭಿಯಾನವನ್ನು ಭರ್ಜರಿಯಾಗಿಯೇ ಆರಂಭಿಸಿತು.

ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ಕುತೂಹಲ ಕೆರಳಿಸಿದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 19.5 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಆಯಿತು. ಭಾರತ 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 148 ರನ್ ಗಳಿಸಿ ಜಯ ಸಾಧಿಸಿತು.

ವಿರಾಟ್ ಕೊಹ್ಲಿ (35), ರವೀಂದ್ರ ಜಡೇಜ (35) ಮತ್ತು ಕೊನೆಯಲ್ಲಿ ಅಬ್ಬರದ ಅಟವಾಡಿದ ಹಾರ್ದಿಕ್ ಪಾಂಡ್ಯ (ಔಟಾಗದೆ 33, 17 ಎ., 4X4, 6X1) ಭಾರತದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.

ರೋಚಕ ಪೈಪೋಟಿ ನಡೆದ ಪಂದ್ಯದ ಕೊನೆಯ ಓವರ್‌ನಲ್ಲಿ ಭಾರತದ ಗೆಲುವಿಗೆ ಏಳು ರನ್‌ಗಳು ಬೇಕಿದ್ದವು. ಮೊಹಮ್ಮದ್ ನವಾಜ್ ಬೌಲ್ ಮಾಡಿದ ಓವರ್‌ನ ಮೊದಲ ಎಸೆತದಲ್ಲಿ ರವೀಂದ್ರ ಜಡೇಜ ಔಟಾದಾಗ ಭಾರತ ಒತ್ತಡಕ್ಕೆ ಒಳಗಾಯಿತು. ಆದರೆ ಹಾರ್ದಿಕ್ ಅವರು ನಾಲ್ಕನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ಗೆಲುವು ತಂದಿತ್ತು, ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಬೌಲಿಂಗ್‌ನಲ್ಲೂ ಮಿಂಚಿದ್ದ ಹಾರ್ದಿಕ್ ಮೂರು ವಿಕೆಟ್ ಪಡೆದಿದ್ದರು.

ಸಾಧಾರಣ ಗುರಿ ಬೆನ್ನಟ್ಟಿದ ಭಾರತದ ಆರಂಭ ಆಘಾತಕಾರಿಯಾಗಿತ್ತು. ಕೆ.ಎಲ್.ರಾಹುಲ್ (0) ಇನಿಂಗ್ಸ್‌ನ ನಾಲ್ಕನೇ ಎಸೆತದಲ್ಲಿ ನಸೀಂ ಶಾ ಅವರಿಗೆ ವಿಕೆಟ್ ಒಪ್ಪಿಸಿದರು. ರೋಹಿತ್ ಶರ್ಮ (12, 18 ಎಸೆತ) ಮತ್ತು ಕೊಹ್ಲಿ ಎರಡನೇ ವಿಕೆಟ್‌ಗೆ 49 ರನ್ ಸೇರಿಸಿದರು. ಆದರೆ ತಡಕಾಡುತ್ತಲೇ ಇದ್ದ ಇವರಿಬ್ಬರು ಮೂರು ರನ್‌ಗಳ ಅಂತರದಲ್ಲಿ ನವಾಜ್‌ಗೆ (33ಕ್ಕೆ 3) ವಿಕೆಟ್ ಒಪ್ಪಿಸಿ ನಿರ್ಗಮಿಸಿದರು.

ಸೂರ್ಯಕುಮಾರ್ ಯಾದವ್ (18) ಔಟಾದಾಗ ಸ್ಕೋರ್ 89 ಆಗಿತ್ತು. ಈ ಹಂತದಲ್ಲಿ ಜತೆಯಾದ ಅನುಭವಿ ಜಡೇಜ ಮತ್ತು ಹಾರ್ದಿಕ್ ಐದನೇ ವಿಕೆಟ್‌ಗೆ 52 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಭುವನೇಶ್ವರ್ ಮಿಂಚು: ಇದಕ್ಕೂ ಮುನ್ನ ಟಾಸ್ ಗೆದ್ದ ಭಾರತ ತಂಡದ ರೋಹಿತ್ ಶರ್ಮಾ ನಿರೀಕ್ಷೆಯಂತೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಜಸ್‌ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ತಮ್ಮ ಹೊಣೆಯರಿತು ಬೌಲಿಂಗ್ ಮಾಡಿದ ಭುವನೇಶ್ವರ್ (26ಕ್ಕೆ 4) ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿಯೇ ಬಾಬರ್ ಆಜಂ ವಿಕೆಟ್ ಗಳಿಸಿದರು.

ಹಾರ್ದಿಕ್ ಪಾಂಡ್ಯ ಹಾಗೂ ಆವೇಶ್ ಖಾನ್ ಜೊತೆಗೂಡಿ ಮಧ್ಯಮಕ್ರಮಾಂಕಕ್ಕೆ ಪೆಟ್ಟುಕೊಟ್ಟರು.ಕ್ರೀಸ್‌ನಲ್ಲಿದ್ದ ರಿಜ್ವಾನ್ ಜೊತೆಗೂಡಿದ ಫಖ್ರ್ ಜಮಾನ್ (10; 6ಎ) ಇನಿಂಗ್ಸ್ ಬೆಳೆಸಲು ಪ್ರಯತ್ನಿಸಿದರು. ಆದರೆ ಆರನೇ ಓವರ್‌ನಲ್ಲಿ ಆವೇಶ್ ಖಾನ್ ಎಸೆತದಲ್ಲಿ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್‌ಗೆ ಕ್ಯಾಚಿತ್ತ ಜಮಾನ್ ನಿರ್ಗಮಿಸಿದರು.

ರಿಜ್ವಾನ್ ಹಾಗೂ ಇಫ್ತಿಕಾರ್ ಅಹಮದ್ (28; 22ಎ) ಮೂರನೇ ವಿಕೆಟ್ ಜೊತೆಯಾಟದಲ್ಲಿ 45 ರನ್ ಸೇರಿಸಿದರು. ಇದರಿಂದಾಗಿ ಇನಿಂಗ್ಸ್ ಚೇತರಿಸಿಕೊಳ್ಳುವಂತೆ ಕಂಡಿತು. ಈ ಹಂತದಲ್ಲಿ ಹಾರ್ದಿಕ್ ತಮ್ಮ ಸ್ವಿಂಗ್ ಅಸ್ತ್ರಗಳ ಮೂಲಕ ಪಾಕ್ ಆಸೆಗೆ ತಣ್ನೀರು ಸುರಿದರು.

13ನೇ ಓವರ್‌ನಲ್ಲಿ ಹಾರ್ದಿಕ್ ಎಸೆತವನ್ನು ಆಡುವ ಪ್ರಯತ್ನದಲ್ಲಿ ಇಫ್ತಿಕಾರ್ ವಿಕೆಟ್‌ಕೀಪರ್ ದಿನೇಶ್‌ಗೆ ಕ್ಯಾಚಿತ್ತರು. ಬರೋಡಾದ ಹಾರ್ದಿಕ್ ತಮ್ಮ ಇನ್ನೊಂದು ಓವರ್‌ನಲ್ಲಿ ರಿಜ್ವಾನ್ (43; 42ಎ) ವಿಕೆಟ್ ಗಳಿಸಿದರು.

ಎರಡನೇ ಸ್ಪೆಲ್ ಆರಂಭಿಸಿದ ಭುವನೇಶ್ವರ್ ಎಸೆತದಲ್ಲಿ ಶಾದಾಬ್ ಖಾನ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ನಂತರದ ಎಸೆತದಲ್ಲಿ ಆಸಿಫ್ ಅಲಿ ಕೂಡ ಔಟಾದರು. ಕೊನೆಯ ಓವರ್‌ನಲ್ಲಿ ನಸೀಂ ಶಾ ಕೂಡ ಭುವಿಯ ವಿಕೆಟ್ ಖಾತೆ ಸೇರಿದರು. ಶಾನವಾಜ್ ದಹಾನಿ ಮಾತ್ರ ಎರಡು ಸಿಕ್ಸರ್ ಹೊಡೆದರು.

ಡಗ್‌ಔಟ್‌ನಲ್ಲಿ ರಾಹುಲ್ ದ್ರಾವಿಡ್

ದುಬೈ: ಕೋವಿಡ್‌ನಿಂದ ಗುಣಮುಖರಾಗಿರುವ ರಾಹುಲ್ ದ್ರಾವಿಡ್ ಭಾನುವಾರದ ಪಂದ್ಯದಲ್ಲಿ ಭಾರತದ ಡಗ್‌ಔಟ್‌ನಲ್ಲಿ ಹಾಜರಿದ್ದರು.

ಒಂದು ವಾರದ ಹಿಂದೆ ಮುಖ್ಯ ಕೋಚ್ ದ್ರಾವಿಡ್‌ಗೆ ಕೋವಿಡ್ ಇರುವುದು ಖಚಿತವಾಗಿತ್ತು. ಆದ್ದರಿಂದ ಅವರು ಪ್ರತ್ಯೇಕವಾಸಕ್ಕೆ ತೆರಳಿದ್ದರು. ಅವರ ಬದಲಿಗೆ ಹಂಗಾಮಿ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಅವರು ತೆರಳಿದ್ದರು. ಭಾರತದ ಮೊದಲ ಪಂದ್ಯದಲ್ಲಿ ದ್ರಾವಿಡ್ ಇರುವುದಿಲ್ಲವೆಂದೂ ಹೇಳಲಾಗಿತ್ತು. ಆದರೆ ಅವರು ಗುಣಮುಖರಾಗಿದ್ದರಿಂದ ತಂಡ ಸೇರಿಕೊಳ್ಳಲು ಅನುಮತಿ ದೊರೆಯಿತು ಎಂದು ಮೂಲಗಳು ತಿಳಿಸಿವೆ.

ಸ್ಕೋರ್ ಕಾರ್ಡ್

ಪಾಕಿಸ್ತಾನ 147 (19.5 ಓವರ್)

ರಿಜ್ವಾನ್ ಸಿ ಆವೇಶ್ ಬಿ ಪಾಂಡ್ಯ 43 (42 ಎ., 4X4, 6X1), ಬಾಬರ್ ಸಿ ಅರ್ಷದೀಪ್ ಬಿ ಭುವನೇಶ್ವರ್ 10 (9 ಎ., 4X2), ಫಖ್ರ್ ಸಿ ಕಾರ್ತಿಕ್ ಬಿ ಆವೇಶ್ 10 (6 ಎ., 4X2), ಇಫ್ತಿಕಾರ್ ಸಿ ಕಾರ್ತಿಕ್ ಬಿ ಪಾಂಡ್ಯ 28 (22 ಎ., 4X2, 6X1), ಖುಷ್‌ದಿಲ್ ಸಿ ಜಡೇಜ ಬಿ ಪಾಂಡ್ಯ 2 (7 ಎ), ಶಾದಾಬ್ ಎಲ್‌ಬಿಡಬ್ಲ್ಯು ಬಿ ಭುವನೇಶ್ವರ್ 10 (9 ಎ., 4X1), ಆಸಿಫ್ ಸಿ ಯಾದವ್ ಬಿ ಭುವನೇಶ್ವರ್ 9 (7 ಎ), ನವಾಜ್ ಸಿ ಕಾರ್ತಿಕ್ ಬಿ ಅರ್ಷದೀಪ್ 1 (3 ಎ), ರವೂಫ್ ಔಟಾಗದೆ 13 (7 ಎ., 4X2), ನಸೀಂ ಎಲ್‌ಬಿಡಬ್ಲ್ಯು ಬಿ ಭುವನೇಶ್ವರ್ 0 (1 ಎ), ದಹಾನಿ ಬಿ ಅರ್ಷದೀಪ್ 16 (6 ಎ., 6X2)

ಇತರೆ 5 (ಬೈ 1, ವೈಡ್ 4)

ವಿಕೆಟ್ ಪತನ: 1–15 (ಬಾಬರ್ ಅಜಂ; 2.4), 2–42 (ಫಖ್ರ್ ಜಮಾನ್; 5.5), 3–87 (ಇಫ್ತಿಕಾರ್ ಅಹಮದ್; 12.1), 4–96 (ಮೊಹಮ್ಮದ್ ರಿಜ್ವಾನ್; 14.1), 5–97 (ಖುಷ್‌ದಿಲ್ ಶಾ; 14.3), 6–112 (ಆಸಿಫ್ ಅಲಿ; 16.3), 7–114 (ಮೊಹಮ್ಮದ್ ನವಾಜ್; 17.1), 8–128 (ಶಾದಾಬ್ ಖಾನ್; 18.2), 9–128 (ನಸೀಂ ಶಾ; 18.3), 10–147 (ಶಾನವಾಜ್ ದಹಾನಿ; 19.5)

ಬೌಲಿಂಗ್: ಭುವನೇಶ್ವರ್ ಕುಮಾರ್ 4–0–26–4, ಅರ್ಷದೀಪ್ ಸಿಂಗ್ 3.5–0–33–2, ಹಾರ್ದಿಕ್ ಪಾಂಡ್ಯ 4–0–25–3, ಆವೇಶ್ ಖಾನ್ 2–0–19–1, ಯಜುವೇಂದ್ರ ಚಾಹಲ್ 4–0–32–1, ರವೀಂದ್ರ ಜಡೇಜ 2–0–11–0

ಭಾರತ 5ಕ್ಕೆ 148 (19.4 ಓವರ್)

ರೋಹಿತ್ ಸಿ ಇಫ್ತಿಕಾರ್ ಬಿ ನವಾಜ್ 12 (18 ಎ., 6X1), ರಾಹುಲ್ ಬಿ ನಸೀಂ 0 (1 ಎ), ಕೊಹ್ಲಿ ಸಿ ಇಫ್ತಿಕಾರ್ ಬಿ ನವಾಜ್ 35 (34 ಎ., 4X3, 6X1), ಜಡೇಜ ಬಿ ನವಾಜ್ 35 (29 ಎ., 4X2, 6X2), ಸೂರ್ಯಕುಮಾರ್ ಬಿ ನಸೀಂ 18 (18 ಎ., 4X1) ಹಾರ್ದಿಕ್ ಔಟಾಗದೆ 33 (17 ಎ., 4X4, 6X1), ಕಾರ್ತಿಕ್ ಔಟಾಗದೆ 1 (1 ಎ)

ಇತರೆ 14 (ಲೆಗ್‌ಬೈ5, ವೈಡ್ 9)

ವಿಕೆಟ್ ಪತನ: 1–1 (ಕೆ.ಎಲ್.ರಾಹುಲ್; 0.2), 2–50 (ರೋಹಿತ್ ಶರ್ಮ; 7.6), 3–53 (ವಿರಾಟ್ ಕೊಹ್ಲಿ; 9.1), 4–89 (ಸೂರ್ಯಕುಮಾರ್ ಯಾದವ್; 14.2), 5–141 (ರವೀಂದ್ರ ಜಡೇಜ; 19.1)

ಬೌಲಿಂಗ್: ನಸೀಂ ಶಾ 4–0–27–2, ಶಾನವಾಜ್ ದಹಾನಿ 4–0–29–0, ಹ್ಯಾರಿಸ್ ರವೂಫ್ 4–0–35–0, ಶಾದಾಬ್ ಖಾನ್ 4–0–19–0, ಮೊಹಮ್ಮದ್ ನವಾಜ್ 3.4–0–33–3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.